ಡಾ.ರಾಜ್ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತಕ್ಕೆ ಸ್ಪೂರ್ತಿ ಎಂದ ರಾಮ್ ದೇವ್! ಹೆಮ್ಮೆಯಿಂದ ಶೇರ್ ಮಾಡಿ

raj4
raj4

ನಮ್ಮ ಅಣ್ಣಾವ್ರು ಯಾರಿಗೆ ಗೊತ್ತಿಲ್ಲ ಹೇಳಿ! ಇಡೀ ಭಾರತಕ್ಕೆ ಅಣ್ಣಾವ್ರ ಬಗ್ಗೆ ಗೊತ್ತು! ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು (24 ಏಪ್ರಿಲ್ 1929 – 12 ಏಪ್ರಿಲ್ 2006), ಇವರು ರಾಜ್ ಕುಮಾರ್ ಎಂದೇ ನಾಮಸೂಚಕವಾಗಿ ಹೆಸರಾಗಿದ್ದರು, ಮತ್ತು ಇವರು ಕನ್ನಡ ಸಿನೆಮಾದಲ್ಲಿ ಭಾರತೀಯ ನಟ ಮತ್ತು ಗಾಯಕರಾಗಿದ್ದರು.

ಭಾರತೀಯ ಸಿನಿಮಾ ಇತಿಹಾಸದಲ್ಲಿ ಅತ್ಯುತ್ತಮ ನಟರಲ್ಲಿ ಒಬ್ಬರಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದ ಅವರು, ಒಂದು ಸಾಂಸ್ಕೃತಿಕ ಚಿತ್ರಣವೆಂದು ಪರಿಗಣಿಸಲ್ಪಡುತ್ತಾರೆ ಮತ್ತು ಕನ್ನಡ ಜನಾಂಗದವರು ಇವರು. ಹಾಗೂ ಇವರು ಕನ್ನಡ ಮಾಟಿನಿಯೇ ವಿಗ್ರಹದ ಸ್ಥಾನಮಾನವನ್ನು ಹೊಂದಿದ್ದಾರೆ, ಅವರು ಜನಪ್ರಿಯವಾಗಿ ನಟ ಸಾರ್ವಭೌಮ (ಚಕ್ರವರ್ತಿ) ಬಂಗಾರದ ಮನುಷ್ಯ (ಚಿನ್ನದ ಮನುಷ್ಯ), ವರ ನಟ (ಪ್ರತಿಭಾನ್ವಿತ ನಟ) ಎಂದು ಪ್ರಸಿದ್ಧಿ ಹೊಂದಿದವರು.

ಇವರ ಬಗ್ಗೆ ಬಾಬ್ ರಾಮ್ ದೇವ್ ಮಾತನಾಡಿದ್ದಾರೆ ಡಾ.ರಾಜ್ ರವರು ಕೇವಲ ಕರ್ನಾಟಕಕ್ಕೆ ಮಾತ್ರ ಸ್ಪೂರ್ತಿ ಅಲ್ಲ, ಅವರು ಇಡೀ ಭಾರತ ದೇಶಕ್ಕೆ ಸ್ಪೂರ್ತಿ ಎಂದು ಹೇಳಿ ಅವರನ್ನು ಒಗಳಿ ಕೊಂಡಾಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ ‘ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್’ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಅವರು ಈ ರೀತಿ ನುಡಿದಿದ್ದಾರೆ.

ಈ ಸಂದರ್ಭದಲ್ಲಿ ‘ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್’ ಮಕ್ಕಳಿಗೆ ಹಾಗೂ ವೀಕ್ಷಕರಿಗೆ ಯೋಗದ ಬಗ್ಗೆ ಮತ್ತು ಅದರ ಮಹತ್ವ ಬಗ್ಗೆ ಮಾಹಿತಿಯನ್ನು ಕೊಟ್ಟ ಅವರು ಅಪ್ಪಾಜಿ ಅವರ ಬಗ್ಗೆ ಡಾ.ರಾಜ್ ಕುಮಾರ್ ಅವರು ನಮಗೆ ಸ್ಪೂರ್ತಿ, ಅವರು ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ಭಾರತ ದೇಶಕ್ಕೆ ಸ್ಪೂರ್ತಿ, ಮತ್ತು ಅವರು ನಮ್ಮನೇಲ್ಲ ಬಿಟ್ಟು ಹೋಗಿಲ್ಲ ಈ ಮಕ್ಕಳ ಮುಖಾಂತರ ಅವರ ಹಾಡುಗಳ ಮುಖಾಂತರ ಮತ್ತು ಅವರ ಅಭಿನಯದ ಮುಖಾಂತರ ನಮ್ಮೆಲ್ಲ ನೆಲೆಸಿದ್ದಾರೆ ಎಂದು ಹೇಳಿ ಅವರನ್ನು ಗೌರವಿಸಿದ್ದಾರೆ.

ನೋದಿದ್ರಲ್ಲ ಸ್ನೇಹಿತರೆ ಅಪ್ಪಾಜಿ ಅವರ ಮಹತ್ವ ಎಂತದ್ದು ಅಂತ!