ವಿಕ್ರಾಂತ್ ರೋಣ ಸಿನೆಮಾ ನೋಡುವಾಗ ಥಿಯೇಟರ್ ನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ…!

ಇಂದು ಇಡೀ ದೇಶ ಎದುರು ನೋಡುತ್ತಿದ್ದ ವಿಕ್ರಾಂತ್ ರೋಣ ಸಿನೆಮಾ ಬಿಡುಗಡೆಯಾಗಿದೆ. ರಾಜ್ಯ ಸೇರಿದಂತೆ ದೇಶ ಹಾಗೂ ವಿದೇಶಗಳಲ್ಲೂ ಸಹ ಸಿನೆಮಾ ಅದ್ದೂರಿಯಾಗಿ ಪ್ರದರ್ಶನವಾಗುತ್ತಿದೆ. ಕಿಚ್ಚನ ಅಭಿಮಾನಿಗಳು ಅದ್ದೂರಿಯಾಗಿ ಸಿನೆಮಾವನ್ನು ಸ್ವಾಗತ ಮಾಡಿದ್ದು, ಕೆಲವು ಕಡೆ ಕಿಚ್ಚನ ಬೃಹತ್ ಕಟೌಟ್ ಗಳನ್ನು ನಿರ್ಮಾಣ ಮಾಡಿ ಕ್ಷೀರಾಭಿಷೇಕ ಸಹ ಮಾಡಿದ್ದಾರೆ. ಎಲ್ಲವೂ ಸಂತಸದಿಂದ ನಡೆಯುತ್ತಿದ್ದ ಸಮಯದಲ್ಲಿ ಮಂಗಳೂರಿನ ಥಿಯೇಟರ್‍ ಒಂದರಲ್ಲಿ ಅವಘಡ ಸಂಭವಿಸಿದೆ. ಸಿನೆಮಾ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಕೆಲವರು ಗಾಯಗೊಂಡಿದ್ದಾರೆ.

ಇಡೀ ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಸಹ ಕಿಚ್ಚನ ವಿಕ್ರಾಂತ್ ರೋಣ ಸಿನೆಮಾಗಾಗಿ ಕಾಯುತ್ತಿದ್ದರು. ಇಂದು ಈ ಸಿನೆಮಾ ಅದ್ದೂರಿಯಾಗಿ ತೆರೆಗೆ ಬಂದಿದೆ. ಸಿನೆಮಾ ಈಗಾಗಲೇ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಮಂಗಳೂರಿನಲ್ಲೂ ಸಹ ಸಿನೆಮಾ ಬಿಡುಗಡೆಯಾಗಿದೆ. ಮಂಗಳೂರಿನ ಮಿಲನ್ ಎಂಬ ಚಿತ್ರಮಂದರಿದಲ್ಲಿ ವಿಕ್ರಾಂತ್ ರೋಣ ಸಿನೆಮಾದ ಪ್ರದರ್ಶನ ಆಗುತ್ತಿದ್ದ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಥಿಯೇಟರ್‍ ನಲ್ಲಿದ್ದ ವ್ಯಕ್ತಿಯೊಬ್ಬ ಸೀಟಿನಿಂದ ಪದೇ ಪದೇ ಏಳುತ್ತಿದ್ದನ್ನು ಪ್ರಶ್ನೆ ಮಾಡಿದ ಹಿನ್ನೆಲೆಯಲ್ಲಿ ಈ ಗಲಭೆ ಉದ್ಬವವಾಗಿದೆ. ಸಣ್ಣದಾಗಿ ಆರಂಭವಾದ ಈ ಗಲಭೆ ಜೋರಾಗಿದ್ದು, ಎರಡೂ ಗುಂಪುಗಳ ನಡುವೆ ಪರಸ್ಪರ ಹೊಡೆದಾಟ ಶುರುವಾಗಿದೆ. ಈ ವೇಳೆ ಲಾಂಗ್ ಮಚ್ಚುಗಳು ಸಹ ಕಂಡಿದ್ದು, ಭರತ್ ಎಂಬ ಯುವಕನಿಗೆ ಗಂಭೀರ ಗಾಯವಾಗಿದೆ. ಇನ್ನೂ ಗಂಭೀರವಾಗಿ ಗಾಯಗೊಂಡ ಭರತ್ ನ್ನು ಹಾಸನದ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಗಾಯಗೊಂಡ ಭರತ್ ಎಂಬುವವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಭರತ್ ತಲೆ ಹಾಗೂ ಕೈಗೆ ಗಾಯಗಳಾಗಿದ್ದು, ಚೂರಿ ಇರಿದ ಜಾಗದಲ್ಲಿ ಹೊಲಿಗೆಗಳನ್ನು ಹಾಕಲಾಗಿದೆಯಂತೆ. ಇನ್ನೂ ಭರತ್ ತನ್ನ ಮೇಲೆ ಹಲ್ಲೆ ಮಾಡಿದವರ ಹೆಸರುಗಳನ್ನು ಸಹ ಹೇಳಿದ್ದಾನೆ ಎನ್ನಲಾಗಿದ್ದು, ನನ್ನನ್ನು ಕೊಲ್ಲುವ ಉದ್ದೇಶದಿಂದ ಪೂರ್ವ ನಿಯೋಜಿತ ಪ್ಲಾನ್ ಹಾಕಿಕೊಂಡು ಬಂದಿದ್ದಾರೆ. ಎಲ್ಲರೂ ನನ್ನನ್ನು ಹೊಡೆದಿದ್ದಾರೆ. ಎಲ್ಲರೂ ನನಗೆ ಚುಚ್ಚಿ ತಲೆಗೆ ಹೊಡೆದಿದ್ದಾರೆ ಎಂದು ಭರತ್ ಹೇಳಿದ್ದಾರೆ ಎನ್ನಲಾಗಿದೆ. ಇನ್ನೂ ಆಸ್ಪತ್ರೆಯ ಮುಂಭಾಗ ಭರತ್ ಕಡೆಯ ಕೆಲ ಹುಡುಗರು ಸೇರಿ ಆಕ್ರೋಷ ಹೊರಹಾಕಿದ್ದು, ಈ ವೇಳೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಗುಂಪು ಚದುರಿಸಿದ್ದಾರೆ. ಇನ್ನೂ ಈ ಎರಡೂ ಗುಂಪುಗಳ ನಡುವಣ ಹಳೇಯ ವೈಷಮ್ಯವೇ ಗಲಭೆಗೆ ಕಾರಣ ಎನ್ನಲಾಗುತ್ತಿದೆ.

