Kannada News Channels

TV9 ಒಂದು ಕಾಲದ ಫೇಮಸ್ ನಿರೂಪಕಿಯಾಗಿದ್ದ ರಾಧಿಕಾ ರಾಣಿ ಈಗ ಎಲ್ಲಿದ್ದಾರೆ, ಏನ್ ಮಾಡ್ತಾ ಇದ್ದಾರೆ ಗೊತ್ತಾ!

ರಾಧಿಕಾ ರಾಣಿ ಕನ್ನಡದ ಅದ್ಭುತ ನ್ಯೂಸ್ ನಿರೂಪಕಿ ಹಾಗು ಪತ್ರಕರ್ತೆ! ನೇರ ನುಡಿ, ಬಹಳ ಸೊಗಸಾದ ಕನ್ನಡ, ನಗು ಮುಖದಿಂದ ರಾಧಿಕಾ ರಾಣಿ ಅವರು ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ರಾಧಿಕಾ ರಾಣಿ ಅವರು ಮೊದಲು ETV ನ್ಯೂಸ್ ನಲ್ಲಿ ಕೆಲಸ ಮಾಡಿ ನಂತರ ಸುಮಾರು 10 ವರ್ಷಗಳ ಕಾಲ ಟಿವಿ 9 ನ್ಯೂಸ್ ಮಾಧ್ಯಮದಲ್ಲಿ ಕೆಲಸ ಮಾಡಿದ್ದರು. ಟಿವಿ 9 ನಲ್ಲಿ ಮುಖ್ಯ ಪತ್ರಕರ್ತರಾದ ರಂಗನಾಥ್ ಭಾರದ್ವಾಜ್ ಅವರ ಪತ್ನಿ ರಾಧಿಕಾ ರಾಣಿ ಅವರು ಟಿವಿ 9 ತೊರೆದು ಈಗ ಎರಡು ವರ್ಷಗಳೇ ಕಳೆದಿವೆ. ಸದ್ಯ ರಾಧಿಕಾ ರಾಣಿ ಅವರು ಏನು ಮಾಡುತ್ತಾ ಇದ್ದಾರೆ ಗೊತ್ತಾ, ಈ ಸುದ್ದಿ ಪೂರ್ತಿ ಓದಿರಿ ಹಾಗು ತಿಳಿದು ಕೊಳ್ಳಿ

ಸದ್ಯ ರಾಧಿಕಾ ರಾಣಿ ಅವರು ತಮ್ಮ ಫ್ಯಾಮಿಲಿ ಲೈಫ್ ನಲ್ಲಿ ಬಹಳ ಬ್ಯುಸಿ ಆಗಿದ್ದು ಇದಲ್ಲದೆ ರಾಧಿಕಾ ಅವರು RSQURE MEDIA ಎಂಬ ಯೌಟ್ಯೂಬ್ ನ್ಯೂಸ್ ಚಾನಲ್ ಅನ್ನು ಸ್ಥಾಪನೆ ಮಾಡಿದ್ದಾರೆ. ಇದು ಒಂದು ಯೌಟ್ಯೂಬ್ ನ್ಯೂಸ್ ಚಾನಲ್ ಆಗಿದ್ದು, ಪ್ರತಿ ನಿತ್ಯ ರಾಧಿಕಾ ಅವರು, ಸಮಾಜದ ಆಗು ಹೋಗು ಗಳ ಬಗ್ಗೆ, ಲೈಫ್ ಸ್ಟೈಲ್ ಬಗ್ಗೆ, ಆಹಾರ ಬಗ್ಗೆ, ರಾಜಕೀಯದ ಬಗ್ಗೆ, ಸಂಸೃತಿಯ ಬಗ್ಗೆ ಈ ಚಾನಲ್ ನಲ್ಲಿ ಸುದ್ದಿ ಮಾಡುತ್ತಾರೆ! ಫ್ಯಾಮಿಲಿ ಲೈಫ್ ಜೊತೆಗೆ ರಾಧಿಕಾ ರಾಣಿ ಅವರು ತಮ್ಮ ಹೊಸ ಯೌಟ್ಯೂಬ್ ಚಾನಲ್ಲಿನ ಕೆಲಸಗಳಲ್ಲಿ ಕೂಡ ಬಹಳ ಬ್ಯುಸಿ ಆಗಿದ್ದಾರೆ.

ಇದಲ್ಲದೆ ರಾಧಿಕಾ ರಾಣಿ ಅವರು, ಹಲವಾರು ಪತ್ರಿಕೆಗಳಿಗೆ ಅಂಕಣಗಳನ್ನು ಕೂಡ ಬರೆಯುತ್ತಾರೆ! ಟಿವಿ 9 ನಲ್ಲಿ ರಾಧಿಕಾ ರಾಣಿ ಅವರು, ಸಿನಿಮಾಗೆ ಸಂಬಂಧ ಪಟ್ಟ ಸಂದರ್ಶನ, ಮಹಿಳೆಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಚರ್ಚೆ, ಸುದ್ದಿಗಳನ್ನು ಮಾಡುತ್ತಿದ್ದರು. ಇದಲ್ಲದೆ ರಾಧಿಕಾ ರಾಣಿ ಅವರು ವಾಯ್ಸ್ ಇನ್ನೂ ಕೂಡ ಬಹಳ ಫೇಮಸ್! ಹಲವಾರು ಮಾಧ್ಯಮಗಳಿಗೆ ಈಗ ಕೂಡ ತಮ್ಮ ಧ್ವನಿಯನ್ನು ನ್ಯೂಸ್ ಗಳಿಗೆ ಕೊಡುತ್ತಾರೆ! ರಾಧಿಕಾ ರಾಣಿ ಅವರ ಹೊಸ ಚಾನೆಲ್ ಗೆ ನಮ್ಮ ಕಡೆ ಇಂದ ಆಲ್ ದಿ ಬೆಸ್ಟ್, ಅವರಿಗೆ ಒಳ್ಳೇದ್ ಆಗಲಿ!

ರಾಧಿಕಾ ರಾಣಿ ಅವರ ಹೊಸ ಚಾನೆಲ್ ನ, ಇತ್ತೀಚಿನ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು! .ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸ್ಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿರಿ ಹಾಗು ಸಪೋರ್ಟ್ ಮಾಡಿರಿ.

Trending

To Top