Cinema

ಕನ್ನಡ ನಟಿ ರಚಿತಾ ರಾಮ್ ದೊಡ್ಡ ಸುದ್ದಿಯನ್ನು ಕೊಟ್ಟಿದ್ದಾರೆ! ಅದು ಏನು ಗೊತ್ತಾ

ಇತ್ತೀಚೆಗೆ ಸಿನಿರಂಗದಲ್ಲಿ 8 ವರ್ಷಗಳನ್ನು ಪೂರೈಸಿದ ನಟಿ ರಚಿತಾ ರಾಮ್ ಲಾಕ್ ಡೌನ್ ನಡುವೆ ಕೂಡ, ಸಾಮಾಜಿಕ ಅಂತರ ಪಾಲಿಸಿ, ತೆಲುಗು ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಕನ್ನಡದಲ್ಲಿ ಸೂಪರ್ ಹಿಟ್ ನಟಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ತೆಲುಗು ಚಿತ್ರದಲ್ಲೂ ಮೋಡಿ ಮಾಡಿ ಅಲ್ಲಿ ಕೂಡ ಲಕ್ಕಿ ಸ್ಟಾರ್ ಆಗಲಿದ್ದಾರಾ ಕಾಡು ನೋಡಬೇಕು. ಲಾಕ್ ಡೌನ್ ಇದ್ದರೂ ಸಾಲು ಸಾಲು ಸಿಹಿ ಸುದ್ದಿಗಳನ್ನು ನೀಡುತ್ತಿದ್ದಾರೆ ರಚಿತಾ. ಕರೊನಾ ಕೋಲಾಹಲ ಇದ್ದರೂ ರಚಿತಾ ಅಭಿನಯಿಸಲಿರುವ ಹೊಸ ಸಿನಿಮಾಗಳ ಬಗ್ಗೆ ಹಲವಾರು ಸುದ್ದಿಗಳು ಸ್ಯಾಂಡಲ್ ವುಡ್ ನಲ್ಲಿ ಹರಿದಾಡುತ್ತಿವೆ.
ಕೆಲ ದಿನಗಳ ಹಿಂದೆ ಸೈಕಲಾಜಿಕಲ್ ಥ್ರಿಲ್ಲರ್ ನಲ್ಲಿ ರಚಿತಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಎಲ್ಲವೂ ಸಹಜ ಸ್ಥಿತಿಗೆ ಮರಳಿದ ಬಳಿಕ ಸಿನಿಮಾ ಶೂಟಿಂಗ್ ಕೆಲಸಗಳು ಆರಂಭವಾಗಲಿದೆ ಎನ್ನಲಾಗಿತ್ತು. ಇದೀಗ ರಚಿತಾ ಅಭಿನಯಿಸಲಿರುವ ಮತ್ತೊಂದು ಹೊಸ ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಬಂದಿದೆ. 2018 ರಲ್ಲಿ ತಮಿಳಿನಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಿನಿಮಾ, ಕೋಲಮಾವು ಕೋಕಿಲ . ಈ ಸಿನಿಮಾವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ತಯಾರಿ ನಡೆಯುತ್ತಿದ್ದು ರಚಿತಾ ರಾಮ್ ನಾಯಕಿಯಾಗಿ ನಟಿಸಲಿದ್ದಾರಂತೆ.
ತಮಿಳಿನಲ್ಲಿ ನಟಿ ನಯನತಾರ ನಿರ್ವಹಿಸಿದ ಪಾತ್ರವನ್ನು ಕನ್ನಡದಲ್ಲಿ ರಚಿತಾ ರಾಮ್ ನಿರ್ವಹಿಸಲಿದ್ದಾರಂತೆ. ರಿಮೇಕ್ ರೈಟ್ಸ್ ಕುರಿತಾದ ಮಾತುಕತೆ ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಕೋಲಮಾವು ಕೋಕಿಲಾ ಕನ್ನಡದಲ್ಲಿ ಸೆಟ್ಟೇರುವ ಲಕ್ಷಣಗಳಿವೆ. ಕನ್ನಡದಲ್ಲಿ “ಪಂಕಜ ಕಸ್ತೂರಿ” ಎಂದು ಹೆಸರಿಡಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಕನ್ನಡ್ ಗೊತ್ತಿಲ್ಲ ಸಿನಿಮಾ ಖ್ಯಾತಿಯ ಆರ್.ಜೆ.ಮಯೂರ ರಾಘವೇಂದ್ರ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ.

Trending

To Top