Cinema

ಯುವಕರ ಹಾ#ಟ್ ಫೆವರೇಟ್ ರಾಧಾ ಕೃಷ್ಣ ಧಾರಾವಾಹಿಯ ರಾಧೆ ನಿಜಕ್ಕೂ ಯಾರು ಗೊತ್ತಾ! ನಿಜ ಜೇವನದಲ್ಲಿ ಹೇಗಿದ್ದಾರೆ ನೋಡಿ

ಲಾಕ್ ಡೌನ್ ಶುರುವಾಗಿ ಕನ್ನಡ ಧಾರಾವಾಹಿಯ ಚಿತ್ರೀಕರಣಗಳು ಸ್ಥಗಿತವಾದ ನಂತರ ವೀಕ್ಷಕರಿಗೆ ಮನರಂಜನೆ ನೀಡುವ ಸಲುವಾಗಿ ಹಿಂದಿ ಭಾಷೆಯ ಕೆಲವು ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲು ಆರಂಭಿಸಲಾಗಿತ್ತು. ಡಬ್ಬಿಂಗ್ ಧಾರಾವಾಹಿಗಳು ಕನ್ನಡದಲ್ಲಿ ಜನಪ್ರಿಯತೆ ಪಡೆದವು. ಅದರಲ್ಲೂ ಪೌರಾಣಿಕ ಧಾರಾವಾಹಿಗಳು ಕನ್ನಡದ ಕಿರುತೆರೆ ಪ್ರಿಯರನ್ನು ಆಕರ್ಷಿಸಿದವು. ವಿಶೇಷವಾಗಿ ರಾಧೆಕೃಷ್ಣ ಸೀರಿಯಲ್ ಎಲ್ಲರ ಫೇವರೆಟ್ ಆಗಿದೆ. ಕೃಷ್ಣ ಹಾಗೂ ರಾಧಾಳ ನಿಷ್ಕಲ್ಮಶ ಪ್ರೀತಿಯನ್ನು ತೋರಿಸುವ ಈ ಧಾರಾವಹಿಗೆ ಮನಸೋಲದವರಿಲ್ಲ. ರಾಧೆ ಹಾಗೂ ಕೃಷ್ಣನ ಪ್ರೀತಿಯನ್ನು ನೋಡುತ್ತಿದ್ದರೆ ಎಂಥವರು ಸಹ ಪ್ರೀತಿಯಲ್ಲಿ ಬೀಳುತ್ತಾರೆ. ಸ್ಕ್ರೋಲ್ ಡೌನ್ ಮಾಡಿ ಈ ವಿಡಿಯೋ ನೋಡಿ
ಅಂತಹ ಪವಿತ್ರವಾದ ಪ್ರೀತಿ ರಾಧೆ ಹಾಗೂ ಕೃಷ್ಣನದ್ದು. ಈ ಧಾರಾವಾಹಿ ಕನ್ನಡದಲ್ಲೂ ಸಹ ಇಷ್ಟು ಜನಪ್ರಿಯತೆ ಪಡೆಯಲು ಮುಖ್ಯ ಕಾರಣ ಇದರಲ್ಲಿ ರಾಧೆ ಹಾಗೂ ಕೃಷ್ಣನ ಪಾತ್ರದಲ್ಲಿ ನಟಿಸಿರುವ ಕಲಾವಿದರು. ಕೃಷ್ಣನ ಪಾತ್ರವನ್ನು ನಟ ಸುಮೇದ್ ನಿರ್ವಹಿಸಿದ್ದು. ರಾಧೆಯ ಪಾತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸಿದ್ದಾರೆ. ಮಲ್ಲಿಕಾ ಸಿಂಗ್ ಮೂಲತಃ ಕಾಶ್ಮೀರದವರು. ಈ ಕೆಳಗಿನ ವಿಡಿಯೋ ನೋಡಿ
ಧಾರಾವಾಹಿಯಲ್ಲಿ ನಟಿಸುವ ಸಲುವಾಗಿ ಕಾಶ್ಮೀರದಿಂದ ಮುಂಬೈ ಗೆ ಬಂದು ನೆಲೆಸಿದ್ದಾರೆ. ಮಲ್ಲಿಕಾ ಸಿಂಗ್ ಅವರದ್ದು ಧಾರ್ಮಿಕ ಹಿಂದೂ ಕುಟುಂಬ, ಅವರ ತಾಯಿ ಕ್ಲಾಸಿಕಲ್ ಡ್ಯಾನ್ಸ್ ಟೀಚರ್ ಹಾಗಾಗಿ ಮಲ್ಲಿಕಾ ಸಹ ಒಳ್ಳೆಯ ನೃತ್ಯಗಾರ್ತಿ. 10ನೇ ತರಗತಿ ಓದುವಾಗ ತನಗಿಷ್ಟವಿಲ್ಲದಿದ್ದರೂ ತಾಯಿಯ ಬಲವಂತದಿಂದ ಧಾರಾವಾಹಿಗೆ ಆಡಿಷನ್ ಕೊಟ್ಟಿದ್ದರಂತೆ ಮಲ್ಲಿಕಾ. ಎರಡು ವರ್ಷದ ನಂತರ ಅಂದರೆ 2018 ರಲ್ಲಿ ಧಾರಾವಾಹಿ ಆರಂಭವಾಗಿದೆ. ಎರಡು ವರ್ಷದ ನಂತರ ನೀವು ಧಾರಾವಾಹಿಗೆ ಆಯ್ಕೆಯಾಗಿದ್ದೀರಾ ಎಂದು ಕರೆ ಬಂತಂತೆ.
ರಾಧಾ ಕೃಷ್ಣ ಧಾರಾವಾಹಿಗೆ ಈಕೆ ಸೆಲೆಕ್ಟ್ ಆಗಲು ಮುಖ್ಯ ಕಾರಣ ಅವರ ಮುಗ್ಧ ಮುಖ.ಹಾಗಾಗಿ ನಟನೆಯ ಸಲುವಾಗಿ ಚಿಕ್ಕ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಬಿಟ್ಟು ಮುಂಬೈಗೆ ಬರಬೇಕಾಯಿತು, ಸಧ್ಯಕ್ಕೆ ಮುಂಬೈ ನಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದಾರಂತೆ ಮಲ್ಲಿಕಾ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಈ ನಟಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇವರ ಫೋಟೋಗಳನ್ನನೋಡಿ ಅಭಿಮಾನಿಗಳಂತೂ ಫುಲ್ ಖುಷ್ ಆಗಿದ್ದಾರೆ.
ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗು ಇದನ್ನು ತಪ್ಪದೆ ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿಯನ್ನು ಮರೆಯದೆ ಶೇರ್ ಮಾಡಿರಿ

Trending

To Top