ಹುಟ್ಟುಹಬ್ಬದ ಸಂಭ್ರಮದಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ.. ಹುಟ್ಟುಹಬ್ಬದಂದು ವಿಶೇಷ ಗಿಫ್ಟ್ ಪಡೆದುಕೊಂಡ ನಟಿ..

ಸ್ಯಾಂಡಲ್ ವುಡ್ ನಲ್ಲಿ ತುಪ್ಪದ ಬೆಡಗಿ ಎಂದು ಫೇಮಸ್ ಆದ ನಟಿ ರಾಗಿಣೀ ದ್ವಿವೇದಿಗೆ ಇಂದು (ಮೇ.24) ಹುಟ್ಟುಹಬ್ಬದ ಸಂಭ್ರಮ. ಇನ್ನೂ ಪ್ರೀತಿಯ ನಟಿಗೆ ಅಭಿಮಾನಿಗಳಿಂದ ಹುಟ್ಟುಹಬ್ಬ ಶುಭಾಷಯಗಳ ಸುರಿಮಳೆ ಯಾಗುತ್ತಿದೆ. ಜೊತೆಗೆ ರಾಗಿಣಿಗೆ ಹುಟ್ಟುಹಬ್ಬದಂದು ವಿಶೇಷ ಗಿಫ್ಟ್ ಸಹ ದೊರೆತಿದೆ. ಅವರ ನಟನೆಯ ಸಿನೆಮಾದ ಮೋಷನ್ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ಗಿಫ್ಟ್ ಸಹ ನೀಡಲಾಗಿದೆ.

ಸ್ಯಾಂಡಲ್ ವುಡ್ ನಲ್ಲಿ ಅನೇಕ ಸಿನೆಮಾಗಳ ಮೂಲಕ ಅನೇಕ ಕನ್ನಡಿಗರ ಮನ ಗೆದ್ದ ನಟಿ ರಾಗಿಣಿ ದ್ವಿವೇದಿ. ಅನೇಕ ಸಿನೆಮಾಗಳಲ್ಲಿ ತಮ್ಮ ಬೋಲ್ಡ್ ನಟನೆಯೊಂದಿಗೆ ಮನರಂಜನೆ ನೀಡಿದ್ದಾರೆ. ಸುಮಾರು 25ಕ್ಕೂ ಹೆಚ್ಚಿನ ಸಿನೆಮಾಗಳಲ್ಲಿ ಬಣ್ಣ ಹಚ್ಚಿರುವ ಈಕೆ ಸಾರಿ ಕರ್ಮ ರಿಟರ್ನ್ಸ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಮೋಷನ್ ಪೋಸ್ಟರ್‍ ಬಿಡುಗಡೆ ಮಾಡುವ ಮೂಲಕ ಶುಭಾಷಯಗಳನ್ನು ಕೋರಿದ್ದಾರೆ. ಜೊತೆಗೆ ಅಭಿಮಾನಿಗಳಿಂದಲೂ ಸಹ ಶುಭಾಷಯಗಳ ಸುರಿಮಳೆಯಾಗುತ್ತಿದೆ. ಇನ್ನೂ ಈ ಸಿನೆಮಾ ಪೋಸ್ಟ್ ರಿಲೀಸ್ ಮಾಡುವ ನಿಟ್ಟಿನಲ್ಲಿ ಚಿತ್ರತಂಡ ಸುದ್ದಿಗೋಷ್ಟಿಯನ್ನು ನಡೆಸಿತ್ತು.

