News

(video)ತಾಯಿ ರೂಪದ ಪತ್ನಿ ಕಾಲಿಗೆ ಬಿದ್ದರು ರಾಘವೇಂದ್ರ ರಾಜ್​ಕುಮಾರ್! ವಿಡಿಯೋ ನೋಡಿ

raganna

ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಾಘವೇಂದ್ರ ರಾಜಕುಮಾರ್ ಅವರು ಸುಮಾರು 14 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಹೆಸರು ಅಮ್ಮನ ಮನೆ. ಅಮ್ಮನ ಮನೆ ಚಿತ್ರದ ಒಂದು ಕಾರ್ಯಕ್ರಮ ನೆನ್ನೆ ಬೆಂಗಳೂರಿನಲ್ಲಿ ನಡೆದಿತ್ತು. ಈ ಸಮಾಯದಲ್ಲಿ ಅಮ್ಮನ ಮನೆ ಚಿತ್ರದ ತಂಡದವರು ಆಗಮಿಸಿದ್ದರು. ನಮ್ಮ ರಾಘಣ್ಣ ಸ್ಟೇಜ್ ಮೇಲೆ ಮಾತಾಡುವಾಗ ಅವರ ಜೊತೆ ಅವರ ಪತ್ನಿ ಕೂಡ ವೇದಿಕೆಯಲ್ಲಿ ಇದ್ದರು. ನನ್ನನ್ನ ತಾಯಿ ಸ್ವರೂಪವಾದ ನನ್ನ ಪತ್ನಿ ನನ್ನನ್ನು ನನ್ನ ಆರೋಗ್ಯದ ಸಮಸ್ಯೆಯ ಸಂದರ್ಭದಲ್ಲಿ ಬಹಳ ಚನ್ನಾಗಿ ನೋಡಿ ಕೊಂಡಿದ್ದಾರೆ, ಅವಳು ನನ್ನ ತಾಯಿಯ ಸಮಾನ ಎಂದು ಹೇಳಿ, ತನ್ನ ಪತ್ನಿಯ ಕಾಲಿಗೆ ನಮಸ್ಕಾರ ಮಾಡಿದ್ದಾರೆ, ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ವೈರಲ್ ಆಗಿದೆ, ನೀವು ಒಮ್ಮೆ ಇದನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಇತ್ತೀಚಿಗೆ ಕನ್ನಡ ಸಿನಿಮಾ ದಲ್ಲಿ ಒಂದು ಟ್ರೆಂಡ್ ನಡೆಯುತ್ತಾ ಇದೆ, ಅದು ಏನಪ್ಪಾ ಅಂದರೆ ಹಳೆಯ ಚಿತ್ರಗಳ ಹೆಸರುಗಳನ್ನೂ ಮರು ಬಾಳಿಕೆ ಮಾಡಲು ಶುರು ಮಾಡಿದ್ದಾರೆ. ಅದರಲ್ಲೂ ನಮ್ಮ ಅಣ್ಣಾವ್ರ ಚಿತ್ರಗಳ ಹೆಸರುಗಳನ್ನೂ ಪ್ರತಿ ವರ್ಷ ಅದೆಷ್ಟೋ ನಿರ್ಮಾಪಕರು ಮರು ಬಾಳಿಕೆ ಮಾಡುತ್ತಿದ್ದಾರೆ. ನಮ್ಮ ಕನ್ನಡದ ಲೆಜೆಂಡ್ ಡಾ ರಾಜಕುಮಾರ್ ಅವರ ಪುತ್ರ ರಾಘವೇಂದ್ರ ರಾಜಕುಮಾರ್ ಅವರು ಒಂದು ಪ್ರೆಸ್ ಮೀಟ್ ನಲ್ಲಿ “ಇನ್ನ ಮೇಲೆ, ಯಾರು ಕೂಡ, ಅಣ್ಣಾವ್ರ ಚಿತ್ರದ ಹೆಸರುಗಳನ್ನೂ ತಮ್ಮ ಚಿತ್ರಗಳಿಗೆ ಇಡುವಂತಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ, ಪವನ್ ವಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಿದೆ. ಟೀಸರ್ ಬಿಡುಗಡೆ ಆಗಿ ಕೆಲವೇ ಕೆಲವು ಘಂಟೆ ಗಳಲ್ಲಿ ಬರೋಬ್ಬರಿ 1 ಲಕ್ಷ ಜನ ಈ ಟೀಸರ್ ಅನ್ನು ನೋಡಿದ್ದಾರೆ. ಟೀಸರ್ ಮಾತ್ರ ಅದ್ಭುತ ವಾಗಿದೆ ಗುರು. ಅಪ್ಪು ಅವರ ಡಾನ್ಸ್ ಹಾಗು ಆಕ್ಷನ್ ಬಗ್ಗೆ ಮಾತಾಡೋಹಾಗೆ ಇಲ್ಲ! ನಟಸಾರ್ವಭೌಮ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಣ ಮಾಡಿದ್ದಾರೆ.
