ಸೌತ್ ಇಂಡಿಯನ್ ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೇ ತನ್ನದೇ ಆದ ಕ್ರೇಜ್ ದಕ್ಕಿಸಿಕೊಂಡ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ಒಬ್ಬರಾಗಿದ್ದಾರೆ. ಸ್ಯಾಂಡಲ್ ವುಡ್ ನ ಗಿಲ್ಲಿ ಎಂಬ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟ ಈಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿ ಅನೇಕ ಹಿಟ್ ಸಿನೆಮಾಗಳನ್ನು ಸಹ ನೀಡಿದ್ದಾರೆ. ಇತ್ತೀಚಿಗೆ ಕೆಲವೊಂದು ಸಿನೆಮಾಗಳಲ್ಲಿ ಆಕೆ ಅಂದುಕೊಂಡಷ್ಟು ಸಕ್ಸಸ್ ಆಗಿಲ್ಲ. ಆದರೂ ರಕುಲ್ ತಮ್ಮ ರೇಂಜ್ ಅನ್ನು ಕಡಿಮೆಯಾಗಿಲ್ಲ. ಇಂದಿಗೂ ಸಹ ಆಕೆ ಟಾಪ್ ನಟಿಯರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ ನಲ್ಲೂ ಸಹ ಟಾಪ್ ನಟರ ಜೊತೆಗೆ ನಟಿಸುವ ಮೂಲಕ ಕ್ರೇಜ್ ಹೆಚ್ಚಿಸಿಕೊಂಡಿದ್ದಾರೆ. ಇದೀಗ ಆಕೆ ತನ್ನ ಮನಸ್ಸಿನ ಕೋರಿಕೆಯೊಂದನ್ನು ಹೊರಹಾಕಿದ್ದಾರೆ.
ಸಿನಿರಂಗದಲ್ಲಿ ಸ್ಟಾರ್ ನಟಿಯಾಗಿ ಮುನ್ನುಗ್ಗುತ್ತಿರುವ ನಟಿ ರಕುಲ್ ಇತ್ತೀಚಿಗಷ್ಟೆ ಬಾಲಿವುಡ್ ನಲ್ಲಿ ಅಜಯ್ ದೇವಗನ್ ಜೊತೆಗೆ ರನ್ ವೇ 34 ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಬಾಲಿವುಡ್ ಸಿನಿರಂಗದಲ್ಲಿ ಬ್ಯುಸಿಯಾಗಿರುವ ಈಕೆ ತೆಲುಗು ಸಿನೆಮಾಗಳಿಗೆ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ ಎನ್ನಲಾಗಿದೆ. ಇನ್ನೂ ಇತ್ತೀಚಿಗೆ ಖಾಸಗಿ ಮಾದ್ಯಮವೊಂದಕ್ಕೆ ರಕುಲ್ ನೀಡಿದ ಸಂದರ್ಶನದಲ್ಲಿ ಆಕೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಕೆಲವೊಂದು ಆಸಕ್ತಿಕರವಾದ ವಿಚಾರಗಳನ್ನು ಹಂಚಿಕೊಂಡಿದ್ದು, ಆಕೆಯ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನೂ ಆಕೆ ಅಂತಹ ಸಿನೆಮಾಗಳಲ್ಲಿ ನಟಿಸಲು ತುಂಬಾ ಇಷ್ಟವಂತೆ. ಆಕೆ ಈಗಾಗಲೇ ತೆಲುಗಿನಲ್ಲಿ ಅನೇಕ ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರೂ ಸಹ ಆಕೆಗೆ ದೊಡ್ಡ ಗಣ್ಯ ವ್ಯಕ್ತಿಗಳ ಬಯೋಪಿಕ್ ಸಿನೆಮಾಗಳಲ್ಲಿ ನಟಿಸುವ ಆಸೆ ಬಹಳಷ್ಟಿದೆಯಂತೆ.
ಇನ್ನೂ ರಕುಲ್ ಗೆ ಬಯೋಪಿಕ್ ಆಧಾರಿತ ಸಿನೆಮಾಗಳ ಜೊತೆಗೆ ಔಟ್ ಅಂಡ್ ಔಟ್ ಲವ್ ಸ್ಟೋರಿಯುಳ್ಳ ಸಿನೆಮಾಗಳಲ್ಲಿ ಸಹ ನಟಿಸಲು ತುಂಬಾನೆ ಇಷ್ಟಪಡುತ್ತಾರಂತೆ. ದಿಲ್ ವಾಲೇ ದುಲ್ವಾನಿಯಾ ಲೆಜಾಯಿಂಗೆ ಯಂತಹ ಸಿನೆಮಾದಲ್ಲಿ ನಟಿಸಲು ತುಂಬಾ ಉತ್ಸುಕಳಾಗಿದ್ದೇನೆ. ಲವ್ ಸ್ಟೋರಿ, ಬಯೋಪಿಕ್ ಗಳ ಕಥನವುಳ್ಳ ಸಿನೆಮಾಗಳಲ್ಲಿ ನಟಿಸಲು ನನಗೆ ತುಂಬಾನೆ ಆಸಕ್ತಿಯಿದೆ. ಈಗಲೂ ಸಹ ನಾನು ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದು ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. ಸದ್ಯ ಆಕೆಯ ಕೋರಿಕೆ ಯಾವಾಗ ಈಡೇರುತ್ತೆ, ಅಂತಹ ಸಿನೆಮಾಗಳಲ್ಲಿ ನಟಿಸುವ ಅವಕಾಶ ಯಾವಾಗ ದೊರೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ರಕುಲ್ ಪ್ರೀತ್ ಕೋರಿಕೆಗೆ ಅಭಿಮಾನಿಗಳೂ ಸಹ ಆಕೆಯ ಕೋರಿಕೆ ಬೇಗ ಈಡೇರಲಿ ಎಂದು ಶುಭ ಕೋರಿದ್ದಾರೆ.
ಇನ್ನೂ ರಕುಲ್ ಟಾಲಿವುಡ್ ನ ಸ್ಟಾರ್ ನಟರಾದ ಮಹೇಶ್ ಬಾಬು, ಎನ್.ಟಿ.ಆರ್, ರಾಮ್ ಚರಣ್, ಅಲ್ಲು ಅರ್ಜುನ್, ರವಿತೇಜ ಮೊದಲಾದವರ ಜೊತೆ ನಟಿಸುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ. ಇನ್ನೂ ರಕುಲ್ ಬಾಲಿವುಡ್ ನಟ ಜಾಖಿ ಭಗ್ನಾನಿ ಎಂಬಾತನೊಂದಿಗೆ ಪ್ರೀತಿಯಲ್ಲಿರುವುದಾಗಿ ಇತ್ತೀಚಿಗಷ್ಟೆ ಘೋಷಣೆ ಮಾಡಿದ್ದರು. ಸೋಷಿಯಲ್ ಮಿಡಿಯಾ ಮೂಲಕವೇ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಣೆ ಮಾಡಿದ್ದರು. ಶೀಘ್ರದಲ್ಲೇ ಈ ಜೋಡಿ ಮದುವೆಯಾಗಲಿದೆ ಎಂದು ಹೇಳಲಾಗುತ್ತಿದೆ.