News

(video)ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಜಾಹುಲಿ ಯಶ್ ಸ್ನೇಹಿತ ಹರ್ಷ, ವಿಡಿಯೋ ನೋಡಿ

rajahuli

ನಮ್ಮ ಕಾಫಿ ನಾಡಿನ ಸುಂದರ ರೂಪದರ್ಶಿ ಆದ ಐಶ್ವರ್ಯ ಅವರು ಕನ್ನಡ ನಟ ರಾಜ ಹುಲಿ ಖ್ಯಾತಿಯ ಹರ್ಷ / ಹರ್ಷವರ್ಧನ್ ಅವರ ಜೊತೆ ಇದೇ ವರ್ಷ ಮದುವೆ ಮಾಡಿಕೊಂಡಿದ್ದಾರೆ. ಮೂಲತಃ ಮಾಡೆಲ್ ಆದ ಐಶ್ವರ್ಯ ಅವರು ಆಭರಣ ಹಾಗು ಸೀರೆ ಬ್ರಾಂಡ್ ಗಳಿಗೆ brand ambassador ಆಗಿದ್ದಾರೆ. ಐಶ್ವರ್ಯ ಅವರಿಗೆ ಸುಮಾರು ಜಾಹಿರಾತು ಗಳಲ್ಲಿ ಅವಕಾಶಗಳು ಬರುತ್ತಿವೆ. ಸದ್ಯ ತಮ್ಮ ಜೀವನದ ಹೊಸ ಜರ್ನಿ ಯನ್ನು ಶುರು ಮಾಡುತ್ತಿರುವ ಐಶ್ವರ್ಯ ಅವರು ಮದುವೆಯ ನಂತರ ತಮ್ಮ ಮಾಡೆಲ್ಲಿಂಗ್ ಕೆರಿಯರ್ ಮೇಲೆ ಮತ್ತೆ ಫೋಕಸ್ ಮಾಡಲಿದ್ದಾರೆ. ಕನ್ನಡ ನಟ ಹರ್ಷ ಅವರು ಮೊಗ್ಗಿನ ಮನಸ್ಸು ಚಿತ್ರದಿಂದ ಕನ್ನಡ ಸಿನಿಮಾ ರಂಗಕ್ಕೆ ಕಾಲಿಟ್ಟರು. ಹರ್ಷ ಅವರು ಸುಮಾರು 15 ಕ್ಕೂ ಹೆಚ್ಚು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದಾರೆ. ಒಂದೆರಡು ಚಿತ್ರಗಳಲ್ಲಿ ಹೀರೋ ಪಾತ್ರ ಕೂಡ ಮಾಡಿದ್ದಾರೆ. ಸಾಮಾನ್ಯವಾಗಿ ಯಶ್ ಅವರ ಎಲ್ಲಾ ಚಿತ್ರದಲ್ಲಿ ಹರ್ಷ ಅವರು ಇರುತ್ತಾರೆ. ನಟ ಹರ್ಷ ಅವರು ತಮ್ಮ ಗೆಳತಿ ಐಶ್ವರ್ಯ ಅವರ ಜೊತೆ ಇದೆ ವರ್ಷ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇದೆ ವರ್ಷ ಡಿಸೆಂಬರ್ 3 ನೇ ತಾರೀಕು ನಟ ಹರ್ಷ ಹಾಗು ಐಶ್ವರ್ಯ ಅವರು ಮದುವೆ ಆಗಿದ್ದಾರೆ. ಈ ಕೆಳಗಿನ ವಿಡಿಯೋ ನೋಡಿರಿ ಸದ್ಯ ನಮ್ಮ ಸ್ಯಾಂಡಲ್ವುಡ್ ನಲ್ಲಿ ಬಹಳಷ್ಟು ಮದುವೆ ಸಮಾರಂಭ ಹಾಗು ಶುಭ ಕಾರ್ಯಗಳು ನಡೆಯುತ್ತಿದೆ. ಒಂದು ಕಡೆ ನೆನ್ನೆ ಅಷ್ಟೇ ನಟಿ ಐಂದ್ರಿತಾ ರೇ ತಮ್ಮ ಹಾಗು ದಿಗಂತ್ ಅವರ ಮದುವೆ ಬಗ್ಗೆ ಹೇಳಿದ್ದಾರೆ. ಇವರು ಕೂಡ ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡಿ ಕೊಳ್ಳುವವರಿದ್ದಾರೆ. ಹರ್ಷ ಹಾಗು ಐಶ್ವರ್ಯ ಜೋಡಿ ನಮ್ಮ ಕಡೆ ಇಂದ ಶುಭ ಹಾರೈಕೆಗಳು! ತಮ್ಮ ಜೀವನದ ಹೊಸ ಜರ್ನಿ ಯನ್ನು ಶುರು ಮಾಡಲು ನಮ್ಮ ಕಡೆ ಇಂದ ಆಲ್ ದಿ ಬೆಸ್ಟ್! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ , ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.

Trending

To Top