Kannada Cinema News

ರಚಿತಾ ರಾಮ್ ಹುಟ್ಟು ಹಬ್ಬಕ್ಕೆ ಒಂದರ ಮೇಲೊಂದು ಸರ್ಪ್ರೈಸ್ ಕೊಟ್ಟ ತಾರೆಯರು! ಏನು ಗೊತ್ತಾ

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಉತ್ತಮ ನಟನೆ, ನೇರ ನುಡಿ, ಅಭಿಮಾನಿಗಳೊಡನೆ ಸ್ನೇಹಿತರಂತೆ ಬೆರೆಯುವ ರಚಿತಾ, ಈ ಎಲ್ಲಾ ಕಾರಣಗಳಿಂದ ಕರ್ನಾಟಕದಲ್ಲಿ ತಮ್ಮದೇ ಆದ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಂತೂ ರಚಿತಾರಿಗೆ ಸಾಕಷ್ಟು ಫ್ಯಾನ್ ಪೇಜ್ ಗಳಿವೆ. ನಿನ್ನೆಯಷ್ಟೇ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಹುಟ್ಟುಹಬ್ಬ ಇತ್ತು. ಇಷ್ಟು ವರ್ಷ ರಚಿತಾ ಮನೆ ಬಳಿ ಸಹಸ್ರಾರು ಅಭಿಮಾನಿಗಳು ತೆರಳಿ ಕೇಕ್ ಕ’ಟ್ ಮಾಡಿಸಿ, ಶುಭಾಶಯ ತಿಳಿಸುತ್ತಿದ್ದರು. ಆದರೆ ಈ ವರ್ಷ ದೇಶದ ಪರಿಸ್ಥಿತಿ ಹೇಗಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಹಾಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಿಂದಲೇ ಮೆಚ್ಚಿನ ನಟಿಗೆ ಶುಭಾಶಯ ತಿಳಿಸಿದ್ದಾರೆ. ವಿಧವಿಧವಾದ ರೀತಿಯಲ್ಲಿ, ರಿಚಿತಾರ ಫೋಟೋ ಎಡಿ’ಟ್ ಮಾಡಿ, ವಿಡಿಯೋ ಎಡಿಟ್ ಮಾಡಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ.

ರಚಿತಾರ ಹುಟ್ಟುಹಬ್ಬದಂದು ಅವರ ಅಭಿಮಾನಿಗಳಿಗೆ ಸಾಕಷ್ಟು ಸಾಕಷ್ಟು ಸರ್ಪ್ರೈಸ್ ಗಳು ಸಿಕ್ಕಿವೆ. ಅದು ಹೇಗೆ ಅಂತೀರಾ.. ರಚಿತಾ ಅಭಿನಯದ ಸಿನಿಮಾ ತಂಡಗಳಿಂದ ಹೊಸ ಪೋಸ್ಟರ್ ಗಳು ಬಿಡುಗಡೆಯಾಗಿವೆ. ಹಾಗೂ ರಚಿತಾ ನಟಿಸಲಿರುವ ಹೊಸ ಸಿನಿಮಾಗಳ ಅನೌನ್ಸ್ಮೆಂಟ್ ಸಹ ಆಗಿದೆ. ನಮಗೆಲ್ಲಾ ತಿಳಿದಿರುವ ಹಾಗೆ ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ, ಹಾಗೂ ಹಿರಿಯ ನಟ ರಮೇಶ್ ಅರವಿಂದ್ ಅವರ 100 ಸಿನಿಮಾದಲ್ಲಿ ರಚಿತಾ ನಟಿಸಿದ್ದು ಈ ಎರಡು ಸಿನಿಮಾಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿವೆ.

ಜೊತೆಗೆ, ನಿನ್ನೆ ರಚಿತಾ ರಾಮ್ ಹುಟ್ಟುಹಬ್ಬದ ವಿಶೇಷವಾಗಿ “ಲಿಲ್ಲಿ” ಹೆಸರಿನ ಹೊಸ ಸಿನಿಮಾ ಅನೌನ್ಸ್ ಆಗಿದೆ. ಜೊತೆಗೆ ನಟ ಸತೀಶ್ ನೀನಾಸಂ ಜೊತೆ “ಮ್ಯಾಟ್ನಿ” ಎಂದು ಟೈಟಲ್ ಇರುವ ಹೊಸ ಸಿನಿಮಾದಲ್ಲಿ ಮಿಂಚಲಿದ್ದಾರೆ ರಚಿತಾ, ಈ ಜೋಡಿ ಈ ಜೋಡಿ ಅಯೋಗ್ಯ ಸಿನಿಮಾದಲ್ಲಿ ನಟಿಸಿತ್ತು. ಜೊತೆಗೆ ಪುಷ್ಪಕವಿಮಾನ ಸಿನಿಮಾ ತಂಡ ನಿರ್ಮಿಸಲಿರುವ ಹೊಸ ತಂಡದಲ್ಲಿ ಸಹ ರಚಿತಾ ನಟಿಸಲಿದ್ದಾರೆ. ಈ ಎಲ್ಲಾ ಸಿನಿಮಾಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಂತೋಷವಾಗಿ ಹಂಚಿಕೊಂಡಿದ್ದಾರೆ ರಚಿತಾ.

ಲಾಕ್ ಡೌನ್ ಇದ್ದರೂ ಸಹ ನಟಿ ರಚಿತಾ ರಾಮ್ ಕೈಯಲ್ಲಿ ಇಷ್ಟೊಂದು ಸಿನಿಮಾ ಇರುವುದು ಅವರಿಗಿರುವ ಬೇಡಿಕೆಯನ್ನು ತೋರಿಸುತ್ತದೆ. ಹಾಗೂ, ಸ್ಯಾಂಡಲ್ ವುಡ್ ನ ಬ್ಯುಸಿಯೆಸ್ಟ್ ನಟಿಯರಲ್ಲಿ ಒಬ್ಬರು ರಚಿತಾ ರಾಮ್ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇನ್ನು ನಟಿಯ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇಲ್ಲ.

Trending

To Top