Cinema

ಸ್ಪೋ#ಟಕ ಸುದ್ದಿ – ಬಾಹುಬಲಿ ನಿರ್ದೇಶಕ SS ರಾಜಮೌಳಿ ಹಾಗು ಕುಟುಂಬಕ್ಕೆ ಕೊರೊನ ಪಾಸಿಟಿವ್!

ಹೌದು! ಖ್ಯಾತ ತೆಲುಗು ಚಿತ್ರ ನಿರ್ದೇಶಕ, ಕನ್ನಡಿಗ SS ರಾಜಮೌಳಿ ಹಾಗು ಅವರ ಕುಟುಂಬಕ್ಕೆ ಕರೋನ ಪಾಸಿಟಿವ್ ಬಂದಿದೆ. ಇದರ ಕುರಿತು ಕುದ್ದು ರಾಜಮೌಳಿ ಅವರೇ ಈಗಷ್ಟೇ ಟ್ವೀಟ್ ಮಾಡಿದ್ದಾರೆ. ರಾಜಮೌಳಿ ಹಾಗು ಅವರ ಸಂಪೂರ್ಣ ಕುಟುಂಬ ಸದ್ಯ ಕ್ವಾರಂಟೈನ್ ನಲ್ಲಿ ಇದ್ದು, ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ. ರಾಜಮೌಳಿ ಅವರು ಏನೆಂದು ಟ್ವೀಟ್ ಮಾಡಿದ್ದಾರೆ, ನೀವು ಈ ಕೆಳಗಿನ ಟ್ವೀಟ್ ನಲ್ಲಿ ನೋಡಬಹುದು.
ಕೆಲ ಸಮಯದ ಹಿಂದೆ ಭಾರತೀಯ ಚಿತ್ರರಂಗಕ್ಕೆ, ಅದರಲ್ಲೂ ತೆಲುಗು ಸಿನಿಪ್ರಿಯರಿಗೆ ಶಾಕ್ ನೀಡುವ ಸುದ್ದಿಯೊಂದು ಹೊರಬಂದಿದೆ. ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್.ಎಸ್.ರಾಜಮೌಳಿ ಹಾಗೂ ಅವರ ಕುಟುಂಬದವರಿಗೆ ಕರೊನಾ ಸೋಂಕು ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ. ಈ ಕುರಿತು ಸ್ವತಃ ರಾಜಮೌಳಿ ಅವರು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ..”ನನ್ನ ಕುಟುಂಬದವರಿಗೆ ಹಾಗೂ ನನಗೆ ಕೆಲದಿನಗಳ ಹಿಂದೆ ಜ್ವರ ಬಂದಿತ್ತು, ಹಾಗೆಯೇ ಅದು ಕಡಿಮೆ ಆಯಿತು. ಆದರೂ ನಾವು ಟೆಸ್ಟ್ ಮಾಡಿಸಿಕೊಂಡೆವು. ರಿಪೋರ್ಟ್ ನ ಪ್ರಕಾರ, ನಮಗೆ ಕರೊನಾ ಸೋಂಕು ಪಾಸಿಟಿವ್ ಇರುವುದು ಇಂದು ದೃಢಪಟ್ಟಿದೆ. ನಾವು ಹೋಮ್ ಕ್ವಾರಂಟೈನ್ ನಲ್ಲಿ ಇದ್ದೇವೆ ಹಾಗೂ ವೈದ್ಯರ ಸಲಹೆಯನ್ನು ಪಡೆಯುತ್ತಿದ್ದೇವೆ..”
