ರಾಖಿ ಸಾವಂತ್ ಮೇಲೆ ಗಂಭೀರ ಆರೋಪ, ಕಾರು ಕೊಡಿಸಿಲ್ಲ ಎಂದು ಬಿಟ್ಟು ಹೋದ್ರಂತೆ ರಾಖಿ….!

ಸದಾ ಕಾಂಟ್ರವರ್ಸಿಗಳಿಂದಲೇ ಸುದ್ದಿಯಾಗುತ್ತಿರುವ ಬಾಲಿವುಡ್ ಹಾಟ್ ಬಾಂ ರಾಖಿ ಸಾವಂತ್ ವಿರುದ್ದ ಅವರ ಮಾಜಿ ಪತಿ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ರಾಖಿ ಸಾವಂತ್ ಇತ್ತೀಚಿಗಷ್ಟೆ ತನ್ನ ಸೋಷಿಯಲ್ ಮಿಡಿಯಾ ಖಾತೆಗಳು ಹ್ಯಾಕ್ ಆಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ರಾಖಿ ಮಾಜಿ ಪತಿ ರಿತೇಶ್ ತನಗೆ ಸೇರಿದ ಸೋಷಿಯಲ್ ಮಿಡಿಯಾ ಖಾತೆಗಳನ್ನು ಹ್ಯಾಕ್ ಮಾಡಿ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಇದೀಗ ರಾಖಿ ಮಾಜಿ ಪತಿ ರಿತೇಶ್ ಸಹ ರಾಖಿ ಮೇಲೆ ಗಂಭೀರವಾದ ಆರೋಪಗಳನ್ನು ಮಾಡಿದ್ದಾರೆ.

ಸದ್ಯ ರಾಖಿ ಕರ್ನಾಟಕ ಮೂಲದ ಆದಿಲ್ ಎಂಬ ಹುಡುಗನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಬಾಯ್ ಪ್ರೆಂಡ್ ಜೊತೆ ರಾಖಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ರಾಖಿ ಮಾಜಿ ಪತಿ ರಿತೇಶ್ ರಾಖಿ ವಿರುದ್ದ ಸೇಡು ತೀರಿಸಿಕೊಳ್ಳು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚಿಗೆ ರಾಖಿ ಮಾಜಿ ಪತಿ ರಿತೇಶ್ ರಾಖಿಯವರ ಸೋಷಿಯಲ್ ಮಿಡಿಯಾ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ನಮ್ಮನ್ನು ಸಂತೋಷವಾಗಿರಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂತಲೂ ಸಹ ದೂರು ನೀಡಿದ್ದರು. ರಿತೇಶ್ ಜೊತೆ ಇದ್ದಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಸಹ ಮಾಡಿದ್ದರು. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ್ದರು ಎಂಬ ಆರೋಪಗಳನ್ನು ಸಹ ಮಾಡಿದ್ದರು. ಆದರೆ ರಿತೇಶ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ರಾಖಿ ಹೊರಿಸಿದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಅಷ್ಟೇ ಅಲ್ಲದೇ  ರಾಖಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

