ರಿವೀಲ್ ಆಯ್ತು ಶಿವಣ್ಣ ರಜನಿ ಕಾಂತ್ ಸಿನೆಮಾದ ಟೈಟಲ್.. ಟೈಟಲ್ ಫಸ್ಟ್ ಲುಕ್ ಟ್ರೆಂಡಿಂಗ್….!

ಕಾಲಿವುಡ್ ಸೂಪರ್‍ ಸ್ಟಾರ್‍ ರಜನೀಕಾಂತ್ ಹಾಗೂ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್‍ ಕಾಂಬಿನೇಷನ್ ನಲ್ಲಿ ಬಹುನಿರೀಕ್ಷಿತ ಸಿನೆಮಾ ಈಗಾಗಲೇ ಸಿನಿರಂಗದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಈ ಸಿನೆಮಾದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ಸಹ ಕಾಣಿಸಿಕೊಳ್ಳಲಿದ್ದು ಸಿನೆಮಾ ಮೇಲೆ ಮತಷ್ಟು ನಿರೀಕ್ಷೆ ಹುಟ್ಟಿಸಿದೆ.

#Thalaivar169 ಎಂಬ ವರ್ಕಿಂಗ್ ಟೈಟಲ್ ನಲ್ಲಿ ಈ ಸಿನೆಮಾವನ್ನು ಈಗಾಗಲೇ ಘೋಷಣೆ ಮಾಡಲಾಗಿತ್ತು. ಈ ಸಿನೆಮಾವನ್ನು ಸನ್ ಪಿಕ್ಚರ್ಸ್ ಸಿನೆಮಾವನ್ನು ನಿರ್ಮಾಣ ಮಾಡಲಿದೆ. ಸದ್ಯ ಸಿನಿತಂಡ ಸಿನೆಮಾದ ಅಧಿಕೃತ ಟೈಟಲ್ ಅನ್ನು ರಿವೀಲ್ ಮಾಡಿದ್ದಾರೆ. ಇನ್ನೂ ಈ ಸಿನೆಮಾಗೆ ಜೈಲರ್‍ ಎಂಬ ಟೈಟಲ್ ಫೈನಲ್ ಮಾಡಿದ್ದು, ಟೈಟಲ್ ಪೋಸ್ಟರ್‍ ಸಹ ಬಿಡುಗಡೆ ಮಾಡಿದೆ. ಇನ್ನೂ ಈ ಪೋಸ್ಟರ್‍ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ. ರಜನಿಕಾಂತ್ ರವರ 169 ನೇ ಸಿನೆಮಾ ಇದಾಗಿದ್ದು, ಸನ್ ಪಿಕ್ಚರ್ಸ್ ಈ ಸಿನೆಮಾವನ್ನು ದೊಡ್ಡ ಮಟ್ಟಡಲ್ಲಿ ನಿರ್ಮಾಣ ಮಾಡಲು ಪಕ್ಕ ಪ್ಲಾನ್ ಮಾಡಿದೆ. ಇನ್ನೂ ಬಿಡುಗಡೆಯಾದ ಟೈಟಲ್ ಪೋಸ್ಟರ್‍ ನಲ್ಲಿ ರಕ್ತದಿಂದ ಕೂಡಿದ ಒಂದು ದೊಡ್ಡ ಕತ್ತಿಯನ್ನು ನೇತಾಡಲಾಗಿದೆ. ಸದ್ಯ ಈ ಪೊಸ್ಟರ್‍ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಪೋಸ್ಟರ್‍ ನಲ್ಲಿ ಗನಿಸಿದರೇ ನಟ ರಜನಿಕಾಂತ್ ಈ ಸಿನೆಮಾದಲ್ಲಿ ಜೈಲರ್‍ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ನಿರ್ದೇಶಕ ನೆಲ್ಸನ್ ವಿಭಿನ್ನ ರೀತಿಯಲ್ಲಿ ಸಿನೆಮಾಗಳನ್ನು ನಿರ್ದೇಶನ ಮಾಡುತ್ತಿರುತ್ತಾರೆ. ಅದೇ ರೀತಿ ಈ ಜೈಲರ್‍ ಸಿನೆಮಾವನ್ನು ಸಹ ದೊಡ್ಡ ಪ್ಲಾನ್ ನೊಂದಿಗೆ ನೆಲ್ಸನ್ ಮುಂದಾಗಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್‍ ಗಳನ್ನು ತೆರೆಯ ಮೇಲೆ ತೋರಿಸಲಿದ್ದಾರೆ. ಇನ್ನೂ ಈ ಸಿನೆಮಾಗೆ ಸಂಗೀತ ನಿರ್ದೇಶನ ಮಾಡಲು ರಾಕ್ ಸ್ಟಾರ್‍ ಅನಿರುದ್ ರವಿಚಂದ್ರನ್ ಮಾಡಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಈ ಸಿನೆಮಾದಲ್ಲಿ ರಜನಿಕಾಂತ್ ಗೆ ಜೋಡಿಯಾಗಿ ಮಾಜಿ ವಿಶ್ವಸುಂದರಿ ಖ್ಯಾತ ನಟಿ ಐಶ್ವರ್ಯ ರೈ ಬಣ್ಣ ಹಚ್ಚಲಿದ್ದಾರೆ ಎಂಬ ಮಾತುಗಳು ಬಲವಾಗಿಯೇ ಕೇಳಿಬರುತ್ತಿದ್ದು. ಶೀಘ್ರದಲ್ಲೇ ಈ ಕುರಿತು ಅಧಿಕೃತವಾಗಿ ಚಿತ್ರತಂಡ ಘೋಷಣೆ ಮಾಡಲಿದೆ.

