Film News

ರಾಜಕೀಯ ಪ್ರವೇಶ ಮಾಡುವಂತೆ ಅಭಿಮಾನಿಗಳ ಒತ್ತಡ: ಒತ್ತಾಯಿಸಬೇಡಿ ಎಂದು ರಜನಿ ಮನವಿ

ಚೆನೈ: ದಕ್ಷಿಣ ಭಾರತದ ಸ್ಟಾರ್ ನಟ ಸೂಪರ್ ಸ್ಟಾರ್ ರಜನಿಕಾಂತ್ ರವರನ್ನು ರಾಜಕೀಯ ಪ್ರವೇಶ ಮಾಡಿ, ಪಕ್ಷ ಘೋಷಣೆ ಮಾಡಿ ಎಂದು ಅಭಿಮಾನಿಗಳು ಒತ್ತಡ ಹೇರುತ್ತಿದ್ದು, ನನ್ನ ಮೇಲೆ ಪುನಃ ಒತ್ತಡ ಹೇರಿ ನೋವುಂಟು ಮಾಡಬೇಡಿ ಎಂದು ಅಭಿಮಾನಿಗಳಲ್ಲಿ ರಜನಿಕಾಂತ್ ಮನವಿ ಮಾಡಿದ್ದಾರೆ.

ಡಿಸೆಂಬರ್ ೩೦, ೨೦೨೦ ರಂದು ರಾಜಕೀಯ ಪ್ರವೇಶ ಹಾಗೂ ತಮ್ಮ ಪಕ್ಷವನ್ನು ಘೋಷಣೆ  ಮಾಡುವುದಾಗಿ ತಿಳಿಸಿದ್ದರು ರಜನಿಕಾಂತ್. ಎಲ್ಲಾ ಅಂದುಕೊಂಡಂತೆ ಆಗಿದ್ದರೇ ಇಂದಿಗೆ ರಜನಿಕಾಂತ್ ರವರ ರಾಜಕೀಯ ಚಟುವಟಿಕೆಗಳು ನಡೆಯುತ್ತಿತ್ತು. ಆದರೆ ರಜನಿಕಾಂತ್ ರವರ ಅನಾರೋಗ್ಯದಿಂದಾಗಿ ರಾಜಕೀಯದಿಂದ ಹಿಂದೆ ಸರಿಯಬೇಕಾಯಿತು. ವೈದ್ಯರು ಸಹ ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದರು. ಆದ್ದರಿಂದ ತಮ್ಮ ರಾಜಕೀಯ ಪ್ರವೇಶದಿಂದ ಹಿಂದೆ ಸರಿದಿದ್ದರು. ಆದರೆ ಇದೀಗ ರಜನಿಕಾಂತ್ ಅಭಿಮಾನಿಗಳು ರಜನಿಕಾಂತ್ ರವರು ಕೂಡಲೇ ರಾಜಕೀಯ ಪ್ರವೇಶ ಮಾಡಬೇಕೆಂದು ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದ ಬೇಸರಗೊಂಡ ರಜನಿ ಕಾಂತ್ ಒತ್ತಡ ಹೇರಬೇಡಿ ಎಂದು ಮನವಿ ಮಾಡಿದ್ದಾರೆ.

ಇನ್ನೂ ಈ ಕುರಿತು ರಜನಿಕಾಂತ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ, ನೀವು ಪುನಃ ಪುನಃ ಪ್ರತಿಭಟನೆ ಮಾಡಿ ನನ್ನ ಮೇಳೆ ಒತ್ತಡ ಹೇರಬೇಡಿ. ರಾಜಕೀಯಕ್ಕೆ ಬರದಿರಲು ಕಾರಣ ಏನು ಎಂಬುದನ್ನು ನಿಮಗೆ ಈಗಾಗಲೇ ತಿಳಿಸಿದ್ದೇನೆ. ಇಷ್ಟಾದರೂ ಕೂಡ ಪುನಃ ನೀವು ಪ್ರತಿಭಟನೆ ಮಾಡುವುದರಿಂದ ನನಗೆ ನೋವನ್ನುಂಟು ಮಾಡುವ ಹಾಗಾಗಿದೆ. ದಯವಿಟ್ಟು ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡುವುದರ ಜೊತೆಗೆ ನೀವು ಶಿಸ್ತು ಬದ್ದವಾಗಿ ಪ್ರತಿಭಟನೆ ನಡೆಸಿದ್ದೀರಿ ನಿಮಗೆ ಧನ್ಯವಾದಗಳು ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಹೈದರಾಬಾದ್ ನಲ್ಲಿ ಅಣ್ಣಾತೆ ಶೂಟಿಂಗ್ ವೇಳೆ ರಜನಿಕಾಂತ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ನಂತರ ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದರು. ಕೆಲವು ದಿನಗಳ ಬಳಿಕ ರಜನಿಕಾಂತ್ ರವರು ಅಣ್ಣಾತೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

Trending

To Top