Kannada Cinema News

ಒಂದೇ ಜಿಮ್ ನಲ್ಲಿ ವರ್ಕ್ ಔಟ್ ಮಾಡಿದ ದುನಿಯಾ ವಿಜಿ ಹಾಗು ರಚಿತಾ ರಾಮ್! ಫೋಟೋಗಳನ್ನು ನೋಡಿ

ನಮ್ಮ ಕನ್ನಡದ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅವರು ಸದ್ಯ ತಮ್ಮ ಸಲಗ ಚಿತ್ರದ ಕೊನೆಯ ಹಂತದ ಕೆಲಸ ಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇನ್ನೊಂದು ಕಡೆ ನಟಿ ರಚಿತಾ ರಾಮ್ ಅವರು ಸದ್ಯ ಕಸ್ತೂರಿ ನಿವಾಸ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಆ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಲಾಕ್ ಡೌನ್ ಇದ್ದ ಕಾರಣ ನಮ್ಮ ನಟ ನಟಿಯರು ಮನೆಯಲ್ಲೇ ಜಿಮ್ ವರ್ಕೌಟ್ ಮಾಡುತ್ತಿದ್ದರು. ಈಗ ಜಿಮ್ ಗಳು ಓಪನ್ ಆಗಿವೆ, ನೆನ್ನೆ ಒಂದೇ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ ನಮ್ಮ ದುನಿಯಾ ವಿಜಿ ಹಾಗು ನಟಿ ರಚಿತಾ ರಾಮ್! ಇದರ Exclusive ಫೋಟೋಗಳನ್ನು ಕೆಳಗೆ ನೋಡಬಹುದು.

ಹೌದು! ಒಂದೇ ಜಿಮ್ ನಲ್ಲಿ ನೆನ್ನೆ ನಮ್ಮ ಕನ್ನಡದ ತಾರೆಯರಾದ ದುನಿಯಾ ವಿಜಯ್ ಹಾಗು ರಚಿತಾ ರಾಮ್ ಅವರು ವರ್ಕೌಟ್ ಮಾಡಿ ಫೋಟೋಗಳನ್ನು ತಮ್ಮ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಇಬ್ಬರೂ ಕೂಡ ಪೋಸ್ಟ್ ಮಾಡಿದ್ದಾರೆ! ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಚಿತಾ ರಾಮ್ ಹಾಗು ದುನಿಯಾ ವಿಜಿ ಅವರ ಫೋಟೋಗಳನ್ನು ನೀವು ನೋಡಬಹುದು. ಕಳೆದ ವಾರ ಇದೆ ಜಿಮ್ ನಲ್ಲಿ ನಮ್ಮ ಡಾಲಿ ಧನಂಜಯ್ ಅವರು ಕೂಡ ಕಾಣಿಸಿಕೊಂಡಿದ್ದರು. ಇಷ್ಟೇ ಅಲ್ಲದೆ, ಹಲವಾರು ಕನ್ನಡದ ನಟ ನಟಿಯರು ಇದೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾರೆ.

ರಚಿತಾ ರಾಮ್ ಹಾಗು ದುನಿಯಾ ವಿಜಿ ಅವರು ಜಾನಿ ಜಾನಿ ಯಸ್ ಪಾಪ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ರಚಿತಾ ರಾಮ್ ಅವರು ದುನಿಯಾ ವಿಜಿ ಅವರ ಜೊತೆ ಜಿಮ್ ನಲ್ಲಿ ಫೋಟೋ ಒಂದನ್ನು ಹಾಕಿ “ಕೊನೆಗೂ, ಬಹಳ ದಿನಗಳ ನಂತರ ಜಾನಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ” ಎಂದು ಹಾಕಿದ್ದಾರೆ! ರಚಿತಾ ರಾಮ್ ಹಾಗು ದುನಿಯಾ ವಿಜಿ ಅವರು ಬಹಳ ಒಳ್ಳೆಯ ಗೆಳೆಯರು. ಇವರಿಬ್ಬರು ಮತ್ತೊಂದು ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ . ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.

Trending

To Top