Cinema

ಕನ್ನಡದಲ್ಲಿ ಸೃಜನ ಪಕ್ಷಪಾತ (nepotism) ಇಲ್ಲ, ನನಗೆ ಎಂದೂ ಅನಿಸಿಲ್ಲ ಎಂದ ರಚಿತಾ ರಾಮ್!

ಸ್ಯಾಂಡಲ್ ವುಡ್ ನಲ್ಲೂ ನೆಪೋಟಿಸಂ ಇದೆ ಅನ್ನೋ ಚರ್ಚೆ ನಡೆಯುತ್ತಿದೆ. ಇಲ್ಲಿ ಕೂಡ ನೆಪೋಟಿಸಂ ಇದೆಯೋ ಇಲ್ಲವೋ ಎಂಬುದು ಸರಿಯಾಗಿ ತಿಳಿದಿಲ್ಲ. ಕೆಲವರು ಕನ್ನಡ ಚಿತ್ರರಂಗದಲ್ಲೂ ನೆಪೋಟಿಸಂ ಇದೆ ಎನ್ನುತ್ತಾರೆ, ಕೆಲವರು ಇಲ್ಲ ಎನ್ನುತ್ತಾರೆ. ಇದರ ಬಗ್ಗೆ ಸರಿಯಾದ ಕ್ಲಾರಿಟಿ ಸಿಕ್ಕಿಲ್ಲ.
ಈ ನೆಪೋಟಿಸಂ ಅಥವಾ ಸೃಜನಪಾಪಕ್ಷಪಾತದ ಬಗ್ಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಮಾತನಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ಇಲ್ಲ ಎನ್ನುತ್ತಾರೆ ರಚಿತಾ. ಬಾಲಿವುಡ್ ನಲ್ಲಿ ನೆಪೋಟಿಸಂ ಎನ್ನುವುದು ಎಷ್ಟರ ಮಟ್ಟಿಗೆ ಇದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ಇಲ್ಲ ಅಂತ ನನಗೆ ಅನ್ಸುತ್ತೆ. ನನಗಂತೂ ಅದರ ಅನುಭವ ಆಗಿಲ್ಲ ಅಂದಿದ್ದಾರೆ ಡಿಂಪಲ್ ಕ್ವೀನ್.
ಬಾಲಿವುಡ್ ನಲ್ಲಿ ನೆಪೋಟಿಸಂ ಇರಬಹುದು, ಆದರೆ ದಕ್ಷಿಣ ಭಾರತದಲ್ಲಿ ಜನರು ಕಂಟೆಂಟ್ ಇರುವ ಸಿನಿಮಾಗಳನ್ನು ಮಾತ್ರ ನೋಡುತ್ತಾರೆ. ಒಳ್ಳೆಯ ಕಥೆ ಹಾಗೂ ನಟನೆ ಇಲ್ಲದೆ ಇದ್ದರೆ, ಇಂತಹ ದೊಡ್ಡ ನಟನ ಸಿನಿಮಾ ಆದರೂ ಫ್ಲಾಪ್ ಆಗುತ್ತದೆ ಎಂದಿದ್ದಾರೆ ರಚಿತಾ. ಜೊತೆಗೆ ಅವರು ಪುನೀತ್ ರಾಜ್ ಕುಮಾರ್, ಶಿವಣ್ಣ, ದರ್ಶನ್ ಅವರೊಡನೆ ಕೆಲಸ ಮಾಡಿರುವುದರಿಂದ ಎಲ್ಲರೂ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸುತ್ತಾರೆ ಎಂದಿದ್ದಾರೆ ರಚಿತಾ. ನಟ ಶ್ರೀಮುರಳಿ ಜೊತೆ ಕೂಡ ರಚಿತಾ ಈ ಬಗ್ಗೆ ಮಾತನಾಡಿದ್ದು ಅವರೂ ಸಹ ಅದೆಲ್ಲ ನಡೆಯಲ್ಲ ಎಂದಿದ್ದರಂತೆ.
ಒಟ್ಟಾರೆ ಹೇಳುವುದಾದರೆ ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ಬಗ್ಗೆ ಹೆಚ್ಚಿನ ಚರ್ಚೆ ಮಾತುಕತೆಗಳು ನಡೆಯುತ್ತಿರುವುದಂತೂ ನಿಜ, ಆದರೆ ಅವೆಲ್ಲವೂ ಆಯಾ ಕಲಾವಿದರ ಅನುಭವಕ್ಕೆ ಬಂದಿರುವಂತೆ ಅವರು ನೆಪೋಟಿಸಂ ಬಗ್ಗೆ ಅವರವರ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನೆಪೋಟಿಸಂ ಇಲ್ಲ ಎನ್ನುವುದಕ್ಕೆ ಹಲವಾರು ಯಶಸ್ವಿ ನಟರ ಸಿನಿಮಾಗಳು ಫ್ಲಾಪ್ ಆಗಿರುವ ಉದಾಹರಣೆಗಳು, ಯಾರ ಮಕ್ಕಳೇ ಆದರೂ ಒಂದೆರಡು ಸಿನಿಮಾ ಫ್ಲಾಪ್ ಆದ ನಂತರ ಅವರು ಸರಿಯಾದ ಅವಕಾಶವಿಲ್ಲದೆ ಕುಳಿತಿರುವುದರ ನಾವು ಕೇಳಿದ್ದೇವೆ. ಹಾಗಾಗಿ ಸೌತ್ ನಲ್ಲಿ ನೆಪೋಟಿಸಂ ಎಂಬುದು ಕಡಿಮೆಯೇ ಎಂದರೆ ತಪ್ಪಲ್ಲ.

Trending

To Top