Cinema

ಹೊಸ ಸಿನಿಮಾದಲ್ಲಿ ಜೋಡಿಯಾಗಲಿದ್ದಾರೆ ಡಾಲಿ ಹಾಗು ರಚಿತಾ ರಾಮ್! ಯಾವ ಸಿನಿಮಾ ನೋಡಿ

ಸ್ಯಾಂಡಲ್ ವುಡ್ ನಲ್ಲಿ ಮಾಸ್ ಸಿನಿಮಾಗಳಿಂದಲೇ ಖ್ಯಾತಿಯಾಗಿರುವ ನಟ ಡಾಲಿ ಧನಂಜಯ್. ಇನ್ನು ಇನ್ನೊಸೆಂಟ್ ಮತ್ತು ಬೋಲ್ಡ್, ಎರಡು ರೀತಿಯ ಪಾತ್ರಗಳಲ್ಲೂ ನಟಿಸಿ ಜನರ ಮೆಚ್ಚುಗೆ ಗಳಿಸಿರುವ ನಟಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್. ಇವರಿಬ್ಬರು ಕರ್ನಾಟಕದ ಮನೆಮನೆಯಲ್ಲೂ ಚಿರಪರಿಚಿತರು.ಇದೀಗ, ಬಂದಿರುವ ವಿಶೇಷ ಸುದ್ದಿ ಏನೆಂದರೆ, ಈ ಎರಡು ಧ್ರುವಗಳು ಒಂದಾಗಲಿವೆಯಂತೆ. ಅಂದರೆ ಧನಂಜಯ್ ಹಾಗೂ ರಚಿತಾ ರಾಮ್ ಜೊತೆಯಾಗಿ ಸಿನಿಮಾ ಮಾಡಲಿದ್ದಾರಂತೆ. ಇದೆ ಮೊದಲ ಬಾರಿಗೆ ಇವರಿಬ್ಬರು ಜೊತೆಯಾಗಿ ನಟಿಸಲಿದ್ದಾರೆ. ಇದೊಂದು ವಿಶೇಷವಾದ ಸಿನಿಮಾ ಆಗಿರುವುದಂತೂ ಗ್ಯಾರಂಟಿ.
ಈ ವಿಷಯ ಹೊರಬರುತ್ತಲೇ, ಈಗಾಗಲೇ ಧನಂಜಯ್ ಹಾಗೂ ರಚಿತಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಇಬ್ಬರು ಕಲಾವದರ ಜೋಡಿಯನ್ನು ತೆರೆಮೇಲೆ ನೋಡಲು ಅವರ ಅಭಿಮಾನಿಗಳು ಹಾಗೂ ಕನ್ನಡ ಸಿನಿಪ್ರಿಯರು ಈಗಾಗಲೇ ಕುತೂಹಲ ಶುರುವಾಗಿದೆ…ಇನ್ನು ಹೆಸರಿಡದ ಈ ಹೊಸ ಸಿನಿಮಾವನ್ನು ಪುಷ್ಪಕ ವಿಮಾನ ಸಿನಿಮಾ ಖ್ಯಾತಿಯ ರವೀಂದ್ರನಾಥ್ ನಿರ್ದೇಶನ ಮಾಡಲಿದ್ದಾರೆ. ಹಾಗೂ ಪುಷ್ಪಕ ವಿಮಾನ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾದ ವಿಖ್ಯಾತ್ ಅವರು ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಭಾರತದ ಹೆಸರಾಂತ ನಿರ್ದೇಶಕ ಮಣಿರತ್ನಂ , ಅವರು ಸಿನಿಮಾ ಮಾಡುವಂತಹ ಶೈಲಿಯಲ್ಲಿ ಇರಲಿದೆಯಂತೆ ಕಥೆ.
ಟಗರು ಸಿನಿಮಾ ನಂತರ ಧನಂಜಯ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಜೊತೆಗೆ ಜನರು ಅವರನ್ನು ಇಷ್ಟಪಡುವ ರೀತಿ ಬದಲಾಗಿದೆ. ಹಾಗಾಗಿ ಈ ಹೊಸ ಸಿನಿಮಾದಲ್ಲಿ ಧನಂಜಯ್ ನಟಿಸಲಿರುವ ಈ ಸಿನಿಮಾ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಈ ಸಿನಿಮಾ ಕುರಿತು ಹೆಚ್ಚಿನ ಮಾಹಿತಿಗಾಗಿ ಇನ್ನು ಸ್ವಲ್ಪ ದಿನ ಕಾಯಬೇಕು.

Trending

To Top