Film News

ಸೂಪರ್ ಸ್ಟಾರ್ ರಾಜಕೀಯ ಎಂಟ್ರಿ ಫಿಕ್ಸ್! ಜನವರಿಯಲ್ಲಿ ಪಕ್ಷ ಲಾಂಚ್

ಚೆನೈ: ಖ್ಯಾತ ಕಾಲಿವುಡ್ ರಂಗದಲ್ಲಿ ಅಗ್ರಜ ಸ್ಥಾನ ಪಡೆದಿರುವ ಸೂಪರ್‌ಸ್ಟಾರ್ ರಜನಿಕಾಂತ್ ರವರು ರಾಜಕೀಯಕ್ಕೆ ಎಂಟ್ರಿ ನೀಡುವುದು ಬಹುತೇಕ ಖಚಿತವಾಗಿದ್ದು, ಈ ಕುರಿತು ಡಿ.೩೧ ರಂದು ಘೋಷಣೆ ಮಾಡಲಿದ್ದು, ಜನವರಿ ಪಕ್ಷವನ್ನು ಲಾಂಚ್ ಮಾಡಲಿದ್ದೇನೆ ಎಂದು ತಮ್ಮ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.

ರಜನೀಕಾಂತ್ ರವರ ರಾಜಕೀಯ ಎಂಟ್ರಿ ಕುರಿತು ಇಡೀ ದೇಶದಲ್ಲಿಯೇ ಚರ್ಚೆ ನಡೆಯುತ್ತಿದ್ದು, ಪ್ರಸ್ತುತ ರಜನಿಯವರೇ ಈ ಕುರಿತು ಸ್ವಷ್ಟಪಡಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಜನರ ಬೆಂಬಲದಿಂದ ಬರುವ ಚುನಾವಣೆಯಲ್ಲಿ ದೊಡ್ಡ ಗೆಲುವು ಸಾಧಿಸುತ್ತೇನೆ. ತಮಿಳುನಾಡಿನಲ್ಲಿ ಉತ್ತಮ ಆಡಳಿತ ಹಾಗೂ ಯಾವುದೇ ಜಾತಿ-ಧರ್ಮಗಳ ಭೇಧವಿಲ್ಲದೆ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಪಕ್ಷ ನಮ್ಮದಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಇನ್ನೂ ಕೆಲವು ತಿಂಗಳುಗಳ ಹಿಂದೆ ರಜನಿ ಮಕ್ಕಳ್ ಮಂಡ್ರಮ್ ಸಂಘಟನೆಯ ಪ್ರಮುಖ ಮುಖಂಡರದ ಜೊತೆ ರಜನಿಕಾಂತ್ ಸಭೆ ನಡೆಸಿ ರಾಜಕೀಯ ಪ್ರವೇಶದ ಕುರಿತಂತೆ ಅನೇಕ ವಿಷಯಗಳನ್ನು ಚರ್ಚಿಸಲಾಗಿತ್ತು. ಪ್ರಸ್ತುತ ೬೯ ವರ್ಷ ವಯಸ್ಸಿನ ರಜನೀಕಾಂತ್‌ರವರನ್ನು ಕೊರೋನಾ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದು ಸೂಕ್ತವಲ್ಲ ಎಂದು ವೈದ್ಯ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪ್ರವೇಶ ತಡವಾಗಬಹುದು ಎಂದು ಅನುಮಾನವಿತ್ತು. ಆದರೆ ಆ ಅನುಮಾನಕ್ಕೆ ರಜನಿಕಾಂತ್ ತೆರೆ ಎಳೆದಿದ್ದು, ಡಿ.೩೧ ರಂದು ತಮ್ಮ ಅಧಿಕೃತ ಸಂದೇಶ ನೀಡಲಿದ್ದಾರೆ. ಇನ್ನೂ ಈ ಸನ್ನಿವೇಶಕ್ಕಾಗಿ ರಜನಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Trending

To Top