Kannada Cinema News

ಕನ್ನಡದ ಹಿರಿಯ ಸಂಗೀತ ನಿರ್ದೇಶಕರಾದ ರಾಜನ್ ಇ’ನ್ನಿಲ್ಲ! ಇವರ ಆ’ತ್ಮಕ್ಕೆ ಶಾಂತಿ ಸಿಗಲಿ

ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ನಿನ್ನೆ ರಾತ್ರಿ 11 ರ ಸಮಯಕ್ಕೆ ತಮ್ಮ ಸ್ವಗೃಹದಲ್ಲಿ ಕೊ’ನೆಯು’ಸಿರೆಳೆದಿದ್ದಾರೆ. ವಯೋ ಸಹಜ ಆ’ರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ರಾಜನ್ ಅವರು ನಿನ್ನೆ ರಾತ್ರಿ ಇ’ಹಲೋಕ ತ್ಯ’ಜಿಸಿದ್ದಾರೆ. ಇಂದು ಬೆಂಗಳೂರಿನ ಹೆಬ್ಬಾಳದಲ್ಲಿ ಅವರ ಅಂ’ತ್ಯಕ್ರಿಯೆ ನಡೆಯಲಿದೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ರಾಜನ್ ಅವರ ಮ’ಗ ಅನಂತ್ ಕುಮಾರ್, “ತಂದೆಯವರು ಆರೋಗ್ಯವಾಗಿಯೇ ಇದ್ದರು. ಆರೋಗ್ಯದಲ್ಲಿ ದೊಡ್ಡ ಸಮ’ಸ್ಯೆ ಏನು ಇರಲಿಲ್ಲ. ಆನ್ ಲೈನ್ ಮೂಲಕ ಮ್ಯೂಸಿಕ್ ಕ್ಲಾಸ್ ಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು. ಎರಡು ದಿನಗಳಿಂದ ಜೀ’ರ್ಣಕ್ರಿಯೆಯಲ್ಲಿ ಸ’ಮಸ್ಯೆ ಉಂಟಾಗಿತ್ತು. ನಿನ್ನೆ ರಾತ್ರಿ 11 ಗಂಟೆಗೆ ಮನೆಯಲ್ಲೇ ನಮ್ಮೆಲ್ಲರನ್ನು ಅಗಲಿದ್ದಾರೆ..” ಎಂದು ತಿಳಿಸಿದ್ದಾರೆ.

ರಾಜನ್ ಅವರು ತಮ್ಮ ನಾಗೇಂದ್ರ ಅವರ ಜೊತೆ ಸೇರಿ, ರಾಜನ್-ನಾಗೇಂದ್ರ ಕಾಂಬಿನೇಷನ್ ಮೂಲಕ ಸಂಗೀತ ನೀಡುತ್ತಿದ್ದರು. 1952 ರಲ್ಲಿ ಸೌಭಾಗ್ಯ ಲಕ್ಷ್ಮಿ ಸಿನಿಮಾ ಮೂಲಕ ಈ ಇಬ್ಬರು ಪ್ರತಿಭಾನ್ವಿತರು ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಸುಮಾರು 5 ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಮ್ಯೂಸಿಕ್ ನೀಡುವ ಮೂಲಕ ಅತ್ಯಮೂಲ್ಯವಾದ ಕೊಡುಗೆಗಳನ್ನು ನೀಡಿದ್ದಾರೆ. ರಾಜನ್ ಹಾಗೂ ನಾಗೇಂದ್ರರ ಜೋಡಿಯನ್ನು ಕನ್ನಡದ ಕಲ್ಯಾಣ್ ಜಿ-ಆನಂದ್ ಜಿ ಎಂದು ಕರೆಯಲಾಗುತ್ತಿತ್ತು.

ನಾ ನಿನ್ನ ಮರೆಯಲಾರೆ ನಾ ನಿನ್ನ ಬಿ’ಡಲಾರೆ, ಹೊಂಬಿಸಿಲು, ಮಂತ್ರಾಲಯ ಮಹಾತ್ಮೆ, ಕ’ಳ್ಳ ಕುಳ್ಳ, ಸುಪ್ರಭಾತ, ಗಾ’ಳಿಮಾತು, ಶ್ರೀನಿವಾಸ ಕಲ್ಯಾಣ, ಸೇರಿದಂತೆ 1952 ರಿಂದ 2000 ದ ವರೆಗೂ ಸುಮಾರು 375 ಸಿನಿಮಾಗಳಿಗೆ ಈ ಜೋಡಿ ಸಂಗೀತ ನೀಡಿದ್ದಾರೆ. ನಾಗೇಂದ್ರ ಅವರ ನಿ’ಧನದ ನಂತರ ರಾಜನ್ ಅವರು ಸಿನಿಮಾಗಳಿಗೆ ಸಂಗೀತ ನೀಡುವುದನ್ನು ನಿಲ್ಲಿಸಿದ್ದರು. ಇದೀಗ ರಾಜನ್ ಅವರು ಸಹ ಇ
ಹಲೋಕ ತ್ಯ’ಜಿಸಿದ್ದಾರೆ.

Trending

To Top