ವಿಕ್ರಾಂತ್ ರೋಣದಿಂದ ಹೊಸ ಅಪ್ಡೇಟ್.. ರಾ ರಾ ರಕ್ಕಮ್ಮ ಲಿರಿಕಲ್ ವಿಡಿಯೋ ಬಿಡುಗಡೆ ದಿನಾಂಕ ಘೋಷಣೆ..

ಸ್ಯಾಂಡಲ್ ವುಡ್‌ ನಲ್ಲಿ ಬಹುನೀಕ್ಷಿತ ಸಿನೆಮಾ ವಿಕ್ರಾಂತ್ ರೋಣ ಈಗಾಗಲೇ ಸಿನಿರಂಗದಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡುತ್ತಿದ್ದೆ. ಶೀಘ್ರದಲ್ಲೇ ಸಿನೆಮಾ ತೆರೆ ಮೇಲೆ ಅಬ್ಬರಿಸಲಿದ್ದರು, ಸಿನೆಮಾದ ಪೋಸ್ಟರ್ ಗಳು, ಟ್ರೈಲರ್, ಟೀಸರ್ ಗಳು ಸಿನೆಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇದೀಗ ಸಿನೆಮಾದ ಮತ್ತೊಂದು ಅಪ್ಡೇಟ್ ಬಂದಿದ್ದು, ಇದನ್ನು ಕಿಚ್ಚ ಸುದೀಪ್ ರವರೇ ಮಾಹಿತಿ ನೀಡಿದ್ದಾರೆ.

ಇತ್ತೀಚಿಗಷ್ಟೆ ವಿಕ್ರಾಂತ್ ರೋಣ ಸಿನೆಮಾದ ಅಪ್ಡೇಟ್ ಗಾಗಿ ಅಭಿಮಾನಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವ ಕುರಿತು ಪೋಸ್ಟ್ ಮಾಡಿದ್ದ ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದು ಏನೇ ಇರಲಿ ಇದೀಗ ವಿಕ್ರಾಂತ್ ರೋಣದ ಅಪ್ಡೇಟ್ ಪಡ್ಡೆ ಹುಡುಗರ ಐಟಂ ಸಾಂಗ್ ಪ್ರಿಯರು ಕಿವಿ ನೆಟ್ಟಗೆ ಮಾಡಿದೆ. ಹೌದು ವಿಕ್ರಾಂತ್ ರೋಣ ಸಿನೆಮಾದ ಮೂಲಕ ಕನ್ನಡ ಸಿನೆಮಾದಲ್ಲಿ ಕಾಣಿಸಿಕೊಳ್ಳುತ್ತಿರುವ ಜಾಕ್ವೆಲಿನ್ ವಿಕ್ರಾಂತ್ ರೋಣ ಸಿನೆಮಾದಲ್ಲಿ ಐಟಂ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಇನ್ನೂ ಈ ಹಾಡು ಸಿನೆಮಾದಲ್ಲಿ ಹೈಲೆಟ್ ಆಗಲಿದೆ ಎಂದೂ ಸಹ ಹೇಳಲಾಗುತ್ತಿದೆ. ಕಿಚ್ಚ ಸುದೀಪ್ ರೊಂದಿಗೆ “ರಾ ರಾ ರಕ್ಕಮ್ಮ” ಎಂಬ ಸಾಂಗ್ ನಲ್ಲಿ ನಟಿ ಜಾಕ್ವೆಲಿನ್ ಭರ್ಜರಿಯಾದ ಸ್ಟೆಪ್ಸ್ ಹಾಕಿದ್ದಾರೆ. ಇದೀಗ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯ ದಿನಾಂಕವನ್ನು ನಟ ಸುದೀಪ್ ರಿವೀಲ್ ಮಾಡಿದ್ದಾರೆ.

ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ನೃತ್ಯ ಮಾಡಿರುವ ರಾ ರಾ ರಕ್ಕಮ್ಮ ಎಂಬ ಲಿರಿಕಲ್ ಸಾಂಗ್ ರಿಲೀಸ್ ಗೆ ದಿನಾಂಕ ನಿಗಧಿಯಾಗಿದೆ. ಈ ಹಾಡಿನಲ್ಲಿ ಅವರ ಪಾತ್ರದ ಹೆಸರೇ ಗಂಡಗ್ ರಕ್ಕಮ್ಮ. ಮೊದಲ ಬಾರಿಗೆ ಕನ್ನಡ ಸಿನೆಮಾದಲ್ಲಿ ನಟಿಸಿರುವ ಜಾಕ್ವೆಲಿನ್ ಸುದೀಪ್ ಜೊತೆ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಜಾಕ್ವೆಲಿನ್ ಕೈಯಲ್ಲಿ ಸಾರಾಯಿ ಬಾಟಲಿಯನ್ನು ಹಿಡಿದುಕೊಂಡು, ಗ್ಲಾಮರಸ್ ಡ್ರೆಸ್ ನೊಂದಿಗೆ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.  ಈ ಹಾಡಿನ ಪೋಸ್ಟರ್‍ ಬಿಡುಗಡೆಯಾದಾಗ ನಟಿಯ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಸಾಂಗ್ ನಲ್ಲಿ ಜಾಕ್ವೆಲಿನ್ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.

ಇನ್ನೂ ಈ ಲಿರಿಕಲ್ ಸಾಂಗ್ ಅನ್ನು ಸಹ ವಿಶೇಷವಾಗಿ ರಿಲೀಸ್ ಮಾಡಲು ಚಿತ್ರತಂಡ ಯೋಜನೆ ಮಾಡಿದೆ. ಸಾಮಾನ್ಯವಾಗಿ ಸಿನೆಮಾದ ಹಾಡು ಬಿಡುಗಡೆಯಾದರೇ ಒಂದೇ ಬಾರಿ ಎಲ್ಲಾ ಭಾಷೆಗಳಲ್ಲೂ ರಿಲೀಸ್ ಮಾಡುತ್ತಾರೆ. ಆದರೆ ವಿಕ್ರಾಂತ್ ರೋಣ ಮಾತ್ರ ಡಿಫರೆಂಟ್ ಆಗಿ ಥಿಂಕ್ ಮಾಡಿದೆ. ಮೊದಲಿಗೆ ಮೇ.23 ರಂದು ಕನ್ನಡದಲ್ಲಿ ರಿಲೀಸ್ ಆಗಲಿದೆ.  ಬಳಿಕ ಹಿಂದಿಯಲ್ಲಿ ಮೇ.24, ತೆಲುಗಿನಲ್ಲಿ ಮೇ.25, ತಮಿಳು ಮೇ. 26 ಹಾಗೂ ಮಲಯಾಳಂನಲ್ಲಿ ಮೇ.27 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಈ ಎಲ್ಲಾ ಭಾಷೆಗಳಲ್ಲೂ ದಿನಾಂಕ ಬೇರೆಯಾದರೂ ಸಮಯ ಮದ್ಯಾಹ್ನ 1.05 ಗಂಟೆಗೆ ಬಿಡುಗಡೆಯಾಗಲಿದೆ. ಸದ್ಯ ವಿಕ್ರಾಂತ್ ರೋಣ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾದ ಆಗಿದ್ದು, ಎಲ್ಲಾ ಸಿನಿರಂಗದ ವೀಕ್ಷಕರೂ ಸಹ ಸಿನೆಮಾದ ಹಾಡಿಗಾಗಿ ಕಾತುರದಿಂದ ಕಾದು ಕುಳಿತಿದ್ದಾರೆ.

Previous articleನಯನತಾರಾ-ವಿಘ್ನೇಶ್ ಮದುವೆ ತಿರುಮಲದಲ್ಲಿ ಅಲ್ಲ, ಚೆನೈನಲ್ಲಂತೆ…. ಮತ್ತೊಂದು ರೂಮರ್….
Next articleಕಿರುತೆರೆ ನಟಿ ನಿಖಿತಾ ಶರ್ಮಾಳ ಬೋಲ್ಡ್ ಲುಕ್ ಗೆ ಫಿದಾ ಆದ ನೆಟ್ಟಿಗರು…