ಇನ್ನೂ ಮೋಷನ್ ಪೋಸ್ಟರ್‍ ಬಿಡುಗಡೆಯ ಸುದ್ದಿಗೋಷ್ಟಿಯಲ್ಲಿ ರಾಗಿಣಿ ಮಾತನಾಡಿ. ಅಫ್ಜಲ್ ಎಂಬ ಪತ್ರಕರ್ತ ನನ್ನನ್ನು ಭೇಟಿಯಾಗಿ ಈ ಚಿತ್ರ ಕುರಿತು ವಿವರ ಹೇಳಿದರು. ನನಗೆ ಈ ಚಿತ್ರದ ಕಥೆ ತುಂಬಾ ಇಷ್ಟವಾಯಿತು. ಇನ್ನೂ ಸಿನೆಮಾದ ನಿರ್ದೇಶಕ ಬ್ರಹ್ಮ ರವರ ಕುರಿತು ಸಹ ತಿಳಿದು ನನಗೆ ತುಂಭಾ ಆಶ್ಚರ್ಯವಾಯಿತು.  ನಿರ್ದೇಶಕ ಬ್ರಹ್ಮ ರವರು ಉತ್ತಮ ತಂತ್ರಜ್ಞರು. ನನಗೆ ಒಂದೇ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಇಷ್ಟವಾಗುವುದಿಲ್ಲ. ವಿಭಿನ್ನ ಪಾತ್ರಗಳಲ್ಲಿ ನಟಿಸುವ ಆಸೆ ನನಗಿದ್ದು. ಈ ಸಿನೆಮಾದಲ್ಲಿ ನಾನು ಇಲ್ಲಿಯವರೆಗೂ ಮಾಡದ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲೆ ಇರಲಿ ಎಂದು ಹೇಳಿದ್ದಾರೆ.

ಇನ್ನೂ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಬ್ರಹ್ಮ ಸಹ ಮಾತನಾಡಿ ಕಳೆದ ಎರಡು ಸಾವಿರ ಇಸವಿಯಿಂದಲೂ ನಾನು ಅನಿಮೇಷನ್ ಹಾಗೂ ವಿಎಫ್ ಎಕ್ಸ್  ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು, ಅನೇಕರಿಗೆ ತರಬೇತಿ ಸಹ ನೀಡುತ್ತಿದ್ದೇನೆ. ನಾನು ನಿರ್ದೇಶನ ಮಾಡಲಿರುವ ಎರಡನೇ ಸಿನೆಮಾ ಇದಾಗಿದೆ. ಇನ್ನೂ ಈ ಸಿನೆಮಾದಲ್ಲಿ ಯಾವುದೇ ಬ್ಲಾಕ್ ಮ್ಯಾಜಿಕ್ ಇರುವುದಿಲ್ಲ ಇದೊಂದು ಕ್ರೈಂ ಥ್ರಿಲ್ಲರ್‍ ಸಿನೆಮಾ ಆಗಿದೆ ಎಂದಿದ್ದಾರೆ. ಇನ್ನೂ ಈ ಸಿನೆಮಾಗೆ ಕೆನಡಾ ಮೂಲದ ನಿವಾಸಿ ನವೀನ್ ಕುಮಾರ್‍ ಎಂಬುವವರು ಬಂಡವಾಳ ಹಾಕಿದ್ದು, ಈಗಾಗಲೇ ಶೂಟಿಂಗ್ ಕೆಲಸಗಳು ಸಹ ಶುರುವಾಗಿದೆ. ಬೆಂಗಳೂರು ಹಾಗೂ ಸಕಲೇಶಪುರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿನೆಮಾ ಶೂಟಿಂಗ್ ನಡೆದಿದ್ದು, ಮುಂದಿನ ಶೂಟಿಂಗ್ ಶೆಡ್ಯೂಲ್ಡ್ ಹೈದರಾಬಾದ್ ನಲ್ಲಿ ನಡೆಯಲಿದೆ ಎನ್ನಲಾಗಿದೆ.

Previous articleನಯನತಾರಾಗೆ ಕೈ ತುತ್ತು ತಿನಿಸಿದ ಭಾವಿ ಪತಿ ವಿಘ್ನೇಶ್.. ನಾಚಿ ನೀರಾದ ನಯನತಾರಾ…
Next articleಪೋನ್ ಮಾಡಿ ಪ್ರಿಯಕರನಿಗೆ ಕ್ಲಾಸ್ ತೆಗೆದುಕೊಂಡ ನಟಿ ರಾಖಿ ಸಾವಂತ್…..