Film News

ಆಸ್ಪತ್ರೆಗೆ ದಾಖಲಾದ ರಜನಿಕಾಂತ್

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟರಲ್ಲೊಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ರವರು ಅನಾರೋಗ್ಯದ ನಿಮಿತ್ತ ಇಂದು (ಡಿ.25) ಬೆಳಿಗ್ಗೆ ಹೈದರಾಬಾದ್ ನಲ್ಲಿನ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಇನ್ನೂ ಅಪೊಲೋ ಆಸ್ಪತ್ರೆಯ ಹೇಳಿಕೆಯಂತೆ ನಟ ಸೂಪರ್ ಸ್ಟಾರ್ ರಜನೀಕಾಂತ್ ರವರ ರಕ್ತದಲ್ಲಿ ಒತ್ತಡ ಏರು-ಪೇರಾದ ಕಾರಣ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ಅವರಿಗೆ ಈಗಾಗಲೇ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ರಜನಿಕಾಂತ್ ರವರಿಗೆ ಡಿ.22 ರಂದೇ ಕೊರೋನಾ ಪರೀಕ್ಷೆಯನ್ನು ಸಹ ಮಾಡಲಾಗಿದ್ದು, ಅವರಿಗೆ ನೆಗೆಟೀವ್ ವರದಿ ಬಂದಿದೆ. ಆದರೂ ಕೂಡ ಅವರು ಐಸೋಲೇಷನ್ ನಲ್ಲಿ ಇದ್ದರು. ಆದರೆ ಇದೀಗ ಅವರ ರಕ್ತದ ಒತ್ತಡದಲ್ಲಿ ಏರು-ಪೇರು ಕಂಡುಬಂದಿರುವ ಕಾರಣ ಅವರನ್ನು ನಿಗಾದಲ್ಲಿಡಲಾಗಿದೆ. ಅವರ ಆರೋಗ್ಯ ಸ್ಥಿರಪಡುವವರೆಗೆ ಆಸ್ಪತ್ರೆಯಲ್ಲಿಯೇ ರಜನಿಕಾಂತ್ ಉಳಿದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಇನ್ನೂ ಅಣ್ಣಾತೆ ಸಿನೆಮಾ ಶೂಟಿಂಗ್ ನಿಮಿತ್ತ ಹೈದರಾಬಾದ್ ಗೆ ರಜನಿಕಾಂತ್ ಹಾಗೂ ಸಿನೆಮಾ ತಂಡ ಬಂದಿದ್ದು, ಶೂಟಿಂಗ್ ಕೆಲಸದಲ್ಲಿ ನಿರತರರಾಗಿದ್ದ ೮ ಮಂದಿಗೆ ಕೊರೋನಾ ಪಾಸಿಟೀವ್ ಬಂದಿರುವುದರಿಂದ ಚಿತ್ರೀಕರಣ ಸಹ ಸ್ಥಗಿತ ಮಾಡಲಾಗಿತ್ತು.

Trending

To Top