ಇಟಲಿಯಲ್ಲಿ ಮದುವೆ ವಾರ್ಷಿಕೋತ್ಸವ ಎಂಜಾಯ್ ಮಾಡುತ್ತಿರುವ ರಾಮ್ ಚರಣ್ ಹಾಗೂ ಉಪಾಸನ…!

ಟಾಲಿವುಡ್ ನ ಕ್ಯೂಟ್ ಕಪಲ್ಸ್ ರಾಮ್ ಚರಣ್ ಹಾಗೂ ಉಪಾಸನ ರವರಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಅದರಲ್ಲೂ ಈ ಬಾರಿ ಅವರ ವಿವಾಹ ವಾರ್ಷಿಕೋತ್ಸವ ತುಂಬಾನೆ ವಿಶೇಷ ಎಂದು ಹೇಳಲಾಗುತ್ತಿದೆ. ಈ ಬಾರಿ ಈ ಜೋಡಿ 10ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮದುವೆಯಾದಾಗಿನಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಟಾಲಿವುಡ್ ನಲ್ಲಿ ಬೆಸ್ಟ್ ಕಪಲ್ಸ್ ಆಗಿ ಜೀವನ ಮುಂದುವರೆಸುತ್ತಿದ್ದಾರೆ. ಇನ್ನೂ ಸಮಾಜದ ಬಗ್ಗೆ ಸಹ ಚಿಂತಿಸುವ ಇವರು ತುಂಬಾ ಜವಾಬ್ದಾರಿಯಿಂದ ಅನೇಕರಿಗೆ ಆದರ್ಶಪ್ರಾಯರಾಗಿದ್ದಾರೆ.

ಮೆಗಾ ಕುಟುಂಬದ ಯಂಗ್ ಹಿರೋ ರಾಮ್ ಚರಣ್ ಸಿನೆಮಾಗಳ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುತ್ತಾರೆ. ಮೆಗಾ ಕುಟುಂಬದ ಸೊಸೆಯಾಗಿ ಉಪಾಸನಾ ಅಪೊಲೋ ಆಸ್ಪತ್ರೆಯ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಎಲ್ಲರ ಮನದಲ್ಲಿ ಮನೆ ಮಾಡಿದ್ದಾರೆ.ಇಂದು (ಜೂನ್ 14) ರಾಮ್ ಚರಣ್ ಉಪಾಸನಾ ರವರ ಮದುವೆ ವಾರ್ಷಿಕೋತ್ಸವವಾಗಿದ್ದು, ವಿಶೇವಾಗಿ ಆಚರಿಸಲು ಪ್ಲಾನ್ ಮಾಡಿಕೊಂಡಿದ್ದರು. ಅದರಂತೆ ರಾಮ್ ಚರಣ್ ಹಾಗೂ ಉಪಾಸನಾ ಎಲ್ಲಾ ಕೆಲಸಗಳಿಗೂ ಬ್ರೇಕ್ ಕೊಟ್ಟು ಕೆಲವು ದಿನಗಳ ಹಿಂದೆಯಷ್ಟೆ ಇಟಲಿಗೆ ಪ್ರಯಾಣ ಬೆಳೆಸಿದ್ದರು. ಇನ್ನೂ ಇಟಲಿ ಪ್ರವಾಸದಲ್ಲಿರುವ ರಾಮ್ ಚರಣ್ ಹಾಗೂ ಉಪಾಸನಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಅಲ್ಲಿ ತೆಗೆದುಕೊಂಡ ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುತ್ತಾ ಅಭಿಮಾನಿಗಳಿಗೆ ಸಂತಸ ನೀಡುತ್ತಿದ್ದಾರೆ.  ಅದರಲ್ಲೂ ಇತ್ತೀಚಿಗೆ ಹಂಚಿಕೊಂಡ ಪೊಟೋ ಒಂದು ಇನ್ಸ್ಟಾ ಖಾತೆಯಲ್ಲಿ ಶೇರ್‍ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಾಮ್ ಚರಣ್ ಉಪಾಸನಾ ಶೇರ್‍ ಮಾಡಿದ್ದ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಪೊಟೋದಲ್ಲಿ ರಾಮ್ ಚರಣ್ ಹಾಗೂ ಉಪಾಸನಾ ವೈಟ್ ಬಣ್ಣದ ಡ್ರೆಸ್ ನಲ್ಲಿ ಮಿಂಚುತ್ತಿದ್ದಾರೆ. ಉಪಾಸನಾ ದೊಡ್ಡ ಟೋಪಿಯೊಂದನ್ನು ಧರಿಸಿ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಸಹ ಚಿಕ್ಕದಾದ ಟೋಪಿಯನ್ನು ಹಾಕಿಕೊಂಡಿದ್ದು, ಈ ಪೊಟೋ ಎಲ್ಲರ ಗಮನ ಸೆಳೆಯುತ್ತಿದೆ. ಸುತ್ತಲೂ ಹಸಿರು ಗಿಡಗಳು, ಗಾರ್ಡನ್ ಮಧ್ಯೆ ಈ ಜೋಡಿ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾ ಎಲ್ಲರನ್ನು ಫಿದಾ ಮಾಡಿದ್ದಾರೆ. ಇನ್ನೂ ಈ ಜೋಡಿಯ ಅಭಿಮಾನಿಗಳೂ ಸಹ ದೊಡ್ಡದಾಗಿ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಈ ಸಂಬಂಧ ಅವರ ವೆಡ್ಡಿಂಗ್ ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿ ಶುಭ ಕೋರಿದ್ದಾರೆ. ಇದರ ಜೊತೆಗೆ ಶೀಘ್ರದಲ್ಲೇ ಗುಡ್ ನ್ಯೂಸ್ ಕೊಟ್ಟು, ತಂದೆ ತಾಯಿ ಆಗಿ ಪ್ರಮೋಷನ್ ಪಡೆದುಕೊಳ್ಳಿ ಎಂದು ಕಾಮೆಂಟ್ಸ್ ಮೂಲಕ ಕೋರುತ್ತಿದ್ದಾರೆ.

ಸದ್ಯ ರಾಮ್ ಚರಣ್ RC15 ಸಿನೆಮಾದಲ್ಲಿ ನಟಿಸುತ್ತಿದ್ದು. ಈ ಸಿನೆಮಾ ಕಾಲಿವುಡ್ ಖ್ಯಾತ ನಿರ್ದೇಶಕ ಶಂಕರ್‍ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನೆಮಾವನ್ನು ದಿಲ್ ರಾಜು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಆಕ್ಷನ್ ಪೊಲಿಟಿಕಲ್ ಡ್ರಾಮಾ ಸಿನೆಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೆ ರಾಮ್ ಚರಣ್ ಅಭಿನಿಯಿಸಿದ್ದ RRR ಸಿನೆಮಾ ವರ್ಲ್ಡ್ ವೈಡ್ ಸೂಪರ್‍ ಡೂಪರ್‍ ಹಿಟ್ ಹೊಡೆದಿತ್ತು.

Previous articleರಾಖಿ ಸಾವಂತ್ ಮೇಲೆ ಗಂಭೀರ ಆರೋಪ, ಕಾರು ಕೊಡಿಸಿಲ್ಲ ಎಂದು ಬಿಟ್ಟು ಹೋದ್ರಂತೆ ರಾಖಿ….!
Next articleರಶ್ಮಿಕಾ ತನ್ನ ಬಾಡಿಗಾರ್ಡ್ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ.. ಕಾರಣ ಏನು ಗೊತ್ತಾ?