ಮುಂಬೈ ಬೀದಿಗಳಲ್ಲಿ ಕಸ ಆಯುವ ಕೆಲಸ ಮಾಡಿದ ವಿವಾದಿತ ಬ್ಯೂಟಿ ರಾಕಿ ಸಾವಂತ್…!

ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುವ ನಟಿಯರಲ್ಲಿ ಬಾಲಿವುಡ್ ಹಾಟ್ ಬಾಂಬ್ ರಾಕಿ ಸಾವಂತ್ ಸಹ ಒಬ್ಬರಾಗಿದ್ದಾರೆ. ಆಕೆ ಏನೆ ಮಾಡಿದರು ಸುದ್ದಿಯಾಗುತ್ತಾರೆ. ಇತ್ತೀಚಿಗಷ್ಟೆ ಮೈಸೂರಿನ ಯುವಕನೊಂದಿಗೆ ಡೇಟಿಂಗ್ ನಡೆಸುವ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಬಳಿಕ ತನ್ನ ಮಾಜಿ ಪತಿ ರಿತೇಶ್ ತನ್ನ ಸೋಷಿಯಲ್ ಮಿಡಿಯಾ ಖಾತೆಗಳನ್ನುಹ್ಯಾಕ್ ಮಾಡಿದ್ದಾನೆ ಎಂದು ಪೊಲೀಸ್ ಮೆಟ್ಟಲು ಸಹ ಏರಿದ್ದರು. ಇದೀಗ ರಾಕಿ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮುಂಬೈ ಬೀದಿಗಳಲ್ಲಿನ ಕಸವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ಕೆಲವರಿಂದ ಮೆಚ್ಚುಗೆ ಸಹ ವ್ಯಕ್ತವಾಗಿದೆ.

ಕಳೆದ ಕೆಲವು ದಿನಗಳಿಂದ ಮುಂಬೈ ಹಾಗೂ ಕೆಲವೊಂದು ನಗರಗಳಲ್ಲಿ ಭಾರಿ ಮಳೆಯಾಗಿದೆ. ಮುಂಬೈ ನಗರದ ರಸ್ತೆಗಳು ಕಸದಿಂದ ತುಂಬಿಹೋಗಿದೆ. ರಸ್ತೆಗಳನ್ನು ಸ್ವಚ್ಚಗೊಳಿಸಲು ಸಾಧ್ಯವಾಗದಂತಹ ಮಳೆಯಾಗುತ್ತಿತ್ತು. ಆದರೆ ಇದೀಗ ಮಳೆಯ ಅಬ್ಬರ ಕಡಿಮೆಯಾಗಿದೆ. ಆದರೆ ಮುಂಬೈನ ಸ್ಥಳೀಯ ಸಂಸ್ಥೆಗಳು ಮಾತ್ರ ರಸ್ತೆಯಲ್ಲಿನ ಕಸ ತೆಗೆಯಲು ಮುಂದಾಗಿಲ್ಲ. ಇದರಿಂದ ಬೇಸತ್ತ ರಾಕಿ ಸಾವಂತ್ ತಾವೆ ರಸ್ತೆಗಳಿದು ಕಸವನ್ನು ತೆರವುಗೊಳಿಸುವ ಕೆಲಸ ಮಾಡಿದ್ದಾರೆ. ಪ್ರತೀ ನಿತ್ಯ ರಾಕಿ ಜಿಮ್ ಗೆ ಹೋಗುತ್ತಾರೆ. ಆಕೆ ಹೋಗುವ ಜಿಮ್ ರಸ್ತೆಯಲ್ಲಿ ತುಂಬಾನೆ ಕಸ ತುಂಬಿತ್ತು. ಇದನ್ನು ರಾಕಿ ಸಹ ತುಂಬಾ ದಿನಗಳ ಕಾಲ ಗಮನಸಿದ್ದಾರೆ. ಸ್ವಚ್ಚ ಮಾಡುತ್ತಾರೆ ಕಾದು ನೋಡೋಣ ಎಂದು ಇದ್ದ ರಾಕಿ ಸಾವಂತ್ ಗೆ ಬೇಸರ ಬಂದಿದ್ದು, ತಾವೆ ಸಲಾಕೆ ಹಿಡಿದು ಸ್ವಚ್ಚ ಮಾಡಲು ಮುಂದಾಗಿದ್ದಾರೆ. ಇನ್ನೂ ರಸ್ತೆಯಲ್ಲಿನ ಕಸವನ್ನು ತೆಗೆಯುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸದ್ಯ ರಾಕಿ ರಸ್ತೆ ಸ್ವಚ್ಚಗೊಳಿಸುವ ವಿಡಿಯೋ ವೈರಲ್ ಆಗುತ್ತಿದ್ದು, ಇದೇ ವೇಳೆ ಬಿಎಂಸಿ ಸಿಬ್ಬಂದಿ ಹಾಗೂ ಕಮಿಷನರ್‍ ರವರನ್ನು ಸಹ ಹಿಗ್ಗಾಮುಗ್ಗಾ ತರಾಟೆಗೆ ಸಹ ತೆಗೆದುಕೊಂಡಿದ್ದಾರೆ. ಮಳೆಯಿಂದಾಗಿ ರಸ್ತೆಗಳಲ್ಲಿ ಕಸ ತುಂಬಿದ್ದರೇ, ಬಿಎಂಸಿ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದಾರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನೂ ರಾಕಿ ಸಾವಂತ್ ಸ್ವಚ್ಚ ಮಾಡುವ ಮೂಲಕ ಈ ಬಾರಿ ಸುದ್ದಿಯಾಗಿದ್ದಾರೆ. ಇಷ್ಟು ದಿನ ಇತರೆ ವಿಚಾರಗಳಿಗೆ ಸುದ್ದಿ ಹಾಗೂ ಟ್ರೋಲ್ ಆಗುತ್ತಿರುವ ಈಕೆ ಇದೀಗ ಒಳ್ಳೆಯ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಸದಾ ವಿವಾದಗಳ ಮೂಲಕ ಸುದ್ದಿಯಾಗುವ ಈಕೆಯ ಸಾಮಾಜಿಕ ಕಳಕಳಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಮನಸಾರೆ ಹೊಗಳುತ್ತಿದ್ದಾರೆ. ಜೊತೆಗೆ ಇಂತಹ ಕೆಲಸಗಳನ್ನು ಮತಷ್ಟು ಮಾಡಬೇಕು ಎಂದು ಹೇಳುತ್ತಿದ್ದಾರೆ.

