Film News

ರಾಧೆಶ್ಯಾಮ್ ಟೀಸರ್ ಡೈಲಾಗ್ ಲೀಕ್!

ಹೈದರಾಬಾದ್: ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ದಕ್ಷಿಣ ಭಾರತದ ಬಹುಬೇಡಿಕೆ ನಟಿ ಪೂಜಾ ಹೆಗ್ಡೆ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ರಾಧೆಶ್ಯಾಮ್ ಚಿತ್ರದ ಟೀಸರ್ ಫೆ.14 ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದ್ದು, ಇದೀಗ ಟೀಸರ್‌ನಲ್ಲಿನ ಡೈಲಾಗ್ ಒಂದು ಲೀಕ್ ಆಗಿದ್ದು ಸಖತ್ ವೈರಲ್ ಆಗುತ್ತಿದೆ.

ಪಾನ್ ಇಂಡಿಯಾದಡಿ ಸಿದ್ದವಾಗಿರುವ ರಾಧೆಶ್ಯಾಮ್ ಚಿತ್ರ ಘೋಷಣೆಯಾದಾಗಿನಿಂದ ಅಭಿಮಾನಿಗಳಲ್ಲಿ ಒಂದು ರೇಂಜ್‌ನಲ್ಲಿ ಕ್ರೇಜ್ ಹುಟ್ಟಿಸಿದೆ. ಆದರೆ ಚಿತ್ರದ ಅಪ್ಡೇಟ್ ಮಾತ್ರ ಸ್ವಲ್ಪ ನಿಧಾನವಾಗಿ ಬರುತ್ತಿರುವುದರಿಂದ ಅಭಿಮಾನಿಗಳಲ್ಲಿ ನಿರಾಸೆ ಸಹ ಇದೆ. ಕೆಲವು ದಿನಗಳ ಹಿಂದೆಯಷ್ಟೆ ಟೀಸರ್ ಬಿಡುಗಡೆಗೂ ಮೊದಲು ಪ್ರೀ ಟೀಸರ್ ಬಿಡುಗಡೆ ಮಾಡಿ ಅಭಿಮಾನಿಗಳನ್ನು ಫಿದಾ ಆಗುವಂತೆ ಮಾಡಿದ್ದರು.

ನಟ ಪ್ರಭಾಸ್ ವಿಕ್ರಮಾಧಿತ್ಯ ಪಾತ್ರದಲ್ಲಿ ನಟಿ ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ನಟಿಸುತ್ತಿದ್ದು, ಈ ಇಬ್ಬರ ನಡುವೆ ನಡೆಯುವ ಒಂದು ಡೈಲಾಗ್ ಲೀಕ್ ಆಗಿದೆ. ಇನ್ನೂ ಪ್ರಭಾಸ್ ಇಟಾಲಿಯನ್ ಡೈಲಾಗ್ ಹೇಳುವ ಮೂಲಕ ಟೀಸರ್ ಪ್ರಾರಂಭವಾಗಲಿದೆಯಂತೆ. ಇನ್ನೂ ಪೂಜಾ ಹೆಗ್ಡೆ ಹೇಳುವ ಪ್ರಶ್ನೆಗೆ ಪ್ರಭಾಸ್ ಹೇಳುವ ಸಮಾಧಾನ ಪವರ್‌ಫುಲ್ ಆಗಿದೆ ಎನ್ನಲಾಗಿದೆ. ಲೀಕ್ ಆದ ಡೈಲಾಗ್ ನಲ್ಲಿ ಪ್ರೇರಣ (ಪೂಜಾ ಹೆಗ್ಡೆ) ನುವ್ವು ಏಮೈನಾ ರೊಮಿಯೋ ಅನುಕುಂಟುನ್ನಾವ? ಎಂದು ಹೇಳಿದ್ರೆ, ವಿಕ್ರಾಮಾಧಿತ್ಯ (ಪ್ರಭಾಸ್) ಪ್ರೇಮ ಕೊಸಂ ರೊಮಿಯೋ ಚನಿಪೊಯಾಡು, ಮನಂ ಅಲಕಾದು ಎನ್ನುವ ಡೈಲಾಗ್ ವೈರಲ್ ಆಗುತ್ತಿದೆ.

ಇನ್ನೂ ನಿರ್ದೇಶಕ ರಾಧಕೃಷ್ಣ ನಿರ್ದೇಶನದಲ್ಲಿ ರಾಧೆಶ್ಯಾಮ್ ಚಿತ್ರ ಮೂಡಿಬಂದಿದ್ದು, ಯೂವಿ ಕ್ರಿಯೇಷನ್ ಹಾಗೂ ಗೋಪಿಕೃಷ್ಣ ಬ್ಯಾನರ್ ಇವರ ಸಂಯುಕ್ತಾಶ್ರದಲ್ಲಿ ಸಿನೆಮಾ ತೆರೆಗೆ ಬರಲಿದೆ. ರಾಧೆಶ್ಯಾಮ್ ಚಿತ್ರ ರೊಮ್ಯಾಂಟಿಕ್ ಲವ್ ಅಂಡ್ ಅಡ್ವೆಂಚರ್ ಸಿನೆಮಾ ಇದಾಗಲಿದೆಯಂತೆ.

Trending

To Top