Uncategorized

ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದಂದು ರೈಡರ್ ಟ್ರೈಲರ್!

ಬೆಂಗಳೂರು: ನಟ ಹಾಗೂ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅಭಿನಯದ ರೈಡರ್ ಚಿತ್ರದ ಟ್ರೈಲರ್ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ರೈಡರ್ ಚಿತ್ರತಂಡ ಮಾಹಿತಿ ನೀಡಿದೆ.

ನಟ ನಿಖಿಲ್ ಕುಮಾರಸ್ವಾಮಿ ಯವರು ಇದೇ ಜನವರಿ 22 ರಂದು ತಮ್ಮ 31ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ರೈಡರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ. ನಟಿ ನಿಖಿಲ್ ರವರು ರಾಜಕಾರಣ ಹಾಗೂ ಸಿನೆಮಾ ಎರಡನ್ನೂ ಸಮನಾಗಿ ಸ್ವೀಕರಿಸಿದ್ದು, ಸಿನೆಮಾಗಳನ್ನು ಸಹ ಹಂತ ಹಂತವಾಗಿ ಪೂರ್ಣಗೊಳಿಸುತ್ತಿದ್ದಾರೆ.

ನಿರ್ದೇಶಕ ವಿಜಯ್ ಕುಮಾರ್ ಕೊಂಡ ನಿರ್ದೇಶನದಲ್ಲಿ ರೈಡರ್ ಚಿತ್ರ ಮೂಡಿಬರಲಿದ್ದು, ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಶೇ.೫೦ ರಷ್ಟ ಚಿತ್ರೀಕರಣ ಮುಕ್ತಾಯಗೊಂಡಿದ್ದು, ನಿಖಿಲ್ ಕುಮಾರಸ್ವಾಮಿ ಸಹ ಈ ಕುರಿತು ಪೋಸ್ಟ್ ಮಾಡಿದ್ದಾರೆ. ಒಂದಷ್ಟು ಹೊಸ ನಿರೀಕ್ಷೆಗಳೊಂದಿಗೆ ನನ್ನ ಮುಂದಿನ ಚಿತ್ರ ರೈಡರ್ ನ ಟೀಸರ್ ಜನವರಿ ೨೨ ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಸಿನಿಅಭಿಮಾನಿಗಳಿಗೆ ಈ ಟೀಸರ್ ಇಷ್ಟವಾಗಬಹುದು ಎಂಬ ಭರವಸೆ ನನ್ನದಾಗಿದ್ದು, ಎಂದಿನಂತೆ ನಿಮ್ಮ ಪ್ರೀತಿ ಪ್ರೋತ್ಸಾಹ ಹಾರೈಕೆಗಳಿರಲಿ ಎಂದು ಮನವಿ ಮಾಡಿದ್ದಾರೆ ನಿಖಿಲ್.

ಇನ್ನೂ ನಿಜಜೀವನ ಆಧರಿಸಿದ ರೈಡರ್ ಸಿನೆಮಾದಲ್ಲಿ ಕಾಮಿಡಿ ನಟ ಚಿಕ್ಕಣ್ಣ, ಶಿವರಾಜ್, ದತ್ತಣ ಸೇರಿದಂತೆ ಹಲವು ನಟರು ಅಭಿನಯಿಸುತ್ತಿದ್ದಾರೆ.

Trending

To Top