ಪುನೀತ್ ರಾಜ್ ಕುಮಾರ್ ರವರಿಗೆ ಕರ್ನಾಟಕ ರತ್ನ ನೀಡಲು ಸೂಪರ್ ಸ್ಟಾರ್ ಗಳು ಬರಲಿದ್ದಾರೆ…!

ಕನ್ನಡ ಸಿನಿರಂಗದ ಮೇರು ನಟ ದಿವಂಗತ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ರವರು ಎಲ್ಲರನ್ನೂ ಅಗಲಿ ಒಂದು ವರ್ಷ ಪೂರ್ಣಗೊಂಡಿದೆ. ಅವರಿಲ್ಲದ ನೋವು ಇನ್ನೂ ಕರುನಾಡಿನ ಜನತೆಯನ್ನು ಬಿಟ್ಟಿಲ್ಲ. ಇನ್ನೂ ಈಗಾಗಲೇ ಕರ್ನಾಟಕ ಸರ್ಕಾರ ಪುನೀತ್ ರಾಜ್ ಕುಮಾರ್‍ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ನವೆಂಬರ್‍ 1 ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇನ್ನೂ ಈ ಪ್ರಶಸ್ತಿ ಕಾರ್ಯಕ್ರಮಕ್ಕೆ ಸಿನಿರಂಗದ ಇಬ್ಬರೂ ಸೂಪರ್‍ ಸ್ಟಾರ್‍ ನಟರು ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.

ನಟ ಅಪ್ಪು ಕೇವಲ ಕನ್ನಡ ಸಿನಿರಂಗದಲ್ಲಿ ಮಾತ್ರವಲ್ಲದೇ ಇಡೀ ದೇಶದಾದ್ಯಂತ ಎಲ್ಲ ಸಿನಿರಂಗಗಳಲ್ಲೂ ಒಳ್ಳೆಯ ಬಾಂದವ್ಯವನ್ನು ಇಟ್ಟುಕೊಂಡಿದ್ದಾರೆ. ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮಕ್ಕೆ ಟಾಲಿವುಡ್ ಸ್ಟಾರ್‍ ನಟ ಯಂಗ್ ಟೈಗರ್‍ ಜೂನಿಯರ್‍ ಎನ್.ಟಿ.ಆರ್‍ ಹಾಗೂ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಆಗಮಿಸಲಿದ್ದಾರೆ. ಈಗಾಗಲೇ ಕರ್ನಾಟಕ ಸರ್ಕಾರ ಇಬ್ಬರೂ ಗಣ್ಯರನ್ನೂ ಸಹ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಇಬ್ಬರೂ ನಟರು ಆಹ್ವಾನ ಸ್ವೀಕರಿಸಿ ಬರಲಿದ್ದಾರಂತೆ. ಇತ್ತೀಚಿಗಷ್ಟೆ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ರಜನಿಕಾಂತ್ ಹಾಗೂ ಜೂನಿಯರ್‍ ಎನ್.ಟಿ.ಆರ್‍ ರವರು ಆಗಮಿಸಲು ಒಪ್ಪಿದ್ದಾರೆ. ಅನುಮತಿ ಪತ್ರವನ್ನು ನೀಡುವುದು ಮಾತ್ರ ಬಾಕಿ ಉಳಿದಿದೆ. ನವೆಂಬರ್‍ 1 ಕನ್ನಡ ರಾಜ್ಯೋತ್ಸವ ದಿನದಂದು ಸಂಜೆ 4 ಗಂಟೆಗೆ ವಿಧಾನಸೌಧ ಮುಂಭಾಗ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಅಪ್ಪು ರವರ ಸ್ಮರಣಾರ್ಥ ಅವರಿಗೆ ಮರಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ಘೋಷಣೆ ಮಾಡಿತ್ತು. ಈ ಪ್ರಶಸ್ತಿಯನ್ನು ಕನ್ನಡ ರಾಜ್ಯೋತ್ಸವ ದಿನದಂದು ನೀಡಲಾಗುತ್ತದೆ ಎಂದಿದ್ದಾರೆ.

