Film News

ನಟ ರಘುವೀರ್ ಅವರ ಪತ್ನಿ ಗೌರಿ ಮತ್ತು ಮಗಳು ಈಗ ಹೇಗಿದ್ದಾರೆ ಗೊತ್ತಾ ?

ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಎಂಬ ಚಿತ್ರದ ಮೂಲಕ ರಘುವೀರ್ ಎಂಬ ನಾಯಕ ಗಾಂಧಿನಗರದಲ್ಲಿ ಸಂಚಲನ ಸೃಷ್ಟಿಸಿದ್ದು ಈಗ ಇತಿಹಾಸ ಘಟಾನುಘಟಿ ಹೀರೊಗಳು ಮಿಂಚುತ್ತಿದ್ದ ಸಮಯದಲ್ಲಿ ಚಿತ್ರರಂಗ ಪ್ರವೇಶಿಸಿದ ರಘುವೀರ್ ಯಾರು ನಿರೀಕ್ಷೆ ಮಾಡದ ರೀತಿ ಗೆದ್ದು ಬೀಗಿದ್ದರು.ಹಿಯಾಳಿಸಿದವರ ಮುಂದೆ ದೊಡ್ಡ ಮಾರುಕಟ್ಟೆ ಸೃಷ್ಟಿಸಿಕೊಂಡು ಅಚ್ಚರಿಯಾಗಿ ನಿಂತರು.

ಶ್ರೀಮಂತ ಮನೆತನದಲ್ಲಿ ಹುಟ್ಟಿದರು ಎಲ್ಲರಿಂದಲೂ ದೂರ ಉಳಿದು ಬದುಕಿದರು.ಸ್ನೇಹಿತರು, ತನ್ನವರು ಎನಿಸಿಕೊಂಡವರು ಹಣಕ್ಕಾಗಿ ಮೋಜು ಮಸ್ತಿಗಾಗಿ ತನ್ನೊಂದಿಗೆ ಬಂದರೆ ಹೊರತು, ಕಷ್ಟದಲ್ಲಿದ್ದಾಗ ಯಾರು ಜೊತೆ ನಿಲ್ಲಲಿಲ್ಲ ಎಂದು ರಘುವೀರ್ ಕೊನೆಯಲ್ಲಿ ಹೇಳಿಕೊಂಡಿದ್ದರು.ಇನ್ನು ರಘುವೀರ್ ಅವರು ಅಗಲಿ 7 ವರ್ಷ ಕಳೆದಿದೆ.ರಘುವೀರ್ ಅವರ ಮೊದಲ ಪತ್ನಿ ಸಿಂಧು ಮತ್ತು ರಘುವೀರ್ ಗೆ ಒಬ್ಬ ಮಗಳಿದ್ದಾರೆ.

ರಘುವೀರ್ ಅವರ ಜೀವನದಲ್ಲಿ ನಡೆದ ಕೆಲವು ಘಟನೆಗಳಿಂದ ದುರಂತ ನಾಯಕನಾಗಿ ಉಳಿದುಬಿಟ್ಟರು. ನಟಿ ಸಿಂಧು ಜೊತೆ ಮದುವೆ, ತಮ್ಮ ತಂದೆ ಜೊತೆ ಭಿನ್ನಾಭಿಪ್ರಾಯ, ಸಿಂಧು ಸಾವು, ಸಿನಿಮಾಗಳ ಸೋಲಿನಿಂದ ಬಹಳ ನೋವು ಅನುಭವಿಸಿದರು. ಇಂತಹ ಸಂದರ್ಭದಲ್ಲಿ ರಘುವೀರ್ ಅವರ ಕೈ ಹಿಡಿದಿದ್ದು ಗೌರಿ.

ಮೊದಲ ಪತ್ನಿ ನಿಧನದ ಬಳಿಕ ಗೌರಿ ಜೊತೆ ಮದುವೆಯಾದ ರಘುವೀರ್ ಗೆ ಮಗಳು ಸಹ ಇದ್ದಾರೆ.ಮೊದಲೇ ಹೇಳಿದಂತೆ ಗೌರಿ ಹಾಗೂ ಸಿಂಧು ದಂಪತಿಗಳಿಗೂ ಒಬ್ಬ ಹೆಣ್ಣು ಮಗಳಿದ್ದರು. ಸದ್ಯದ ಮಾಹಿತಿ ಪ್ರಕಾರ ಚೆನ್ನೈ ನಲ್ಲಿ ಸಿಂಧು ಅವರ ತಂದೆ ತಾಯಿ ಕುಟುಂಬದವರ ಜೊತೆ ಇದ್ದಾರೆ.ಸಿಂಧು ರಘುವೀರ್ ಅವರ ಮಗಳ ಫೋಟೋ ಒಂದು ಲಭ್ಯವಾಗಿದ್ದು ಹೆಚ್ಚಿನ ಮಾಹಿತಿ ಏನು ತಿಳಿದಿಲ್ಲ.ಗೌರಿ ಮತ್ತು ರಘುವೀರ್ ದಂಪತಿಗೆ ಮೋಕ್ಷ ಎಂಬ ಹೆಣ್ಣು ಮಗಳಿದ್ದಾರೆ.

ರಘುವೀರ್ ಅವರ ಎರಡನೇ ಮಗಳು ಮೋಕ್ಷ ಈಗ ತಾಯಿಯ ಜೊತೆ ಬೆಂಗಳೂರಿನ ಬಿಟಿಯಮ್ ಲೇಔಟ್ ನಲ್ಲಿ ಇದ್ದಾರೆ.ಮೋಕ್ಷ ಈಗ ಎಸ್ ಎಸ್ ಎಲ್ ಸಿ ಓದುತ್ತಿದ್ದಾರೆ.

Trending

To Top