News

(video)ಐ ಲವ್ ಯು ಚಿತ್ರದ ಟ್ರೇಲರ್ ನೋಡಿ ಹುಡುಗರ ಕಾಲೆಳೆದ ರಚಿತಾ ರಾಮ್! ವಿಡಿಯೋ ನೋಡಿ

rachita1

ನೆನ್ನೆ ಬೆಂಗಳೂರಿನಲ್ಲಿ R ಚಂದ್ರು ನಿರ್ದೇಶನದ ರಿಯಲ್ ಸ್ಟಾರ್ ಉಪೇಂದ್ರ ಹಾಗು ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಭಿನಯದ I LOVE YOU ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ನಮ್ಮ ಕರುನಾಡ ಚಕ್ರವರ್ತಿ ಶಿವಣ್ಣ ಅವರು ಕೂಡ ಬಂದಿದ್ದರು. ಶಿವಣ್ಣ ಅವರು ಉಪೇಂದ್ರ ಅವರ ಬಗ್ಗೆ, R ಚಂದ್ರು ಅವರ ಬಗ್ಗೆ, I ಲವ್ ಯು ಚಿತ್ರದ ಬಗ್ಗೆ , ಇದಲ್ಲದೆ KGF ಚಿತ್ರದ ಬಗ್ಗೆ ಕೂಡ ಮಾತಾಡಿದ್ದರು. ಇದಾದ ನಂತರ ಚಿತ್ರ ಹೀರೋಯಿನ್ ಆದ ರಚಿತಾ ರಾಮ್ ಅವರು ಕೂಡ ಮೀಡಿಯಾದವರ ಜೊತೆ ಮಾತಾಡಿದ್ದಾರೆ. ರಚಿತಾ ರಾಮ್ ಅವರು ಹುಡುಗರ ಕಾಲೆಳೆದಿದ್ದಾರೆ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ಪ್ರಜಕೀಯ ಪಾರ್ಟಿ ಶುರು ಆದಮೇಲೆ ಬಹಳ ಬ್ಯುಸಿ ಆಗಿದ್ದರು. ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಮ್ಮಿ ಮಾಡಿದ್ದರು. ಈಗ ಮತ್ತೆ ಉಪ್ಪಿ ಇಸ್ ಬ್ಯಾಕ್ ಎಂದೇ ಹೇಳಬಹುದು. ರಿಯಲ್ ಸ್ಟಾರ್ ಉಪೇಂದ್ರ ಹಾಗು ರಚಿತಾ ರಾಮ್ ನಟನೆಯ ಕನ್ನಡದ ಹೊಚ್ಚ ಹೊಸ ಚಿತ್ರ I LOVE YOU ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಈ ಚಿತ್ರವನ್ನು R ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ನೆನ್ನೆ ಬೆಂಗಳೂರಿನಲ್ಲಿ ನಮ್ಮ ಶಿವಣ್ಣ ಅವರು ಲಾಂಚ್ ಮಾಡಿದ್ದಾರೆ. I LOVE YOU ಚಿತ್ರದ ಟ್ರೇಲರ್ ಹೇಗಿದೆ ಗೊತ್ತ? ಈ ಕೆಳಗಿನ ಟ್ರೇಲರ್ ವಿಡಿಯೋ ತಪ್ಪದೆ ನೋಡಿರಿ ಹಾಗು ನಿಮ್ಮ ಅಭಿಪ್ರಾಯ ತಿಳಿಸಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಶಿವಣ್ಣ ಅವರಿಗೆ OM ಎನ್ನುವ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಓಂ ಚಿತ್ರ ಅದೆಷ್ಟೋ ಸಲ ಮರು ಬಿಡುಗಡೆ ಆಗಿರುವುದು ನಿಮಗೆ ಗೊತ್ತೇ ಇದೆ. ಎಷ್ಟೇ ಸಲ ಬಿಡುಗಡೆ ಆದರೂ ಓಂ ಚಿತ್ರ ಇನ್ನೂ ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತದೆ. ಓಂ ಚಿತ್ರದಲ್ಲಿ ರಿಯಲ್ ರೌಡಿಸಂ ಹಾಗು ಅಂಡರ್ ವರ್ಲ್ಡ್ ಕಥೆ ಇತ್ತು. ಓಂ ಚಿತ್ರದಲ್ಲಿ ಉಪೇಂದ್ರ ಅವರು ನಿಜವಾದ ರೌಡಿಗಳ ಕೈಯಲ್ಲಿ ನಟನೆ ಮಾಡಿಸಿದ್ದರು. ಈಗ ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ ಉಪ್ಪಿ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ, ಕನ್ನಡಕ್ಕೆ , ಕನ್ನಡ ಚಿತ್ರ ರಂಗಕ್ಕೆ ಒಂದು ಹೊಸ ತಿರುವು ಕೊಟ್ಟಿದೆ. ಇಡೀ ದೇಶದ ಜನ ನಮ್ಮ ಕನ್ನಡದತ್ತ ಇದೆ ಮೊದಲ ಬಾರಿಗೆ ತಿರುಗಿ ನೋಡುವಂತೆ ಮಾಡಿದ KGF ತಂಡಕ್ಕೆ, ಹಾಗು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಒಂದು ಸಲಾಂ! ನೆನ್ನೆ ಬೆಂಗಳೂರಿನಲ್ಲಿ ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದ ಟ್ರೈಲರ್ ಲಾಂಚ್ ಸಮಾರಂಭದಲ್ಲಿ ಶಿವಣ್ಣ ಅವರು ಕೂಡ ಬಂದಿದ್ದರು. ಈ ಸಮಯದಲ್ಲಿ KGF ಚಿತ್ರದ ಬಗ್ಗೆ ಕೇಳಿದಾಗ, ಶಿವಣ್ಣ ಅವರು ನಾನು KGF ತರ ಒಂದು ಚಿತ್ರ ಮಾಡುತ್ತೇನೆ, KGF ಚಿತ್ರ ತಂಡಕ್ಕೆ ಒಂದು ಸಲಾಂ ಎಂದು ಹೇಳಿದ್ದಾರೆ.

Trending

To Top