Film News

ತೆರೆಮೇಲೆ ರಜನಿಕಾಂತ್ ಬಯೋಪಿಕ್: ನಾಯಕನಾಗಿ ಧನುಷ್!

ಚೆನೈ: ಕಾಲಿವುಡ್ ನ ಖ್ಯಾತ ನಟ ಸೂಪರ್ ಸ್ಟಾರ್ ರಜನಿಕಾಂತ್ ರವರ ಜೀವನ ಚರಿತ್ರೆ ಆಧಾರಿತ ಚಿತ್ರವೊಂದನ್ನು ನಿರ್ಮಿಸಲು ಸಿದ್ದತೆಗಳು ನಡೆಯಲಾಗುತ್ತಿದೆ ಎಂದು ಹೇಳಲಾಗುತ್ತಿದ್ದು, ರಜನಿಕಾಂತ್ ಪಾತ್ರದಲ್ಲಿ ಧನುಷ್ ನಟಿಸಲಿದ್ದಾರೆ ಎಂಬ ಮಾತುಗಳು ಕಾಲಿವುಡ್ ನಲ್ಲಿ ವೈರಲ್ ಆಗಿದೆಯಂತೆ.

ಬೆಂಗಳೂರಿನಲ್ಲಿ ಸಾಮಾನ್ಯ ಕಂಡಕ್ಟರ್ ಆಗಿದ್ದಂತಹ ಶಿವಾಜಿರಾವ್ ಗಾಯಕ್ವಾಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿದ್ದ ರಜನಿಕಾಂತ್ ರವರ ಜೀವನ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಸಿನೆಮಾವೊಂದನ್ನು ನಿರ್ಮಿಸಲಾಗುತ್ತದೆ ಎನ್ನಲಾಗುತ್ತಿದೆ. ಸಾಮಾನ್ಯ ಕಂಡಕ್ಟರ್ ಸೂಪರ್ ಸ್ಟಾರ್ ಆದ ಕುರಿತಂತೆ ಈ ಚಿತ್ರವಿರಲಿದೆ. ಇನ್ನೂ ಈ ವಿಚಾರ ವೈರಲ್ ಆಗುತ್ತಿದ್ದಂತೆ ತಲೈವಾ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರಂತೆ.

ಇನ್ನೂ ಈ ಚಿತ್ರದಲ್ಲಿ ರಜನಿಕಾಂತ್ ಪಾತ್ರವನ್ನು ರಜನಿ ಅಳಿಯ ಧನುಷ್ ಮಾಡಲಿದ್ದಾರಂತೆ. ಈ ಕುರಿತು ಎಲ್ಲಾ ಸಿದ್ದತೆಗಳು ನಡೆಯುತ್ತಿದ್ದೆ ಎನ್ನಲಾಗಿದೆ. ಇನ್ನೂ ಈ ಚಿತ್ರವನ್ನು ನಿರ್ದೇಶಿಸಲು ಖ್ಯಾತ ನಿರ್ದೇಶನ ಎನ್.ಲಿಂಗುಸ್ವಾಮಿ ಮುಂದಾಗಿದ್ದು, ರಜನಿ ಬಯೋಪಿಕ್ ನಲ್ಲಿ ರಜನಿ ಪಾತ್ರಕ್ಕೆ ಧನುಷ್ ಸೂಕ್ತ ನಾಯಕನಾಗಲಿದ್ದಾರೆ ಎಂದಿದ್ದಾರಂತೆ. ಇನ್ನೂ ಈ ಸಿನೆಮಾ ಯಾವಾಗ ಶುರುವಾಗಲಿದೆ, ನಿರ್ಮಾಪಕರ್‍ಯಾರು ಎಂಬ ವಿಚಾರಗಳು ಅಧಿಕೃತವಾಗಿ ಘೊಷಣೆಯಾಗಿಲ್ಲ.

Trending

To Top