ಕೊಕೊ ಕೋಕಿಲ ಹಾಗೂ ಡಾಕ್ಟರ್‍ ವರುಣ್ ಮೊದಲಾದ ಸಿನೆಮಾಗಳ ಮೂಲಕ ಕಡಿಮೆ ಸಮಯದಲ್ಲೇ ದೊಡ್ಡ ಕ್ರೇಜ್ ಪಡೆದುಕೊಂಡ ಡೈರೆಕ್ಟರ್‍ ನೆಲ್ಸನ್ ದಿಲೀಪ್ ನಿರ್ದೇಶನ ಮಾಡಿದ ಬೀಸ್ಟ್ ಸಿನೆಮಾ ಮಾತ್ರ ನಿರೀಕ್ಷೆ ಹುಸಿ ಮಾಡಿತ್ತು. ಆದರೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಇದೀಗ ಸೂಪರ್‍ ಸ್ಟಾರ್‍ ರಜನಿಕಾಂತ್ ಸಿನೆಮಾದ ಮೂಲಕ ದೊಡ್ಡ ಸಕ್ಸಸ್ ಮಾಡಲು ಹೊರಟಿದ್ದಾರೆ. ಈ ಸಿನೆಮಾಗೆ ಸನ್ ಪಿಕ್ಚರ್ಸ್ ನಿರ್ಮಾಣ ಮಾಡಲಿದ್ದು, ಜುಲೈ ಅಥವಾ ಆಗಸ್ಟ್ ನಲ್ಲಿ ಸಿನೆಮಾ ಶೂಟಿಂಗ್ ಪ್ರಾರಂಭವಾಗಲಿದೆ.

Previous articleಅಬ್ಬಬ್ಬಾ ಈಶಾ ರೆಬ್ಬಾ ಸೆಲ್ಫಿ ವಿಡಿಯೋಗೆ ಬಿದ್ದುಹೋದ ಅಭಿಮಾನಿಗಳು… ಶರ್ಟ್ ಬಿಚ್ಚಿ ಹಾಟ್ ಪೋಸ್…!
Next articleಸೋಷಿಯಲ್ ಮಿಡಿಯಾದಲ್ಲಿ ನಿಹಾರಿಕಾ ಮಾಡಿದ ಕಾಮೆಂಟ್ಸ್ ಸಿಕ್ಕಾಪಟ್ಟೆ ವೈರಲ್……!