ಹುಟ್ಟುಹಬ್ಬದ ಸಂಭ್ರಮದಲ್ಲಿ ರಕ್ಷಿತ್ ಶೆಟ್ಟಿ… ಸೆಲೆಬ್ರೆಟಿ ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆ…

ಸ್ಯಾಂಡಲ್ ವುಡ್ ನಲ್ಲಿ ಹೆಚ್ಚು ಸಕ್ಸಸ್ ಹೊಂದುತ್ತಿರುವ ನಟರಲ್ಲಿ ರಕ್ಷಿತ್ ಶೆಟ್ಟಿ ಸಹ ಒಬ್ಬರಾಗಿದ್ದಾರೆ. ನಮ್ ಏರಿಯಾದಲ್ಲಿ ಒಂದು ದಿನ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಈತ ಕಡಿಮೆ ಸಮಯದಲ್ಲೇ ಟಾಪ್ ನಟರಲ್ಲಿ ಒಬ್ಬರಾಗಿಬಿಟ್ಟರು. ಇನ್ನೂ ನಟ ರಕ್ಷಿತ್ ಶೆಟ್ಟಿಯವರ ಮೇಲೆ ಕನ್ನಡಾಭಿಮಾನಿಗಳು ದೊಡ್ಡ ಮಟ್ಟದಲ್ಲೇ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ನಟ ರಕ್ಷಿತ್ ಸಹ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದೇ ಒಳ್ಳೆಯ ಸಿನೆಮಾಗಳನ್ನು ನೀಡುತ್ತಿದ್ದಾರೆ. ಇಂದು (ಜೂನ್ 6) ರಕ್ಷಿತ್ ಶೆಟ್ಟಿ ಹುಟ್ಟುಹಬ್ಬವಾಗಿದ್ದು ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ.

ಇಂದು ರಕ್ಷಿತ್ ಶೆಟ್ಟಿ 39 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ರಕ್ಷಿತ್ ಶೆಟ್ಟಿಯವರಿಗೆ ಈ ಬಾರಿಯ ಹುಟ್ಟುಹಬ್ಬ ತುಂಬಾ ವಿಶೇಷವಾದ ಸಂದರ್ಭವಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನೆಮಾ ಸಹ ಇದೇ ಮಾಹೆಯಲ್ಲಿ ಬಿಡುಗಡೆಯಾಗಲಿದೆ. ಇದೊಂದು ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಜೂನ್ ಮಾಹೆಯ 10 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಇನ್ನೂ ಈಗಾಗಲೇ ಈ ಸಿನೆಮಾ ಪ್ರಮೋಷನ್ ಸಹ ದೊಡ್ಡದಾಗಿಯೇ ಮಾಡುತ್ತಿದ್ದು, ಎಲ್ಲೆಡೆ ಸಿನೆಮಾಗೆ ಉತ್ತಮವಾದ ಅಭಿಪ್ರಾಯ ವ್ಯಕ್ತವಾಗಿದೆ. ರಕ್ಷಿತ್ ಅಭಿನಯಿಸಿದ್ದ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನೆಮಾ ಇದಾಗಿದ್ದು, ರಕ್ಷಿತ್ ಶೆಟ್ಟಿಗೆ ಈ ಹುಟ್ಟುಹಬ್ಬ ವಿಶೇಷವಾಗಿದೆ ಎನ್ನಲಾಗುತ್ತಿದೆ.

ನಟ ರಕ್ಷಿತ್ ಕಳೆದ 1983 ವರ್ಷದಲ್ಲಿ ಜನಿಸಿದರು. ನಟ ರಕ್ಷಿತ್ ಕಿರುಚಿತ್ರಗಳ ಮೂಲಕ ನಟನೆಯನ್ನು ಪ್ರಾರಂಭಿಸಿದ್ದರು. ಜೊತೆಗೆ ನಿರ್ದೇಶನ ಸಹ ಅನೇಕ ಸಿನೆಮಾಗಳಿಗೆ ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಇಂದಿಗೂ ಸಹ ಸ್ಟಾರ್‍ ನಟನಾಗಿ, ಸ್ಟಾರ್‍ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿರವರಿಗೆ ಸೆಲೆಬ್ರೆಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಇನ್ನೂ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಪ್ರೀತಿಯಿಂದ ರಕ್ಷಿತ್ ಶೆಟ್ಟಿಗೆ ಶುಭಾಷಯಗಳನ್ನು ಕೋರಿದ್ದಾರೆ.

