Film News

ಮಾರುವೇಷದಲ್ಲಿ ಸುತ್ತಾಡಿದ ರಚಿತರಾಮ್

ಬೆಂಗಳೂರು: ತಮ್ಮ ಸಿನೆಮಾ ವೊಂದಕ್ಕಾಗಿ ಶಾಪಿಂಗ್ ತೆರಳಿದ ರಚಿತಾ ರಾಮ್ ಮಾರುವೇಷದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಸುತ್ತಾಡಿದ್ದಾರೆ.

ಇನ್ನೂ ಕನ್ನಡ ಖ್ಯಾತ ನಟಿ ರಚಿತಾ ರಾಮ್ ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ಶಾಪಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಸಾರ್ವಜನಿಕರ ಮಧ್ಯೆಯೆ ಶಾಪಿಂಗ್ ಮಾಡಿದ್ದಾರೆ. ಇನ್ನೂ ಈ ಕುರಿತು ರಚಿತಾ ರಾಮ್ ಅನುಭವ ಹಂಚಿಕೊಂಡಿದ್ದು, ನಾನು ಜನರ ಮಧ್ಯೆಯೆ ಶಾಪಿಂಗ್ ಮಾಡಿದ್ದೇನೆ. ಯಾರು ನನ್ನನ್ನು ಗುರ್ತಿಸಿಲ್ಲ. ಇದೊಂದು ರೀತಿಯ ನೂತನ ಅನುಭವ, ಸಿನೆಮಾಗಾಗಿ ಶಾಪಿಂಗ್ ಗೆ ಬಂದಿದ್ದೆನೆ. ಇಡೀ ಚಿತ್ರತಂಡವೇ ಇಲ್ಲಿದ್ದರೂ ಯಾರೂ ನಮ್ಮನ್ನು ಗುರ್ತಿಸಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಇನ್ನೂ ಡಿಂಪಲ್ ಕ್ವೀನ್ ರಚಿತಾ ರಾಮ್ ಡಿ.೬ ರಿಂದ ಆರಂಭವಾಗಿರುವ ಖಾದರ್ ಕುಮಾರ್ ನಿರ್ದೇಶನ ವೀರಂ ಚಿತ್ರದಲ್ಲಿ ನಟಿಸುತ್ತಿದ್ದು, ರಚಿತ ರಾಮ್ ರವರೊಂದಿಗೆ ಶ್ರುತಿ, ಶ್ರೀನಗರ ಕಿಟ್ಟ ಸಹ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

Trending

To Top