Cinema

ಲಾಕ್ ಡೌನ್ ಎಫೆಕ್ಟ್ – ಜೂ#ಜಾಡಿ ಜೇಲು ಸೇರಿದ ಖ್ಯಾತ ನಟ! ಯಾರು ಗೊತ್ತಾ

ದಕ್ಷಿಣ ಭಾರತದ ಪ್ರತಿಭೆ ನಟ ಶ್ಯಾಮ್. ಮೂಲತಃ ಇವರು ತಮಿಳಿನವರಾದರೂ ಓದಿದ್ದು ಬೆಳೆದದ್ದೆಲ್ಲ ಬೆಂಗಳೂರಿನಲ್ಲೇ. ಬೆಂಗಳೂರಿನಲ್ಲಿ ಬಿ.ಕಾಮ್ ಪಡೆದರು ಶ್ಯಾಮ್. ಕನ್ನಡ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಕೆಲ ತಿಂಗಳುಗಳಿಂದ ಲಾಕ್ ಡೌನ್ ಶುರುವಾದಾಗಿನಿಂದ ಹಲವಾರು ಕಲಾವಿದರ ಜೀವನಕ್ಕೆ ಆರ್ಥಿಕ ಸ್ಥಿತಿಗೆ ತೊಂದರೆಯಾಗಿದೆ. ಕೆಲವು ಕಲಾವಿದರಿಗೆ ಅವಕಾಶ ಇಲ್ಲದೆ ಬೇರೆ ಸಂಪಾದನೆ ಇಲ್ಲದೆ ಬೀದಿಗೆ ಬರುವ ಪರಿಸ್ಥಿತಿ ಬಂದಿದೆ. ನಟ ಶ್ಯಾಮ್ ಸಹ ಸಿನಿಮಾದಲ್ಲಿ ನಟಿಸಲು ಅವಕಾಶವಿಲ್ಲದೆ ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿಯಲ್ಲಿದ್ದರು.
ಅದಕ್ಕಾಗಿ, ಚೆನ್ನೈನ ನಂಗಂಬಾಕಮ್ ಮ್ ಅವರ ಮನೆಯಲ್ಲೇ ಜೂ#ಜಾಟವನ್ನು ಪ್ರಾರಂಭಿಸಿದ್ದರು. ತಮ್ಮ ಮನೆಯಲ್ಲೇ ಈ ಕೆಲಸವನ್ನು ಶುರು ಮಾಡಿದ್ದರು. ಕೆಲವು ನಟ ನಟಿಯರು ಕೂಡ ಇವರ ಮನೆಯಲ್ಲಿ ನಡೆಯುವ ಜೂ#ಜಾಟದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಶ್ಯಾಮ್ ಅವರ ಹಣೆಬರಹ ಚೆನ್ನಾಗಿ ಇರಲಿಲ್ಲ ಎಂದು ತೋರುತ್ತದೆ. ನಿನ್ನೆ ರಾತ್ರಿ ಅವರ ಮನೆಯ ಮೇಲೆ ಪೊಲೀಸ್ ರೈಡ್ ಆಗಿದೆ. ಕೆಲ ದಿನಗಳ ಹಿಂದೆ ಒಬ್ಬ ಹುಡುಗ ಜೂ#ಜಾಟದಲ್ಲಿ ಸೋತಿದ್ದ. ಮೊದಲೇ ಬಡವನಾಗಿದ್ದ ಹುಡುಗ, ಸಾಲ ಮಾಡಿ ಜೂ#ಜಾಡಿ 20,000 ರೂಪಾಯಿಗಳನ್ನು ಕಳೆದುಕೊಂಡಿದ್ದ. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಅತ್ಮ#ತ್ಯೆ ಮಾಡಿಕೊಂಡಿದ್ದ. ಈ ಪ್ರಕರಣ ಪೊಲೀಸರನ್ನು ಎಚ್ಚರಿಸಿದೆ. ಹಾಗಾಗಿ ಎಲ್ಲ ಜೂ#ಜಾಟದ ಅಡ್ಡಗಳನ್ನು ರೈಡ್ ಮಾಡುತ್ತಿದ್ದರು.