ರಕ್ಷಿತ್ ಶೆಟ್ಟಿಗೆ ಟ್ವೀಟ್ ಮೂಲಕ ರಿಷಬ್ ಶೆಟ್ಟಿ ಶುಭಾಷಯಗಳನ್ನು ಕೋರಿದ್ದಾರೆ. ನಮ್ಮೊಳಗೆ ಹುಟ್ಟು ವ ಕನಸುಗಳನ್ನು ನನಸಾಗಿಸುವ ಪ್ರಯತ್ನದಲ್ಲಿ ನಮ್ಮ ಹುಟ್ಟು ಸಾರ್ಥಕವಾಗುತ್ತದೆ. ಪ್ರತಿ ಕ್ಷಣವು ‘ಸಿನಿಮಾ’ದ ಕನಸನ್ನು ಕಂಡು, ಕಾಪಾಡಿ, ಆನಂದಿಸಿ, ಆಚರಿಸುವವನು ನೀನು! ನಿನ್ನೆಲ್ಲಾ ಕನಸುಗಳು ಕೈಗೂಡಲಿ ಮಗಾ. ಚಾರ್ಲಿ ಸಿನಿಮಾದ ಯಶಸ್ಸು, ಪ್ರಶಂಸೆಗಳು ಈ ಹುಟ್ಟಿದಬ್ಬಕ್ಕೆ ಮರೆಯಲಾರದ ಉಡುಗೊರೆಯಾಗಲಿ! ಹ್ಯಾಪಿ ಬರ್ತಡೇ! ಎಂದು ಆತ್ಮೀಯವಾಗಿ ಶುಭಾಷಯಗಳನ್ನು ಕೋರಿದ್ದಾರೆ.

ಅಷ್ಟೇ ಅಲ್ಲದೇ ಟಾಲಿವುಡ್ ಸ್ಟಾರ್‍ ನಟ ರಾಣಾ ದಗ್ಗುಬಾಟಿ ಸಹ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಾಷಯ ಕೋರಿದ್ದಾರೆ. ನಮ್ಮ ಧರ್ಮನಿಗೆ ಆತ್ಮೀಯವಾದ ಹುಟ್ಟುಹಬ್ಬದ ಶುಭಾಷಯಗಳು ಎಂದು ಶುಭ ಕೋರಿದ್ದಾರೆ. ಇನ್ನೂ ಟಾಲಿವುಡ್ ನಲ್ಲಿ 777 ಚಾರ್ಲಿ ಸಿನೆಮಾವನ್ನು ರಾಣಾ ದಗ್ಗುಬಾಟಿಯವರೇ ಪ್ರೆಸೆಂಟ್ ಮಾಡುತ್ತಿರುವುದು ವಿಶೇಷ ಎಂದು ಹೇಳಬಹುದಾಗಿದೆ. ಇನ್ನೂ ರಕ್ಷಿತ್ ಶೆಟ್ಟಿಗೆ ಮತ್ತೊಂದು ಬಿಗ್ ಗಿಫ್ಟ್ ಸಹ ಸಿಗಲಿದೆ. ರಕ್ಷಿತ್ ಶೆಟ್ಟಿ ಅಭಿನಯದ ಸಪ್ತಸಾಗರದಾಚೆ ಎಲ್ಲೋ ಸಿನೆಮಾದ ಟೀಸರ್‍ ಸಹ ಇಂದು ಸಂಜೆ ಬಿಡುಗಡೆಯಾಗಲಿದೆ. ಈ ಮೂಲಕ ರಕ್ಷಿತ್ ಶೆಟ್ಟಿಗೆ ವಿಶೇಷವಾಗಿ ಗಿಫ್ಟ್ ನೀಡಲಿದೆ ಸಪ್ತಸಾಗರದಾಚೆ ಎಲ್ಲೋ ಚಿತ್ರತಂಡ.

Previous articleನಟಿ ಸೋನಾಲ್ ಚೌಹಾನ್ ಹಂಚಿಕೊಂಡ ಪೊಟೋಗಳು ವೈರಲ್….
Next articleಪುಷ್ಪಾ ಸಿನೆಮಾದ ಸ್ವಾಮಿ ಸ್ವಾಮಿ ಹಾಡಿಗೆ ಭರ್ಜರಿಯಾಗಿ ಸ್ಪೆಪ್ಸ್ ಹಾಕಿದ ಬಾಲಿವುಡ್ ನಟಿ.…!