Saturday, May 21, 2022
HomeFilm Newsಸಿನೆಮಾ ಶೂಟಿಂಗ್ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬೇಡಿಕೆ ಹೆಚ್ಚಿಸಿಕೊಂಡ ಪುಷ್ಪಾ ಸಿನೆಮಾ….

ಸಿನೆಮಾ ಶೂಟಿಂಗ್ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬೇಡಿಕೆ ಹೆಚ್ಚಿಸಿಕೊಂಡ ಪುಷ್ಪಾ ಸಿನೆಮಾ….

ಪುಷ್ಪಾ, RRR ಹಾಗೂ ಕೆಜಿಎಫ್-2 ಸಿನೆಮಾಗಳ ಬಳಿಕ ದಕ್ಷಿಣ ಭಾರತದ ಸಿನೆಮಾಗಳ ಕ್ರೇಜ್ ಜೋರಾಗಿದೆ. ವಿಶ್ವಮಟ್ಟದಲ್ಲಿ ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನೆಮಾಗಳ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ. ಕೆಜಿಎಫ್-2 ಸಿನೆಮಾ ದಿನೇ ದಿನೇ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಲೇ ಇದೆ. ಇದಿಘ ಪುಷ್ಪ 2 ಸಿನೆಮಾ ಸಹ ಶೂಟಿಂಗ್ ಪೂರ್ಣಗೊಳ್ಳುವುದಕ್ಕು ಮುಂಚೆಯೇ ಬೇಡಿಕೆ ಹೆಚ್ಚಿಸಿಕೊಂಡಿದೆ. ಮೂಲಗಳ ಪ್ರಕಾರ ಪುಷ್ಪಾ ಸಿನೆಮಾದ ಶೂಟಿಂಗ್ ಮುಗಿಯುವದಕ್ಕೂ ಮುಂಚೆಯೇ ಸುಮಾರು 700 ಕೋಟಿ ಬ್ಯುಸಿನೆಸ್ ಮಾಡಿದೆ ಎಂದು ಹೇಳಲಾಗುತ್ತಿದೆ.

ಸದ್ಯ ಪ್ಯಾನ್ ಇಂಡಿಯಾ ಸಿನೆಮಾಗಳಲ್ಲಿ ದಕ್ಷಿಣ ಭಾರತದ ಸಿನೆಮಾಗಳ ಮೇಲೆ ಹೆಚ್ಚು ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿದೆ. ಅದರಲ್ಲೂ ಪುಷ್ಪಾ, RRR ಹಾಗೂ ಕೆಜಿಎಫ್-2 ಸಿನೆಮಾಗಳ ಬಳಿಕವಂತೂ ಸೌತ್ ಪ್ಯಾನ್ ಇಂಡಿಯಾ ಸಿನೆಮಾಗಳು ತಮ್ಮದೇ ಆದ ಖ್ಯಾತಿ ಪಡೆದುಕೊಂಡಿದೆ. ಇದೀಗ ಪುಷ್ಪ-2 ಸಿನೆಮಾದ ಸರದಿಯಾಗಿದೆ. ಬಾಲಿವುಡ್ ನಲ್ಲಿ ಪುಷ್ಪ ಚಾಪ್ಟರ್‍ 1 ಸುಮಾರು ನೂರು ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನೂ ಪುಷ್ಪ ಸಿನೆಮಾದಲ್ಲಿ ಅಲ್ಲು ಅರ್ಜುನ್ ನಟನೆಗೆ ಬಾಲಿವುಡ್ ಮಂದಿ ಮಾರುಹೋಗಿದ್ದಾರೆ. ಈ ಹಿನ್ನೆಯಲ್ಲಿ ಪುಷ್ಪ ಸಿನೆಮಾದ ಮೇಲೆ ಹೆಚ್ಚಿನ ನಿರೀಕ್ಷೆ ಹುಟ್ಟಿ ಬೇಡಿಕೆ ಹೆಚ್ಚಿಸಿಕೊಂಡಿದೆ.

ಕೆಜಿಎಫ್ ಚಾಪ್ಟರ್‍ 1 ಬಾಲಿವುಡ್ ನಲ್ಲಿ 44 ಕೋಟಿ ಕಲೆಕ್ಷನ್ ಮಾಡಿತ್ತು, ಕೆಜಿಎಫ್-2 ಈಗಾಗಲೇ 400 ಕೋಟಿ ಗಡಿಯನ್ನು ದಾಟಿದ್ದು, ಬಾಲಿವುಡ್ ನ ಅನೇಕ ಸಿನೆಮಾಗಳ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ. ಇದರಿಂದಾಗಿ ಪುಷ್ಪ ಸಿನೆಮಾದ ಮೇಲೆ ಸಹ ನಿರೀಕ್ಷೆ ಹೆಚ್ಚಾಗಿದೆ. ಒಟಿಟಿಯ ಹಕ್ಕು ಬರೊಬ್ಬರಿ 300 ಕೋಟಿಗೆ ಸೇಲ್ ಆಗಿದೆ ಎಂದು ಹೇಳಲಾಗುತ್ತಿದೆ. ಬಿಡುಗಡೆಗೂ ಮುಂಚೆಯೇ ಈ ಮಟ್ಟಿಗೆ ಬೇಡಿಕೆ ಪಡೆದುಕೊಂಡ ಸಿನೆಮಾ ಸಹ ಇದಾಗಿದೆ ಎನ್ನಬಹುದಾಗಿದೆ. ಆದರೆ ಈ ಸಿನೆಮಾ ನೇರವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಲ್ಲ. ಬದಲಿಗೆ ಸಿನೆಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಕರಾರಿನಂತೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆಯಂತೆ.

ಉಳಿದಂತೆ ಸೌತ್ ಇಂಡಿಯಾದ ಇತರೆ ಭಾಷೆಗಳಲ್ಲಿ ಸಿನೆಮಾ ಒಟಿಟಿ ಹಕ್ಕು 200 ಕೋಟಿಗೆ ಹಾಗೂ ಬಾಲಿವುಡ್ ನಲ್ಲಿ 200 ಕೋಟಿ ರೂಪಾಯಿಗಳಿಗೆ ಸೇಲ್ ಆಗಿದೆಯಂತೆ. ಈ ಎಲ್ಲಾವನ್ನು ಸೇರಿಸಿದರೇ ಒಟ್ಟು 700 ಕೋಟಿ ರೂಪಾಯಿಗಳನ್ನು ಶೂಟಿಂಗ್ ಗೂ ಮೊದಲೇ ಕಲೆಕ್ಷನ್ ಮಾಡಿದ ಸಿನೆಮಾ ಆಗಿದೆ ಪುಷ್ಪ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿಲ್ಲ ಎನ್ನಲಾಗಿದೆ. ಪುಷ್ಪ-2 ಸಿನೆಮಾದ ಶೂಟಿಂಗ್ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಇನ್ನೂ ಶೀಘ್ರದಲ್ಲೇ ಶೂಟಿಂಗ್ ಶೆಡ್ಯೂಲ್ ಸಹ ಶುರುವಾಗಲಿದೆ ಎಂದು ಹೇಳಲಾಗುತ್ತಿದ್ದು, ಸಿನೆಮಾ 2023 ರ ಬೇಸಿಗೆಯಲ್ಲಿ ತೆರೆ ಮೇಲೆ ಅಬ್ಬರಿಸಲಿದೆ ಎಂದು ಸಿನಿರಂಗದಲ್ಲಿ ಹೇಳಲಾಗುತ್ತಿದೆ.

- Advertisement -

You May Like

More