ಸದ್ಯ ರಾಕಿ ಕೆಲವು ದಿನಗಳಿಂದ ಮೈಸೂರು ಮೂಲದ ಉದ್ಯಮಿ ಆದಿಲ್ ದುರಾನಿ ಎಂಬುವವರ ಜೊತೆ ಪ್ರೇಮಾಯಣ ನಡೆಸುತ್ತಿದ್ದ ರಾಖಿಗಾಗಿ ಆದಿಲ್ ಈಗಾಗಲೇ ದೊಡ್ಡ ದೊಡ್ಡ ಗಿಫ್ಟ್ ಕೊಟ್ಟಿದ್ದಾನೆ. ರಾಖಿ ತನ್ನ ಸರ್ವಸ್ವ ಎಂದು ಭಾವಿಸಿ ಆಕೆಗೆ ಮದುವೆಗೂ ಮುಂಚೆಯೇ ದುಬಾರಿ ಕಾರು, ಮನೆಯನ್ನು ಸಹ ಖರೀದಿಸಿಕೊಟ್ಟಿದ್ದಾರೆ. ಇನ್ನೂ ಆತನಿಗೋಸ್ಕರ ಆಕೆ ಇನ್ನು ಮುಂದೆ ಎಕ್ಸೋಪೋಸ್ ಮಾಡುವ ಪೊಟೋಗಳನ್ನು, ಬಟ್ಟೆಗಳನ್ನು ಧರಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

Previous articleಒಂದು ಎಪಿಸೋಡ್ ಗೆ ಕಾಜೋಲ್ ತೆಗೆದುಕೊಂಡಿದ್ದು 5 ಕೋಟಿಯಂತೆ…!
Next articleಮದುವೆಯ ಬಗ್ಗೆ ಶಾಕಿಂಗ್ ಹೇಳಿಕೆಗಳನ್ನು ಕೊಟ್ಟ ಮುಂಬೈ ಬ್ಯೂಟಿ ಹನ್ಸಿಕಾ…!