“ಯಾವುದೇ ರೋಗ ಲಕ್ಷಣಗಳು ನಮ್ಮಲ್ಲಿ ಕಂಡುಬಂದಿಲ್ಲ. ಈಗ ನಾವು ಸುಧಾರಿಸಿಕೊಂಡಿದ್ದೇವೆ.. ಹಾಗೂ ವೈದ್ಯರು ಹೇಳಿರುವ ಸಲಹೆಗಳು ಹಾಗೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತಿದ್ದೇವೆ.. ಪ್ಲಾಸ್ಮಾ ಡೋನೇಟ್ ಮಾಡಲು ಆಂಟಿ ಬಾಡೀಸ್ ಡೆವಲಪ್ ಆಗಲಿ ಎಂದು ಕಾಯುತ್ತಿದ್ದೇವೆ..” ಎಂದು ಟ್ವೀಟ್ ಮಾಡಿದ್ದಾರೆ ನಿರ್ದೇಶಕ ಎಸ್.ಎಸ್.ರಾಜಮೌಳಿ..ಇತ್ತೀಚೆಗೆ ರಾಜಮೌಳಿ ಅವರು ಆರ್.ಆರ್.ಆರ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಹಾಗಾಗಿ ಅವರ ಜೊತೆ ಕೆಲಸ ಮಾಡಿದ್ದವರಿಗೂ ಸಹ ಕರೊನಾ ಭೀತಿ ಎದುರಾಗಿರುವ ಹಾಗಿದೆ.
ಕರೊನಾ ಭೀತಿ ನಮ್ಮ ಚಿತ್ರರಂಗಕ್ಕೆ ಇಲ್ಲ ಎಂದು ಎಲ್ಲರೂ ನೆಮ್ಮದಿಯಾಗಿದ್ದರು. ಈ ಸಮಯದಲ್ಲೇ ಒಬ್ಬರ ಹಿಂದೆ ಒಬ್ಬರಂತೆ ಚಿತ್ರರಂಗದ ಗಣ್ಯರಿಗೆ ಕರೊನಾ ಸೋಂಕು ಪಾಸಿಟಿವ್ ಆಗಿರುವುದು ದೃಢಪಡುತ್ತಿದೆ. ಮೊದಲಿಗೆ ಹಿರಿಯ ನಟಿ ಸಂಸದೆ ಸುಮಲತಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಈಗ ಅವರು ಗುಣಮುಖರಾಗಿದ್ದಾರೆ. ನಂತರ ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್, ಅವರ ಮಗ ಅಭಿಷೇಕ್ ಬಚ್ಚನ್ , ಸೊಸೆ ಐಶ್ವರ್ಯ ರೈ ಹಾಗೂ ಮೊಮ್ಮಗು ಆರಾಧ್ಯಳಿಗೆ ಕರೊನಾ ಸೋಂಕು ಪಾಸಿಟಿವ್ ಆಗಿತ್ತು. ಈಗ ಐಶ್ವರ್ಯಾ ರೈ ಹಾಗೂ ಆರಾಧ್ಯ ಕರೊನಾ ಇಂದ ಮುಕ್ತರಾಗಿ ಮನೆ ಸೇರಿದ್ದಾರೆ. ಆದರೆ ಬಿಗ್ ಬಿ ಹಾಗೂ ಅಭಿಷೇಕ್ ಬಚ್ಚನ್ ಇನ್ನು ಆಸ್ಪತ್ರೆಯಲ್ಲೇ ಇದ್ದಾರೆ. ಇನ್ನು ನಮ್ಮ ಸ್ಯಾಂಡಲ್ ವುಡ್ ನ ಆಕ್ಷನ್ ಪ್ರಿನ್ಸ್ ಧುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾರಿಗೂ ಸಹ ಕರೊನಾ ಸೋಂಕು ಪಾಸಿಟಿವ ಬಂದಿತ್ತು. ಈಗ ಅವರಿಬ್ಬರು ಸಹ ಕರೊನಾ ಇಂದ ಗುಣಮುಖರಾಗಿದ್ದರೆ. ಹೆಸರಾಂತ ನಿರ್ದೇಶಕ ಎಸ್.ಎಸ್.ರಾಜಮೌಳಿ ಹಾಗೂ ಅವರ ಕುಟುಂಬಕ್ಕೆ ಕರೊನಾ ಸೋಂಕು ಪಾಸಿಟಿವ್ ಬಂದಿರುವುದು ಎಲ್ಲರಿಗೂ ಆತಂಕ ಮೂಡಿಸಿದೆ. ಆದಷ್ಟು ಬೇಗ ಇವರು ಕರೊನಾ ಇಂದ ಸಂಪೂರ್ಣವಾಗಿ ಗುಣಮುಖರಾಗಲಿ ಎಂದು ಹಾರೈಸೋಣ

Trending

To Top