ಬೆಂಗಳೂರು: ಸ್ಯಾಂಡಲ್ವುಡ್ನ ಮೋಸ್ಟ್ ಸಕ್ಸಸ್ಪುಲ್ ನಟ ಚಿರಂಜೀವಿ ಸರ್ಜಾ ರವರು ದೂರವಾದರೂ ಸಹ ಅವರ ಸಿನೆಮಾಗಳ ಮೇಲಿನ ಅಭಿಮಾನಿಗಳ ಕ್ರೇಜ್ ಕಡಿಮೆಯಾಗಿಲ್ಲ. ಇದೀಗ ನಟ ಚಿರು ಅಭಿನಯಿಸಿದ್ದಂತಹ ರಾಜಮಾರ್ತಾಂಡ ಚಿತ್ರದ ಟ್ರೈಲರ್ ಅನ್ನು ಚಿರು-ಮೇಘನಾ ರಾಜ್ ಪುತ್ರ ಜೂನಿಯರ್ ಚಿರು ಫೆ.೧೯ ರಂದು ಬಿಡುಗಡೆ ಮಾಡಲಿದ್ದಾನೆ ಎನ್ನಲಾಗುತ್ತಿದೆ.
ಇನ್ನೂ ಈ ಕುರಿತು ರಾಜಮಾರ್ತಾಂಡ ಚಿತ್ರದ ನಿರ್ದೇಶಕ ರಾಮ್ ನಾರಾಯಣ ಜೂನಿಯರ್ ಚಿರು ಜೊತೆ ಸೇಲ್ಫಿ ಕ್ಲಿಕ್ಕಿಸಿಕೊಂಡ ಪೊಟೋವೊಂದನ್ನು ಹಂಚಿಕೊಳ್ಳುವ ಮೂಲಕ ಜೂನಿಯರ್ ಚಿರು ರಾಜಾಮಾರ್ತಾಂಡ ಚಿತ್ರದ ಟ್ರೈರ್ ಬಿಡುಗಡೆ ಮಾಡುವ ಶುಭ ಸುದ್ದಿಯನ್ನು ನೀಡಿದ್ದಾರೆ. ತಂದೆ ಅಭಿನುದ ಚಿತ್ರದ ಟ್ರೈಲರ್ ಅನ್ನು ಚಿಕ್ಕ ವಯಸ್ಸಿನ ಮಗ ರಿಲೀಸ್ ಮಾಡುತ್ತಿರುವುದು ಇದೇ ಮೊದಲು ಎಂದು ಬರೆದುಕೊಂಡಿದ್ದಾರೆ.
ರಾಜಮಾರ್ತಾಂಡ ಚಿತ್ರದಲ್ಲಿನ ಚಿರು ಪಾತ್ರಕ್ಕೆ ಹಿನ್ನೆಲೆ ಧ್ವನಿಯನ್ನು ಧ್ರುವ ಸರ್ಜಾ ನೀಡಿದ್ದಾರೆ. ಇನ್ನೂ ಪುತ್ರನ ಕೈಯಿಂದ ತಂದೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗುತ್ತಿರುವುದು ಮೇಘನಾ ರಾಜ್ ರವರಿಗೆ ತುಂಬಾ ಖುಷಿ ನೀಡಿದೆಯಂತೆ. ಈ ಚಿತ್ರದಲ್ಲಿ ವಿಭಿನ್ನವಾದ ಡೈಲಾಗ್ಗಳಿದ್ದು, ಅಭಿಮಾನಿಗಳನ್ನು ರಂಜಿಸಲಿದೆ ಎನ್ನಲಾಗುತ್ತಿದೆ.
ಇನ್ನೂ ರಾಜಮಾರ್ತಾಂಡ ಚಿತ್ರದ ಟೀಸರ್ ಈ ಹಿಂದೆ ರಿಲೀಸ್ ಆಗಿದ್ದು, ಸಿನಿರಸಿಕರಿಂದ ಉತ್ತಮವಾದ ಪ್ರತಿಕ್ರಿಯೆ ದೊರೆತಿತ್ತು. ಇದೀಗ ಟ್ರೈಲರ್ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೂ ರಾಜಾಮಾರ್ತಂಡ ಚಿತ್ರದ ಟ್ರೈಲರ್ನಲ್ಲಿ ಕಾಣಿಸಲಿರುವ ದೃಶ್ಯಗಳಿಗೆ ಧ್ರುವ ಸರ್ಜಾ ಹಿನ್ನೆಲೆ ಧ್ವನಿ ನೀಡಿದ್ದು, ಪೊಗರು ಚಿತ್ರ ರಿಲೀಸ್ ಆದ ಬಳಿಕ ಪೂರ್ತಿ ಚಿತ್ರಕ್ಕೆ ಹಿನ್ನೆಲೆ ಧ್ವನಿ ನೀಡಲಿದ್ದಾರೆ ಎನ್ನಲಾಗಿದೆ.
