Film News

ತಲೈವಾ ಬಿಡುಗಡೆ ದಿನಾಂಕ ಘೋಷಣೆ: ಖುಷಿಯಲ್ಲಿ ತಲೈವಾ ಅಭಿಮಾನಿಗಳು

ಚೆನೈ: ದೇಶವ್ಯಾಪಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ನಟ ಸೂಪರ್ ಸ್ಟಾರ್ ರಜನಿಕಾಂತ್ ರವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರೆತಿದೆ. ಮುಂಬರುವ ದೀಪಾವಳಿ ಹಬ್ಬದಂದು ಅಣ್ಣಾತೆ ಸಿನೆಮಾ ತೆರೆಗೆ ಬರುವುದಾಗಿ ಸಿನಿಮಾ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ.

ಕಳೆದ ಡಿಸೆಂಬರ್‌ನಲ್ಲಿ ರಜನಿಕಾಂತ್ ತಮ್ಮ ರಾಜಕೀಯ ಪ್ರವೇಶದ ಕುರಿತು ಘೋಷಣೆ ಮಾಡುವುದಾಗಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಅಣ್ಣಾತೆ ಸಿನೆಮಾ ಕೆಲಸಗಳನ್ನು ಸಹ ಶೀಘ್ರವಾಗಿ ಮುಗಿಸಲು ಕೆಲಸ ಮಾಡುತ್ತಿದ್ದರು. ಆದರೆ ರಜನಿಕಾಂತ್ ರವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಅಣ್ಣಾತೆ ಸಿನೆಮಾ ಚಿತ್ರೀಕರಣ ನಿಲ್ಲಿಸುವುದರ ಜೊತೆಗೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದರು. ಈ ಕಾರಣಕ್ಕಾಗಿ ತಮ್ಮ ರಾಜಕೀಯ ಪ್ರವೇಶಕ್ಕೂ ಸಹ ಬ್ರೇಕ್ ಬಿತ್ತು, ಅಭಿಮಾನಿಗಳಲ್ಲಿ ಬೇಸರಗೊಂಡಿದ್ದರು.

ಇದೀಗ ಬೇಸರಗೊಂಡ ಅಭಿಮಾನಿಗಳಿಗೆ ಅಣ್ಣಾತೆ ಸಿನೆಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಶುಭಸುದ್ದಿ ನೀಡಿದ್ದಾರೆ. ಈಗಾಗಲೇ ವೀರಂ, ವಿಶ್ವಾಸಂ ಮೊದಲಾದ ಹಿಟ್ ಸಿನೆಮಾಗಳನ್ನು ನಿರ್ದೇಶನ ಮಾಡಿದ ನಿರ್ದೇಶಕ ಶಿವ ಸಾರಥ್ಯದಲ್ಲಿ ಅಣ್ಣಾತೆ ಸಿನೆಮಾ ಮೂಡಿಬರುತ್ತಿದ್ದು, ಚಿತ್ರದ ಮೇಲೆ ಬಹಳ ನಿರೀಕ್ಷೆ ಹುಟ್ಟಿಕೊಂಡಿದೆ. ನವೆಂಬರ್ 4, 2021 ರ ದೀಪಾವಳಿ ಹಬ್ಬದಂದು ಅಣ್ಣಾತೆ ಸಿನೆಮಾ ತೆರೆಮೇಲೆ ಬರಲಿದ್ದು, ನವೆಂಬರ್ ೪ ಬರುವಿಕೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇನ್ನೂ ಅಣ್ಣಾತೆ ಸಿನೆಮಾದಲ್ಲಿ ನಾಯಕಿಯರಾಗಿ ಖ್ಯಾತ ನಟಿಯರಾದ ನಯನತಾರಾ ಹಾಗೂ ಕೀರ್ತಿ ಸುರೇಶ್ ಅಭಿನಯಿಸಲಿದ್ದಾರೆ. ಮತ್ತೊಂದು ಮುಖ್ಯವಾದ ವಿಚಾರ ನಟಿಯರಾದ ಮೀನಾ ಹಾಗೂ ಖುಷ್ಬೂ ರವರೂ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಜೊತೆಗೆ ಪ್ರಕಾಶ್ ರೈ, ಜಾಖಿಶ್ರಾಫ್, ಸೂರಿ ಮೊದಲಾದ ಖ್ಯಾತ ಕಲಾವಿದರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದು, ಶೇ.೫೦ ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆಯಂತೆ.

Trending

To Top