ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಇಡೀ ಕುಟುಂಬಕ್ಕೆ ಕರೊನಾ ಸೋಂಕು ಪಾಸಿಟಿವ್ ಬಂದಿತ್ತು, ಈ ಕುರಿತು ಸ್ವತಃ ರಾಜಮೌಳಿ ಅವರೇ ಟ್ವೀಟ್ ಮಾಡಿದ್ದರು. ತಮ್ಮ ಕುಟುಂಬದ ಸದಸ್ಯರಿಗೆ ಜ್ವರ ಬಂದಿತ್ತು, ಆದರೆ ಅದು ಹಾಗೆಯೇ ಕಡಿಮೆ ಆಯಿತು. ಆದರೂ, ಕರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ವೈದ್ಯರ ಸಲಹೆ ಮೇರೆಗೆ ನಾನು ಮತ್ತು ನಮ್ಮ ಕುಟುಂಬದವರೆಲ್ಲರು ಕ್ವಾರಂಟೈನ್ ನಲ್ಲಿದ್ದೇವೆ ಎಂದು ರಾಜಮೌಳಿ ಅವರು ಟ್ವೀಟ್ ಮಾಡಿದ್ದರು.
ಇದೀಗ ಕ್ವಾರಂಟೈನ್ ಅವಧಿಯನ್ನು ಮುಕ್ತಾಯ ಗೊಳಿಸಿರುವ ರಾಜಮೌಳಿ ಅವರು ಮತ್ತೊಂದು ಟ್ವೀಟ್ ಮಾಡಿದ್ದಾರೆ. “ಎರಡು ವಾರದ ಕ್ವಾರಂಟೈನ್ ಅವಧಿಯನ್ನು ಮುಗಿಸಿದ್ದೇವೆ.. ನಮಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಆದರೂ ನಾವು ಟೆಸ್ಟ್ ಮಾಡಿಸಬೇಕಾದ ಸಲುವಾಗಿ, ಟೆಸ್ಟ್ ಮಾಡಿಸಿದೆವು, ನಮ್ಮೆಲ್ಲರ ಕರೊನಾ ರಿಪೋರ್ಟ್ ನೆಗಟಿವ್ ಬಂದಿದೆ. ಪ್ಲಾಸ್ಮಾ ಡೋನೇಟ್ ಮಾಡಲು ನಮ್ಮ ದೇಹದಲ್ಲಿ ಆಂಟಿ-ಬಾಡಿ ಬೆಳವಣಿಗೆ ಆಗಿದೆಯೇ ಎಂಬುದನ್ನು ತಿಳಿಯಲು, ಇನ್ನು ಎರಡು ವಾರಗಳ ಕಾಲ ಕಾಯಬೇಕು ಎಂದು ವೈದ್ಯರು ಹೇಳಿದ್ದಾರೆ..” ಎಂದು ಟ್ವೀಟ್ ಮಾಡಿದ್ದಾರೆ ರಾಜಮೌಳಿ.
ಈ ವಿಷಯ ರಾಜಮೌಳಿ ಅವರ ಅಭಿಮಾನಿಗಳಿಗೆ, ಸಂತೋಷ ತಂದಿದೆ. ಪ್ರಸ್ತುತ ಆರ್.ಆರ್.ಆರ್. ಸಿನಿಮಾದಲ್ಲಿ ಬ್ಯುಸಿ ಇದ್ದಾರೆ ನಿರ್ದೇಶಕ ರಾಜಮೌಳಿ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಮುಂದಿನ ವರ್ಷ ಯುಗಾದಿ ಹಬ್ಬಕ್ಕೆ ಆರ್.ಆರ್.ಆರ್ ಸಿನಿಮಾ ತೆರೆಕಾಣಬೇಕಿತ್ತು. ಆದರೆ, ಕರೊನಾ ತೊಂದರೆಯಿಂದಾಗಿ ಈ ಸಿನಿಮಾದ ಕೆಲಸ ಕೂಡ ಮುಂದಕ್ಕೆ ಹೋಗಿದೆ. ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಇಡೀ ಕುಟುಂಬಕ್ಕೆ ಕರೊನಾ ಸೋಂಕು ಪಾಸಿಟಿವ್ ಬಂದಿತ್ತು, ಈ ಕುರಿತು ಸ್ವತಃ ರಾಜಮೌಳಿ ಅವರೇ ಟ್ವೀಟ್ ಮಾಡಿದ್ದರು. ತಮ್ಮ ಕುಟುಂಬದ ಸದಸ್ಯರಿಗೆ ಜ್ವರ ಬಂದಿತ್ತು, ಆದರೆ ಅದು ಹಾಗೆಯೇ ಕಡಿಮೆ ಆಯಿತು. ಆದರೂ, ಕರೊನಾ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿತ್ತು. ವೈದ್ಯರ ಸಲಹೆ ಮೇರೆಗೆ ನಾನು ಮತ್ತು ನಮ್ಮ ಕುಟುಂಬದವರೆಲ್ಲರು ಕ್ವಾರಂಟೈನ್ ನಲ್ಲಿದ್ದೇವೆ ಎಂದು ರಾಜಮೌಳಿ ಅವರು ಟ್ವೀಟ್ ಮಾಡಿದ್ದರು.
