ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಪುಷ್ಪಾ ಟೀಸರ್!

ಹೈದರಾಬಾದ್: ಸುಮಾರು 10 ಭಾಷೆಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿರುವ ಪುಷ್ಪಾ ಸಿನೆಮಾ ಶೂಟಿಂಗ್ ಬಿಡುವಿಲ್ಲದೇ ನಡೆಯುತ್ತಿದೆ. ಇದೀಗ ಪುಷ್ಪಾ ಟೀಸರ್ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರೆತಿತ್ತು. ಅಲ್ಲು ಅರ್ಜುನ್ ಹುಟ್ಟುಹಬ್ಬದಂದು ಪುಷ್ಪಾ ಟೀಸರ್ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.

ನಿರ್ದೇಶಕ ಸುಕುಮಾರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪುಷ್ಪಾ ಚಿತ್ರ ಈಗಾಗಲೇ ಭಾರಿ ನೀರಿಕ್ಷೆ ಮೂಡಿಸಿದೆ. ಟೈಟಲ್, ಪೋಸ್ಟರ್, ಫಸ್ಟ್ ಲುಕ್ ರಿವೀಲ್ ಆದ ಬಳಿಕವಂತೂ ಇನಷ್ಟೂ ನಿರೀಕ್ಷೆ ಮೂಡಿಸಿದೆ. ಇನ್ನೂ ಅಲ್ಲು ಅರ್ಜುನ್ ಹುಟ್ಟುಹಬ್ಬ ಇದೇ ಏಪ್ರಿಲ್ ೮ ರಂದು ನಡೆಯಲಿದ್ದು, ಅದೇ ದಿನ ಟೀಸರ್ ರಿಲೀಸ್ ಮಾಡುವ ಮೂಲಕ ಬನ್ನಿಗೆ ಬಿಗ್ ಗಿಫ್ಟ್ ನೀಡಲು ಚಿತ್ರ ತಂಡ ಪ್ಲಾನ್ ಮಾಡಿದೆಯಂತೆ. ಜೊತೆಗೆ ಇದು ಬನ್ನಿ ಫ್ಯಾನ್ಸ್‌ಗೂ ಸಹ ಟ್ರೀಟ್ ಎಂದೇ ಹೇಳಲಾಗುತ್ತಿದೆ.

ಇನ್ನೂ ಸಿನೆಮಾ ಆಗಸ್ಟ್ ೧೩ ರಂದು ತೆರೆಗೆ ಬರಲಿದ್ದು, ಅಷ್ಟರೊಳಗೆ ಟೀಸರ್ ಬಿಡುಗಡೆ ಮಾಡಲು ಸುಕುಮಾರ್ ಪ್ಲಾನ್ ಮಾಡಿದ್ದಾರೆ. ಸದ್ಯ ಟೀಸರ್ ನಲ್ಲಿ ಯಾವ ಯಾವ ದೃಶ್ಯಗಳನ್ನು ಸೇರಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುತ್ತಿದ್ದು, ಎರಡು ಮೂರು ಟೀಸರ್‌ಗಳನ್ನು ಸಿದ್ದಪಡಿಸಿ ಈ ಪೈಕಿ ಬೆಸ್ಟ್ ಟೀಸರ್ ಅನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರಂತೆ.

ಇನ್ನೂ ಪುಷ್ಪಾ ಚಿತ್ರಕ್ಕಾಗಿ ಚಿತ್ರತಂಡ ಬಿಡುವಿಲ್ಲದೇ ಕೆಲಸ ಮಾಡುತ್ತಿದೆ. ಹೈದರಾಬಾದ್ ಸುತ್ತಮುತ್ತಲಿನಲ್ಲಿ ಶೂಟಿಂಗ್ ಪೂರ್ತಿ ಮಾಡಿರುವ ಪುಷ್ಪಾ ತಂಡ ಇದೀಗ ತಮಿಳುನಾಡಿನಲ್ಲಿ ಶೂಟಿಂಗ್ ಕೆಲಸಗಳು ನಡೆಯುತ್ತಿದ್ದು, ಇಲ್ಲಿ ಚಿತ್ರದ ನಾಯಕನ ಕುಟುಂಬಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎನ್ನಲಾಗಿದೆ.

Previous articleಆಚಾರ್ಯ ಚಿತ್ರದ ನ್ಯೂ ಪೋಸ್ಟರ್ ರಿಲೀಸ್: ವೈರಲ್
Next articleBigBoss-8: 2ನೇ ದಿನ 4 ಮಂದಿ ನಾಮಿನೇಟ್