ರಾಖಿ ಮಾಜಿ ಪತಿ ರಿತೇಶ್ ಇತ್ತೀಚಿಗೆ ಮಾದ್ಯಮಗಳೊಂದಿಗೆ ಮಾತನಾಡುತ್ತಾ, ರಾಖಿ ನನ್ನ ಮೇಲೆ ಹೊರಿಸಿರುವಂತಹ ಎಲ್ಲಾ ಆರೋಪಗಳು ಶುದ್ದ ಸುಳ್ಳು. ಆಕೆ ಈಗಲೂ ಸಹ ನನ್ನ ದುಡ್ಡಿನಿಂದಲೇ ಬದುಕುತ್ತಿದ್ದಾಳೆ. ನನ್ನ ಜೊತೆಗ ಇದ್ದಾಗ ರಾಖಿಗೆ ದುಬಾರಿ ಗಿಫ್ಟ್ ಗಳನ್ನು ತಂದು ಕೊಡುತ್ತಿದ್ದೆ. ಆದರೆ ಆಕೆ ನನ್ನನ್ನು ಸುಮಾರು 90 ಲಕ್ಷದ ಕಾರನ್ನು ಕೊಡಿಸಬೇಕೆಂದು ಕೇಳಿದಳು. ಆದರೆ ನಾನು ಕೊಡಿಸಿರಲಿಲ್ಲ. ಈ ಕಾರಣದಿಂದಲೇ ಆಕೆ ನನ್ನನ್ನು ಬಿಟ್ಟು ಹೋಗಿದ್ದಾಳೆ ಎಂದು ಆರೋಪ ಮಾಡಿದ್ದಾರೆ. ಮುಂದುವರೆದು ರಾಖಿಯ ಹೊಸ ಬಾಯ್ ಪ್ರೇಂಡ್ ಆಕೆಗೆ ಕೊಡಿಸಿರುವ ಕಾರು ಸೆಕೆಂಡ್ ಹ್ಯಾಂಡ್ ಆಗಿದೆ. ರಾಖಿ ಈಗಾಗಲೇ ಹೇಳಿದ್ದಾರೆ ನಾವು ಮೂರು ವರ್ಷಗಳು ಒಟ್ಟಿಗೆ ಜೀವಿಸಿಲ್ಲ ಎಂದು ಹಾಗಿರುವಾಗ ದೈಹಿಕ ಹಲ್ಲೆ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇನ್ನೂ ರಾಖಿ ಹೇಳುತ್ತಿರುವುದು ಎಲ್ಲಾ ಸುಳ್ಳುಗಳು, ತಪ್ಪು ಕೆಲಸ ಮಾಡುತ್ತಿದ್ದಾರೆ. ಈ ವಿಚಾರ ಎಲ್ಲರಿಗೂ ಗೊತ್ತಿದ್ದರೂ ಸಹ ಆಕೆಯನ್ನು ಎಲ್ಲರೂ ಯಾತಕ್ಕಾಗಿ ಬೆಂಬಲಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದಿದ್ದಾರೆ.

ಇನ್ನೂ ರಾಖಿಗೆ ಸೇರಿದ ಸೋಷಿಯಲ್ ಮಿಡಿಯಾ ಖಾತೆಗಳನ್ನು ಹ್ಯಾಕ್ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಆದರೆ ನಾನು ಯಾವ ಖಾತೆಯನ್ನು ಹ್ಯಾಕ್ ಮಾಡಿಲ್ಲ, ಅಷ್ಟಕ್ಕೂ ನಾನು ಹ್ಯಾಕರ್‍ ರೀತಿ ಕಾಣಿಸುತ್ತೇನೆಯೇ ನಿವೇ ಹೇಳಿ ಎಂದಿದ್ದಾರೆ. ರಾಖಿ ಈ ಹಿಂದೆ ತನ್ನ ಸೋಷಿಯಲ್ ಮಿಡಿಯಾ ಖಾತೆಗಳ ಪಾಸ್ ವರ್ಡ್‌ಗಳನ್ನು ನೀಡಿದ್ದರು. ಈ ಹಿಂದೆ ಇದೇ ಸಮಸ್ಯೆಯಾಗಿತ್ತು. ಇದೀಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾಳೆ. ಇನ್ನೂ ರಾಖಿ ಸದಾ ತನ್ನ ಸುತ್ತಮುತ್ತಲಿನವರ ಜೊತೆ ಜಗಳವಾಡುತ್ತಾ ದೌರ್ಜನ್ಯ ಮಾಡುತ್ತಾಳೆ ಎಂದು ಆರೋಪ ಮಾಡಿದ್ದಾರೆ.

 

Previous articleಬೆವರಿನಿಂದ ಬೆರತು ಹೋದ ಟವರ್ ಬ್ಯೂಟಿ ಫರಿಯಾ ಅಬ್ದುಲ್ಲಾ…! ಏಕೆ ಗೊತ್ತಾ?
Next articleಇಟಲಿಯಲ್ಲಿ ಮದುವೆ ವಾರ್ಷಿಕೋತ್ಸವ ಎಂಜಾಯ್ ಮಾಡುತ್ತಿರುವ ರಾಮ್ ಚರಣ್ ಹಾಗೂ ಉಪಾಸನ…!