ಉಪಾಸನಾ ರವರಿಗೆ ಹುಟ್ಟುಹಬ್ಬದ ಸಂಭ್ರಮ, ಸುಂದರವಾದ ಫ್ಯಾಮಿಲಿ ಪೊಟೋ ವೈರಲ್…!

ನಟಿ ರಾಮ್ ಚರಣ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಉಪಾಸನಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದು, ಅನೇಕ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಈ ಜೋಡಿ ಅನೇಕ ಜೋಡಿಗಳಿಗೆ ಮಾದರಿಯಾಗಿದೆ. ಉಪಾಸನಾ ಹಾಗೂ ರಾಮ್ ಚರಣ್  ಅನ್ಯೋನ್ಯವಾಗಿ ಜೀವನ ನಡೆಸುತ್ತಿದ್ದಾರೆ. ಇನ್ನೂ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷಗಳು ಕಳೆದಿದ್ದು, ಇತ್ತೀಚಿಗಷ್ಟೆ ವಿವಾಹ ವಾರ್ಷಿಕೋತ್ಸವ ತುಂಬಾನೆ ವಿಶೇಷ ಎಂದು ಹೇಳಲಾಗುತ್ತಿದ್ದು, ಇಟಲಿಯಲ್ಲಿ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇಂದು (July 20) ಉಪಾಸನಾ ಹುಟ್ಟುಹಬ್ಬವಾಗಿದ್ದು, ಮೆಗಾ ಕುಟುಂವ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಉಪಾಸನಾ ಕೊಣಿದೆಲಾ ಸಾಮಾಜಿಕ ಕಾರ್ಯಕರ್ತೆಯಾಗಿ ಹಾಗೂ ಅಪೋಲೊ ಆಸ್ಪತ್ರೆಯ ಮ್ಯಾನೆಂಜಿಗ್ ಡೈರೆಕ್ಟರ್‍ ಆಗಿದ್ದಾರೆ. ಮಲ್ಟಿ ಟ್ಯಾಲೆಂಟೆಡ್ ಆದ ಉಪಾಸನಾ ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸದಾ ಆದಿವಾಸಿಗಳು, ಗಿರಿಜನರ ಅಭಿವೃದ್ದಿಗೆ ಅನೇಕ ಕಾರ್ಯಕ್ರಮಗಳನ್ನು ಸಹ ಮಾಡುತ್ತಿದ್ದಾರೆ. ಇನ್ನೂ ಮೇಗಾ ಕುಟುಂಬದ ಸೊಸೆಯಾಗಿ ಆಕೆ ಮನೆಯಲ್ಲೂ ಸಹ ಒಳ್ಳೆಯ ಅಂಕಗಳನ್ನು ಗಳಿಸಿಕೊಂಡಿದ್ದಾರೆ. ಕಳೆದ 1989 ರಲ್ಲಿ ಜನಿಸಿದ ಈಕೆ ಇಂದಿಗೆ 33ನೇ  ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ಬಾರಿ ತನ್ನ ಹುಟ್ಟುಹಬ್ಬವನ್ನು ತನ್ನ ಕುಟುಂಬದ ಜೊತೆಗೆ ಆಚರಿಸಿಕೊಂಡಿದ್ದಾರೆ. ಈ ಬರ್ತ್‌ಡೇ ಪಾರ್ಟಿಯಲ್ಲಿ ಮೆಗಾಸ್ಟಾರ್‍ ಚಿರಂಜೀವಿ, ಚಿರು ಪತ್ನಿ ಸುರೇಖ, ರಾಮಚರಣ್ ಗಳ ಜೊತೆ ಸಂತೋಷದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಇನ್ನೂ ಹುಟ್ಟುಹಬ್ಬದ ಸಂಭ್ರಮವನ್ನು ತುಂಬಾ ಖುಷಿಯಿಂದ ಆಚರಿಸಿಕೊಂಡ ಉಪಾಸನಾ ರವರಿಗೆ ರಾಮ್ ಚರಣ್ ಪ್ರೀತಿಯಿಂದ ಶುಭಾಷಯಗಳನ್ನು ಕೋರಿದ್ದಾರೆ. ಬರ್ತಡೇ ಪಾರ್ಟಿಯ ಪೊಟೋ ಅನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ರಾಮಚರಣ್ ಪ್ರೀತಿಯಿಂದ ಶುಭಾಷಯ ಕೋರಿದ್ದಾರೆ. ಇನ್ನೂ ಈ ಪೊಟೋದಲ್ಲಿ ಮೆಗಾ ಫ್ಯಾಮಿಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ, ಸುರೇಖ, ಚರಣ್ ಹಾಗೂ ಉಪಾಸನಾ ಎಲ್ಲರೂ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಮೆಗಾ ಕುಟುಂಬದ ಅಭಿಮಾನಿ ಬಳಗ ಉಪಾಸನಾ ರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಇನ್ನೂ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಈ ಪ್ರಸ್ತಾಪ ಸದ್ಗುರು ರವರ ಸಂದರ್ಶನದಲ್ಲಿ ಎದುರಾಗಿದೆ. ಈ ವೇಳೆ ಸದ್ಗುರು ಮಕ್ಕಳನ್ನು ಪಡೆಯುವುದಿಲ್ಲ ಎಂದು ನಿರ್ಣಯ ತೆಗೆದುಕೊಂಡವರಿಗೆ ಅವಾರ್ಡ್ ಕೊಡುತ್ತೇನೆ ಎಂದು ಹೇಳಿದ್ದರು. ಇದೀಗ ಉಪಾಸನಾ ಈ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೊಸ್ಟ್ ಆಸಕ್ತಿಕರವಾಗಿದ್ದು, ಎಲ್ಲೆಡೆ ಚರ್ಚೆಯಾಗಿತ್ತು. ಸದ್ಗುರು ನೀವು ನೀಡುವ ಅವಾರ್ಡ್ ನಾನು ಪಡೆದುಕೊಳ್ಳೋಕೆ ನಮ್ಮ ತಾತ ಒಪ್ಪಿಕೊಳ್ಳುತ್ತಿಲ್ಲ ಎಂದು ಉಪಾಸನಾ ಕಾಮೆಂಟ್ ಮಾಡಿದ್ದಾರೆ ಸದ್ಯ ಇದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.

Previous articleಮದುವೆಯಾಗಿ ಎರಡು ತಿಂಗಳು ಕಳೆದಿಲ್ಲ, ಆಗಲೇ ನೋಟಿಸ್ ಗಳು ಪಡೆದುಕೊಂಡ ನಯನ್ ಅಂಡ್ ವಿಕ್ಕಿ…!
Next articleಶೀಘ್ರದಲ್ಲೇ ಎರಡನೇ ಮದುವೆಯಾಗದಲಿದ್ದಾರಂತೆ ಬಾಲಿವುಡ್ ಸ್ಟಾರ್ ನಟ ಹೃತಿಕ್ ರೋಷನ್…!