ಇನ್ನೂ ಪ್ಯಾನ್ ಇಂಡಿಯಾ ಸಿನೆಮಾ ಭಾರತದಾದ್ಯಂತ ಸುಮಾರು ಮೂರು ಸಾವಿರ ಸ್ಕ್ರೀನ್ ಗಳಲ್ಲಿ ತೆರೆಗೆ ಬಂದಿದೆ. ದೇಶದಾಧ್ಯಂತ ವಿಕ್ರಾಂತ್ ರೋಣ ಹವಾ ಜೋರಾಗಿಯೇ ಇದೆ. ಸೌತ್, ನಾರ್ತ್ ಸೇರಿದಂತೆ ದೇಶದಾದ್ಯಂತ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಇನ್ನೂ ಸಿನೆಮಾ ರಿಲೀಸ್ ಆದ ಕೆಲವೇ ಗಂಟೆಗಳಲ್ಲೇ ಸಿನೆಮಾ ಪೈರಸಿ ಮಾಡಲಾಗಿದೆ. ವಿಕ್ರಾಂತ್ ರೋಣ ಸಿನೆಮಾಗೂ ಸಹ ಪೈರಸಿ ಕಾಟ ತಪ್ಪಿಲ್ಲ. ಈ ಹಿಂದೆ ಪೈರಸಿಯ ಬಗ್ಗೆ ಕಿಚ್ಚ ಸುದೀಪ್ ಸಹ ಪೈರಸಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದಿದ್ದರು.

Previous articleಆತನ ಮೋಸದ ಆಲೋಚನೆಗಳನ್ನು ಅಳೆಯಲು ಸಾಧ್ಯವಿಲ್ಲ ಎಂದು ಮಂಚು ಲಕ್ಷ್ಮೀ ಕಾಮೆಂಟ್ಸ್, ಆಕೆ ಹೇಳಿದ್ದು ಯಾರ ಬಗ್ಗೆ?
Next articleರಣವೀರ್ ಬೆತ್ತಲೆಯಾಗಿ ಕಾಣಿಸಿಕೊಳ್ಳಲು ತೆಗೆದುಕೊಂಡ ಸಂಭಾವನೆ ಎಷ್ಟೊ ಗೊತ್ತಾ? ಕೇಳಿದ್ರೆ ಶಾಕ್ ಆಗೋದು ಖಚಿತ…!