Film News

ಜುಲೈ 30ರಂದು ತೆರೆಗೆ ಬರಲಿದೆ ರಾಧೆ ಶ್ಯಾಮ್ ಸಿನೆಮಾ!

ಹೈದರಾಬಾದ್: ಪಕ್ಕಾ ಲವ್ ಕಟೆಂಟ್ ಹೊಂದಿರುವ ಟಾಲಿವುಡ್ ಸ್ಟಾರ್ ನಟ ಬಾಹುಬಲಿ ಪ್ರಭಾಸ್ ಹಾಗೂ ಸೌತ್ ಇಂಡಿಯಾದ ಬಹುಬೇಡಿಕೆ ನಟಿ ಪೂಜಾ ಹೆಗ್ಡೆ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ರಾಧೆಶ್ಯಾಮ್ ಚಿತ್ರ ಇದೇ ಜುಲೈ 30, 2021 ರಂದು ಅದ್ದೂರಿಯಾಗಿ ತೆರೆಗೆ ಬರಲಿದೆ.

ಕಳೆದ ದಿನವಷ್ಟೆ ಪ್ರೇಮಿಗಳ ದಿನದಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ ಚಿತ್ರತಂಡ. ಪಕ್ಕಾ ಲವ್ ಸ್ಟೋರಿಯನ್ನು ಹೊಂದಿರುವ ಈ ಚಿತ್ರದ ಟೀಸರ್ ಪ್ರೇಮಿಗಳ ದಿನದಂದೇ ಬಿಡುಗಡೆ ಮಾಡಲು ಚಿತ್ರ ತಂಡ ಪ್ಲಾನ್ ಮಾಡಿತ್ತು. ಅದರಂತೆ ಅದೇ ದಿನ ಟೀಸರ್ ಬಿಡುಗಡೆಯ ಜೊತೆಗೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ ಚಿತ್ರತಂಡ.

ಇನ್ನೂ ಟೀಸರ್‌ನ ವಿಷಯಕ್ಕೆ ಬಂದಲ್ಲಿ, ಪ್ಯಾರೀಸ್ ನ ರೈಲ್ವೆ ನಿಲ್ದಾಣದಲ್ಲಿ ಪ್ರಭಾಸ್ ಪ್ರೇಯಸಿಗಾಗಿ ಹುಡುಕಿತ್ತಿರುತ್ತಾರೆ. ಫ್ರೆಂಚ್ ಭಾಷೆಯಲ್ಲಿ ಲವ್ ಡೈಲಾಗ್ ಸಹ ಹೇಳುತ್ತಿರುತ್ತಾರೆ. ಈ ವೇಳೆ ಪ್ರೇಯಸಿ ಅಂದರೇ ಪೂಜಾ ಹೆಗ್ಡೆ ನೀನೇನು ರೋಮಿಯೋ ನಾ ಎಂದರೇ ಪ್ರಭಾಸ್ ರೊಮಿಯೋ ಪ್ರೀತಿಗಾಗಿ ಜೀವನವನ್ನೆ ಕೊಟ್ಟ ರೊಮೀಯೋ, ಆದರೆ ನಾನು ರೊಮೀಯೋ ಅಲ್ಲ ಎಂದು ಹೇಳುವ ಡೈಲಾಗ್ ಟ್ರೆಂಡಿಂಗ್ ಆಗಿದೆ.

ರಾಧೆ ಶ್ಯಾಮ್ ಟೀಸರ್ ಕೆಲವೆ ಸೆಕೆಂಡುಗಳನ್ನು ಒಳಗೊಂಡಿದ್ದರೂ ಸಹ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿಮಾನಿಗಳನ್ನು ರಂಜಿಸುತ್ತಿದೆ. ರಾಧೆ ಶ್ಯಾಮ್ ಚಿತ್ರ ಕೆಲವು ದಶಕಗಳ ಹಿಂದೆ ನಡೆದ ಲವ್ ಸ್ಟೋರಿ ಕಥೆಯಾಗಿದ್ದು, ರಾಧಾಕೃಷ್ಣ ನಿರ್ದೇಶನದಲ್ಲಿ, ಭೂಷಣ್ ಕುಮಾರ್, ವಂಶಿ ಪ್ರಮೋದ್ ನಿರ್ಮಾಣದಲ್ಲಿ ತಯಾರಾಗಿದೆ.

Trending

To Top