ಅದೇ ಸಮಯದಲ್ಲಿ ನಿನ್ನೆ ರಾತ್ರಿ ನಟ ಶ್ಯಾಮ್ ಅವರ ಮನೆಮೇಲೆ ಸಹ ರೈಡ್ ಆಗಿದೆ. ಜೂ#ಜಾಟಕ್ಕೆ ಬಳಸುತ್ತಿದ್ದ ವಸ್ತುಗಳು ಮೊಬೈಲ್ ಹಾಗೂ 12 ಜನರನ್ನು ಬಂಧಿಸಲಾಗಿದೆ. ನಟ ಶ್ಯಾಮ್ ಮೂಲತಃ ಮಧುರೈನವರು. ಇವರ ನಿಜವಾದ ಹೆಸರು ಮೊಹಮ್ಮದ್ ಶಮ್ಮುದೀನ್ ಇಬ್ರಾಹಿಂ. ಬೆಂಗಳೂರಿನಲ್ಲಿ ಪದವಿ ಮುಗಿಸಿದ ನಂತರ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು ಶ್ಯಾಮ್. ಮಾಡೆಲಿಂಗ್ ಮಾಡುತ್ತಿದ್ದ ಸಮಯದಲ್ಲಿ ಇವರ ಸಾಮರ್ಥ್ಯವನ್ನು ಗುರುತಿಸಿ. ಮಾಡೆಲಿಂಗ್ ಕೋ ಆರ್ಡಿನೇಟರ್ ಬಿಜು ಜಯದೇವನ್ ಸಿನಿರಂಗಕ್ಕೆ ಶ್ಯಾಮ್ ಅವರನ್ನು ಪರಿಚಯಿಸುತ್ತಾರೆ.
ತಮಿಳು ಸಿನಿಮಾಗಳ ಮೂಲಕ ಸಿನಿಕೆರಿಯರ್ ಅನ್ನು ಆರಂಭಿಸುತ್ತಾರೆ ಶ್ಯಾಮ್. ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಯಶಸ್ಸು ಸಿಗುವುದಿಲ್ಲ. ಇವರಿಗೆ ಯಶಸ್ಸು ಕೊಡುವುದು “ಉಲ್ಲಂ ಕೇಟ್ಕುಮಾಯ್”.. ಆದರೆ ಈ ಯಶಸ್ಸು ಬಹಳ ದಿನ ಉಳಿಯುವುದಿಲ್ಲ. ಕೆಲ ವರ್ಷಗಳ ನಂತರ ಶ್ಯಾಮ್ ನಟನೆಯ ಸಿನಿಮಾಗಳು ಫ್ಲಾಪ್ ಆಗಲು ಶುರುವಾಗುತ್ತದೆ.ನಂತರ ಕನ್ನಡದಲ್ಲಿ “ತನನಂ ತನನಂ” ಸಿನಿಮಾದಲ್ಲಿ ನಟಿಸುತ್ತಾರೆ. ಆದರೆ ಈ ಸಿನಿಮಾ ಕೂಡ ಹಿಟ್ ಆಗುವುದಿಲ್ಲ. ನಂತರ ತೆಲುಗಿನಲ್ಲಿ ರವಿತೇಜ ನಟನೆಯ ಕಿಕ್ ಸಿನಿಮಾದಲ್ಲಿ ಶ್ಯಾಮ್ ಅವರು ನಿರ್ವಹಿಸಿದ ಪೊಲೀಸ್ ಅಧಿಕಾರಿ ಪಾತ್ರದಿಂದ ಪ್ರಶಂಸೆ ಗಳಿಸುತ್ತಾರೆ. ಇದೆ ಸಿನಿಮಾ ತಮಿಳಿನಲ್ಲಿ ಸಹ ತಯಾರಾಗುತ್ತದೆ.
ನಂತರ ‘6’ ಎಂಬ ಸಿನಿಮಗಾಗಿ ಬಹಳ ಶ್ರಮ ವಹಿಸಿ ಭಿಕ್ಷುಕನ ಪಾತ್ರ ನಿರ್ವಹಿಸುತ್ತಾರೆ ಶ್ಯಾಮ್. ಈ ಸಿನಿಮಾ ಗೆದ್ದಿತ್ತು. ನಂತರ ಕಿಚ್ಚ ಸುದೀಪ್ ಅವರು ಶ್ಯಾಮ್ ಅವರ ಜೊತೆ ಮಲ್ಟಿ ಭಾಷೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಈ ಸಿನಿಮಾ ಸೆಟ್ಟೇರಲಿಲ್ಲ. ನಂತರ ಕನ್ನಡದಲ್ಲಿ ಅರ್ಜುನ್ ಸರ್ಜಾ ಅವರ ಜೊತೆ ‘ಗೇಮ್’ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಯಶ್ ಅವರ ಸಂತು ಸ್ಟ್ರೈಟ್ ಫಾರ್ವರ್ಡ್ ಸಿನಿಮಾದಲ್ಲಿ ನಟಿಸಿದರು. ಕನ್ನಡಸಲ್ಲೇ ನೆಲೆಯೂರಬೇಕು ಎಂದುಕೊಂಡಿದ್ದರು. ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ರೇಸ್ ಗುರ್ರಂ ಸಿನಿಮಾದಲ್ಲಿ ನಟಿಸಿದರು. ಆದರೆ ಯಾವ ಸಿನಿಮಾಗಳು ಸಹ ಇವರಿಗೆ ಅಂದುಕೊಂಡಷ್ಟು ಯಶಸ್ಸು ನೀಡಲಿಲ್ಲ.

Trending

To Top