Cinema

ಅಭಿಮಾನಿಗಳಿಗೆ ಮಗನ ಬಗ್ಗೆ ಮತ್ತೊಂದು ಸಿಹಿ ಸುದ್ದಿ ಕೊಟ್ಟ ರಾಧಿಕಾ ಪಂಡಿತ್! ಏನು ಗೊತ್ತಾ

ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿ ಮಕ್ಕಳ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದರಲ್ಲೂ ರಾಕಿ ಭಾಯ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮಕ್ಕಳ ಫೋಟೋಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಜನಪ್ರಿಯತೆ ಪಡೆದಿವೆ. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಸಹ ತಾವು ಹ್ಯಾಂಡಲ್ ಮಾಡುವ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇವುಗಳನ್ನು ಇಬ್ಬರು ಕಲಾವಿದರ ಅಭಿಮಾನಿಗಳು ಎಲ್ಲೆಡೆ ಹಂಚಿಕೊಂಡು ವೈರಲ್ ಮಾಡುತ್ತಾರೆ.

ಯಶ್ ರಾಧಿಕಾ ದಂಪತಿಯ ಇಬ್ಬರು ಮಕ್ಕಳಿಗೂ ಈಗಾಗಲೇ ಸಾಕಷ್ಟು ಫ್ಯಾನ್ ಗಳಿದ್ದಾರೆ. ಆದರೆ ಅಭಿಮಾನಿಗಳೆಲ್ಲರಲ್ಲೂ ಮೂಡಿದ್ದ ಪ್ರಶ್ನೆ ಯಶ್ ಮಗನಿಗೆ ನಾಮಕಾರಣ ಮಾಡುವುದು ಯಾವಾಗ, ಜ್ಯೂನಿಯರ್ ಯಶ್ ನ ಹೆಸರು ಏನಿರಬಹುದು ಎಂಬುದು. ಈ ಪ್ರಶ್ನೆ ಹಲವಾರು ದಿನಗಳಿಂದ ಎಲ್ಲರಿಗೂ ಕಾಡುತ್ತಿತ್ತು. ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡಿದ್ದಾರೆ ರಾಧಿಕಾ ಪಂಡಿತ್. ಎಲ್ಲರೂ ಅತಿ ಹೆಚ್ಚಾಗಿ ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಕೊಡುವ ಸಂದರ್ಭ ಈಗ ಬಂದಿದೆ, ಕೊನೆಗೂ ಜ್ಯೂನಿಯರ್ ಗೆ ಹೆಸರಿಡುವ ಸಂದರ್ಭ ಬಂದಿದೆ. ಶೀಘ್ರದಲ್ಲೇ ಹೆಸರು ಮತ್ತು ದಿನಾಂಕವನ್ನು ತಿಳಿಸಲಿದ್ದೇವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ರಾಧಿಕಾ.

ರಾಧಿಕಾ ಅವರ ಈ ಪೋಸ್ಟ್ ಅಭಿಮಾನಿಗಳಿಗೆ ಸಖತ್ ಥ್ರಿಲ್ ನೀಡಿದೆ. ಜ್ಯೂನಿಯರ್ ಯಶ್ ಗೆ ಏನು ಹೆಸರಿಡಬಹುದು ಎಂದು ಅಭಿಮಾನಿಗಳು ಈಗಾಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಮಗನಿಗೆ 6 ತಿಂಗಳು ತುಂಬಿದ ನಂತರ ಏಪ್ರಿಲ್ 30ರಂದು ಯಶ್ ರಾಧಿಕ ಇಬ್ಬರು ಸಹ ಮಗನ ಫೋಟೋವನ್ನು ರಿವೀಲ್ ಮಾಡಿದ್ದರು. ಆಗಿನಿಂದಲೂ ಜ್ಯೂನಿಯರ್ ಯಶ್ ಹೆಸರಿನ ಬಗ್ಗೆ ಎಲ್ಲೆಡೆ ಸಾಕಷ್ಟು ಚರ್ಚೆಯಾಗುತ್ತಿತ್ತು, ಇದೀಗ ಕೊನೆಗೂ ಆ ಸಮಯ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿ ಮಕ್ಕಳ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅದರಲ್ಲೂ ರಾಕಿ ಭಾಯ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮಕ್ಕಳ ಫೋಟೋಗಳಂತೂ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಜನಪ್ರಿಯತೆ ಪಡೆದಿವೆ. ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರೂ ಸಹ ತಾವು ಹ್ಯಾಂಡಲ್ ಮಾಡುವ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇವುಗಳನ್ನು ಇಬ್ಬರು ಕಲಾವಿದರ ಅಭಿಮಾನಿಗಳು ಎಲ್ಲೆಡೆ ಹಂಚಿಕೊಂಡು ವೈರಲ್ ಮಾಡುತ್ತಾರೆ.

Trending

To Top