ನಟಸಾರ್ವಭೌಮ ಕನ್ನಡದ ಬಹು ನಿರೀಕ್ಷೆಯ ಚಿತ್ರಗಳಲ್ಲಿ ಒಂದು. ಈ ಚಿತ್ರದಲ್ಲಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮುಖ್ಯ ಪಾತ್ರ ದಲ್ಲಿ ನಟಿಸಿದ್ದಾರೆ. ಪುನೀತ್ ರಾಜಕುಮಾರ್ ಅವರ ಜೊತೆ ನಟಿಯರಾದ ರಚಿತಾ ರಾಮ್ ಹಾಗು ಅನುಪಮಾ ಅವರು ನಟಿಸಿದ್ದಾರೆ. ಇದಲ್ಲದೆ ನಟಸಾರ್ವಭೌಮ ಚಿತ್ರದಲ್ಲಿ ಆರ್ಮುಗಂ ರವಿಶಂಕರ್, ಚಿಕ್ಕಣ್ಣ, B ಸರೋಜಾ ದೇವಿ, ಅವರು ಕೂಡ ನಟಿಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಮುಗಿದಿದೆ, ಮುಂದಿನ ವರ್ಷ january ತಿಂಗಳಲ್ಲಿ ಈ ಚಿತ್ರ ನಿಮ್ಮ ನೆಚ್ಚಿನ ಚಿತ್ರಮಂದಿರ ಗಳಲ್ಲಿ ತೆರೆ ಕಾಣಲಿದೆ.
ಪುನೀತ್ ರಾಜಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರವೂ ಇದೆ ವರ್ಷ ಸೆಟ್ಟೇರಿತ್ತು. ಸುಮಾರು 8 ತಿಂಗಳ ಚಿತ್ರೀಕರಣದ ನಂತರ ಚಿತ್ರದ ಮೊದಲ ಟೀಸರ್ ಈಗ ಬಿಡುಗಡೆ ಆಗಿದೆ. ನಟಸಾರ್ವಭೌಮ ಚಿತ್ರವನ್ನು ಕೊಲ್ಕತ್ತಾ ದಲ್ಲಿ ಚಿತ್ರೀಕರಣ ಮಾಡಲಾಗಿತ್ತು. ನಟಸಾರ್ವಭೌಮ ಚಿತ್ರಕ್ಕೆ D ಇಮ್ಮನ್ ಅವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಈ ವರ್ಷದ ಬಹು ನಿರೀಕ್ಷೆಯ ಚಿತ್ರ ಗಳಲ್ಲಿ ನಟಸಾರ್ವಭೌಮ ಕೂಡ ಒಂದು. ನಟಸಾರ್ವಭೌಮ ಚಿತ್ರದ ಮುಂಚೆ ಪುನೀತ್ ರಾಜಕುಮಾರ್ ಅವರು ಅಂಜನಿ ಪುತ್ರ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಅಂಜನಿ ಪುತ್ರ ಚಿತ್ರವನ್ನು A ಹರ್ಷ ಅವರು ನಿರ್ದೇಶನ ಮಾಡಿದ್ದರು. ಇದಲ್ಲದೆ ನಿರ್ದೇಶಕ ಪವನ್ ವಡೆಯರ್ ಅವರ ಜೊತೆ ಇದು ಪುನೀತ್ ರಾಜಕುಮಾರ್ ಅವರ ಎರಡನೇ ಚಿತ್ರ. ಪವನ್ ವಡೆಯರ್ ಅವರು ಪುನೀತ್ ರಾಜಕುಮಾರ್ ಅವರಿಗೆ ಈ ಹಿಂದಿ ರಣ ವಿಕ್ರಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರ ಕೂಡ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಸುದ್ದಿ ಗಳಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top