ಹರಿಯಾಣದ ಪಂಚಕುಲ ತಾಊ ದೇವಿಲಾಲ್ ಕ್ರೀಡಾಂಗಣದಲ್ಲಿ ಮಹಿಳೆಯರ ಕುಸ್ತಿಯಲ್ಲಿ ಬಾಗವಹಿಸಿ ರಾಖಿ ಸಾವಂತ್ ರವರು ಸೊಂಟವನ್ನು ಉಳಿಕಿಸಿಕೊಂಡಿದ್ದಾರೆ, ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ರಾಖಿ ಸಾವಂತ್ ಅವರು ಸುಮ್ಮನೆ ಇರದೇ ಮಹಿಳಾ ಕುಸ್ತಿಪಟು ರೋಬೆಲ್ ಅವರೊಡನೆ ಕುಸ್ತಿ ಮಾಡಿ ಈ ಗತಿಗೆ ಬಂದಿದ್ದಾರೆ.
ರಾಖಿ ಸಾವಂತ್ ಭಾನುವಾರ ನಡೆದ ಪಂಚಕುಲದಲ್ಲಿ ನಡೆದ ಸಿಡಬ್ಲ್ಯೂಇ ಕುಸ್ತಿ ಚಾಂಪಿಯನ್ ಶಿಪ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು, ಅಲ್ಲಿ ಗ್ರೇಟ್ ಕಲಿ ಕೂಡ ಕಾರ್ಯಕ್ರಮ ದಲ್ಲಿ ಆಗಮಿಸಿದ್ದರು, ಆ ಸಂದರ್ಭದಲ್ಲಿ ಅಖಾಡಕ್ಕೆ ಧುಮುಕಿದ ಮಹಿಳಾ ಕುಸ್ತಿಪಟು ರೋಬೆಲ್, ನನ್ನನ್ನು ಎದುರಿಸುವ ಯಾರದರೂ ಮಹಿಳೆ ಇದ್ದರೆ ಬನ್ನಿ ಎಂದು ಸವಾಲು ಹಾಕಿದ್ದರೆ. ಈ ಕೆಳಗಿನ ವಿಡಿಯೋ ನೋಡಿರಿ
ಇವಮ್ಮ ಸುಮ್ಮನಿರದೆ ನಾನ್ ನಿನ್ನ ಜೊತೆ ಪಂದ್ಯಕ್ಕೆ ಇಳಿಯುತ್ತೇನೆ ಎಂದು ಸವಾಲು ಮಾಡಿ ದಿಢೀರ್ ಅಂತಾ ಸ್ಟೇಜ್ ಮೇಲೆ ಧುಮುಕಿದ್ದಾಳೆ, ಕುಸ್ತಿ ಆಡುವ ಮೊದಲು ರಾಖಿ ನೀನು ಡ್ಯಾನ್ಸ್ ಮಾಡಬೇಕೆಂದು ಚಾಲೆಂಜ್ ಮಾಡಿದ್ದಾರೆ. ರಾಖಿ ಚಾಲೆಂಜ್ ಸ್ವೀಕರಿಸಿದ ರೋಬೆಲ್ ವೇದಿಕೆಯಲ್ಲಿ ಹಾಕಿದ ಹಾಡಿಗೆ ಹೆಜ್ಜೆಯನ್ನು ಹಾಕಿದರು. ಇತ್ತ ಹಾಡು ಕೊನೆಗೊಳ್ಳುತ್ತಿದ್ದಂತೆ ರೋಬೆಲ್ ಎದುರು ನಿಂತಿದ್ದ ರಾಖಿಯನ್ನು ಭುಜದ ಮೇಲೆ ಎತ್ತಿ ನೆಲಕ್ಕೆ ಅಪ್ಪಳಿಸಿದ್ದಾರೆ.
ನೆಲಕ್ಕೆ ಬಿದ್ದ ಸಾವಂತ್ ಅಲ್ಲೇ ಸ್ವಲ್ಪ ಸಮಯಗಳ ಕಾಲ ನರಳಾಡಿದ್ದಾರೆ. ಆದರೆ ಮೇಲಕ್ಕೆ ಯೇಳಲಾಗದೆ ಕೊನೆಗೆ ಕಾರ್ಯಕ್ರಮ ಆಯೋಜಕರನ್ನು ಸಹಾಯಕ್ಕೆ ಕರೆದು ಆಯೋಜಕರ ಸಹಾಯದಿಂದ ರಾಖಿಯನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ,
ಇದರ ಬಗ್ಗೆ ಮಾತನಾಡಿದ ದಿ ಗ್ರೇಟ್ ಕಲಿ ಅವರು, ರೋಬೆಲ್ ಎತ್ತರದಿಂದ ರಾಖಿಯನ್ನು ಅಪ್ಪಳಿಸಿದ್ದರಿಂದ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಂಡಿದೆ, ಬೆನ್ನಿನ ಭಾಗದಲ್ಲಿ ನೋವುಂಟಾಗಿದ್ದು, ವೈದ್ಯರು ವಿಶ್ರಾಂತಿ ಪಡೆಯಲು ಹೇಳಿದ್ದಾರೆ ಎಂದು ತಿಳಿಸಿದರು.
ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಮರೆಯದೆ ಇದನ್ನು ಶೇರ್ ಮಾಡಿ