ಇನ್ನೂ ಪ್ರತಿಯೊಬ್ಬರೊಂದಿಗೂ ಅಪ್ಪು ತುಂಬಾ ಆತ್ಮೀಯವಾಗಿದ್ದರು. ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪುನೀತ್ ರವರ ನಡುವೆ ಒಳ್ಳೆಯ ಆತ್ಮೀಯತೆ ಇತ್ತು. ಅಪ್ಪು ದೈವಾದೀನರಾದ ಸಮಯದಲ್ಲೂ ಸಹ ಸಿಎಂ ಖುದ್ದು ಎಲ್ಲಾ ಕಾರ್ಯಕ್ರಮಗಳನ್ನು ನೋಡಿಕೊಂಡರು. ಬಳಿಕ ಪುನೀತ್ ರಾಜ್ ಕುಮಾರ್‍ ರವರ ಅನೇಕ ಕಾರ್ಯಕ್ರಮಗಳಲ್ಲೂ ಸಹ ಅವರು ಭಾಗಿಯಾಗಿದ್ದರು. ಇತ್ತೀಚಿಗೆ ನಡೆದ ಪುನೀತಪರ್ವ ಕಾರ್ಯಕ್ರಮದಲ್ಲೂ ಸಹ ಬೊಮ್ಮಾಯಿ ರವರು ಭಾಗವಹಸಿದ್ದರು. ಇದೇ ಕಾರ್ಯಕ್ರಮದಲ್ಲಿ ಅಪ್ಪು ಅಭಿನಯದ ಗಂಧದ ಗುಡಿ ಸಿನೆಮಾಗೆ ತೆರಿಗೆ ವಿನಾಯಿತಿಯನ್ನು ಸಹ ಘೋಷಣೆ ಮಾಡಿದ್ದರು. ಅಪ್ಪು ರವರ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಲು ಸಕಲ ಸಿದ್ದತೆಗಳನ್ನು ಸರ್ಕಾರ ಮಾಡಿಕೊಳ್ಳುತ್ತಿದೆ.

ಇನ್ನೂ ರಜನಿಕಾಂತ್ ರವರು ದೊಡ್ಮನೆ ಕುಟುಂಬಕ್ಕೆ ಒಳ್ಳೆಯ ಆತ್ಮೀಯರಾಗಿದ್ದರು. ಅಪ್ಪು ಮೃತಪಟ್ಟ ಸಮಯದಲ್ಲಿ ತೀವ್ರ ಅನಾರೋಗ್ಯದಿಂದ ರಜನಿಕಾಂತ್ ಆಸ್ಪತ್ರೆಯಲ್ಲಿದ್ದರು. ಆದ್ದರಿಂದ ಅವರು ಅಪ್ಪು ದರ್ಶನಕ್ಕೆ ಬರಲು ಆಗಿರಲಿಲ್ಲ. ಇದೀಗ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅಪ್ಪು ಹಾಗೂ ಜೂನಿಯರ್‍ ಎನ್.ಟಿ.ಆರ್‍ ತುಂಬಾನೆ ಒಳ್ಳೆಯ ಸ್ನೇಹಿತರರು. ಅಪ್ಪು ಸಿನೆಮಾದಲ್ಲಿ ಗೆಳೆಯ ಗೆಳೆಯ ಎಂಬ ಹಾಡನ್ನು ಸಹ ಜೂನಿಯರ್‍ ಎನ್.ಟಿ.ಆರ್‍ ಹಾಡಿದ್ದರು. ಎನ್.ಟಿ.ಆರ್‍ ಬೆಂಗಳೂರಿಗೆ ಬಂದಾಗಲೆಲ್ಲಾ ಅಪ್ಪು ರನ್ನು ಭೇಟಿ ಯಾಗುತ್ತಿದ್ದರು. ಇದೀಗ ಅವರೂ ಸಹ ಗೆಳೆಯನಿಗೆ ಮರಣೋತ್ತರ ಪ್ರಶಸ್ತಿ ನೀಡಲು ಬರಲಿದ್ದಾರೆ ಎನ್ನಲಾಗಿದೆ.

Previous articleಆಧ್ಯಾತ್ಮಿಕತೆಯತ್ತ ವಾಲಿದ ಬೋಲ್ಡ್ ಬ್ಯೂಟಿ ಪಾಯಲ್, ವೈರಲ್ ಆದ ಪೊಟೋಸ್….!
Next articleಪ್ಯಾಂಟ್ ಲೆಸ್ ಆಗಿ ಥಂಡರ್ ಥೈಸ್ ಶೋ ಮಾಡುತ್ತಾ, ಬೀಚ್ ನಲ್ಲಿ ಟೆಂಪ್ಟಿಂಗ್ ಪೋಸ್ ಕೊಟ್ಟ ಬ್ಯೂಟಿ ರಶ್ಮಿಕಾ…!