Film News

ಶೂಟಿಂಗ್ ತೆರಳುತ್ತಿದ್ದ ರಜನಿಗೆ ಕಾದಿತ್ತು ಬಿಗ್ ಸರ್ಪ್ರೈಸ್

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಲಿರುವ ಅಣ್ಣಾತೆ ಸಿನೆಮಾ ಚಿತ್ರೀಕರಣಕ್ಕಾಗಿ ರಜನಿ ಹಾಗೂ ಕುಟುಂಬ ಸದಸ್ಯರು ಸೇರಿದಂತೆ ಚಿತ್ರತಂಡ ವಿಮಾನದ ಮೂಲಕ ಹೈದರಾಬಾದ್ ಗೆ ತೆರಳುತ್ತಿದ್ದ ವೇಳೆ ರಜನಿಕಾಂತ್ ರವರಿಗೆ ಸರ್ಪ್ರೈಸ್ ನೀಡಿದ್ದು, ವಿಮಾನದಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

ಈಗಾಗಲೇ ತಾವು ರಾಜಕೀಯ ಪ್ರವೇಶದ ಕುರಿತಂತೆ ಡಿ.೩೧ ರಂದು ಮಹತ್ವದ ಘೋಷಣೆಯೊಂದನ್ನು ಮಾಡುವುದಾಗಿ ತಿಳಿಸಿದ್ದು, ರಾಜಕೀಯ ವಲಯ ಸೇರಿದಂತೆ ಸಿನಿರಂಗದಲ್ಲೂ ಸಂಚಲನ ಮೂಡಿಸಿದ್ದಾರೆ. ಈ ಘೋಷಣೆಗೂ ಮುನ್ನಾವೇ ತಮ್ಮ ಅಣ್ಣಾತೆ ಚಲನಚಿತ್ರವನ್ನು ಮುಗಿಸಲು ನಿರ್ಧಾರ ಮಾಡಿದ್ದಾರೆ ರಜನಿಕಾಂತ್.

ಕೊರೋನಾ ಲಾಕ್‌ಡೌನ್ ಬಳಿಕ ರಜನಿಕಾಂತ್ ರವರು ಮೊದಲ ಬಾರಿಗೆ ಚಿತ್ರೀಕರಣಕ್ಕೆ ತೆರಳಿದ್ದು, ಅವರಿಗಾಗಿ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಹೈದರಾಬಾದ್ ಗೆ ತೆರಳಿದರು. ಇವರ ಜೊತೆ ರಜನಿಕಾಂತ್ ರವರ ಮಗಳು ಐಶ್ವರ್ಯ, ನಟಿ ನಯನತಾರಾ ಸೇರಿದಂತೆ ಚಿತ್ರತಂಡವೂ ಸಹ ವಿಮಾನದಲ್ಲಿ ತೆರಳಿತ್ತು. ಈ ಸಂದರ್ಭದಲ್ಲಿ ರಜನಿಕಾಂತ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿ ವಿಮಾನ ಸಿಬ್ಬಂದಿ ಹಾಗೂ ಚಿತ್ರತಂಡ ಎಲ್ಲರೂ ಸಂಭ್ರಮಿಸಿದ್ದಾರೆ.

ಇನ್ನೂ ಈ ಚಿತ್ರದಲ್ಲಿ ಸ್ಟಾರ್ ನಟಿಯರಾದ ನಯನತಾರಾ, ಮೀನಾ, ಖುಷ್ಬೂ, ಕೀರ್ತ ಸುರೇಶ್ ರವರು ಸಹ ನಟನೆ ಮಾಡುತ್ತಿದ್ದಾರೆ. ಹೈದರಾಬಾದ್ ರಾಮೋಜಿ ಫಿಲ್ಮಂ ಸಿಟಿಯಲ್ಲಿ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ವಿಶ್ವಾಸಂ, ವೀರ, ವಿವೇಗಂ ಮೊದಲಾದ ಹಿಟ್ ಸಿನೆಮಾಗಳನ್ನು ನಿರ್ದೇಶಿಸಿದ ಶಿವ ರಜನಿಕಾಂತ್ ಸಿನೆಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Trending

To Top