ಪುಷ್ಪಾ-2 ಸಿನೆಮಾದಲ್ಲಿ ನಿಮಗೂ ನಟಿಸಬೇಕೆಂಬ ಆಸೆಯಿದೆಯೇ, ತಡ ಯಾಕೆ ನೀವು ಸಹ ಟ್ರೈ ಮಾಡಿ…!

ದೇಶದ ಸಿನಿರಂಗದಲ್ಲಿ ದೊಡ್ಡ ರೇಂಜ್ ನಲ್ಲಿ ಸಕ್ಸಸ್ ಆದ ಸಿನೆಮಾ ಪುಷ್ಪ. ಸಿನೆಮಾದಲ್ಲಿನ ಹಾಡುಗಳು ಹಾಗೂ ಡೈಲಾಗ್ ಗಳು ಎಲ್ಲರನ್ನೂ ರಂಜಿಸಿದ್ದು, ಇಂದಿಗೂ ಸಹ ಹವಾ ಮುಂದುವರೆಸಿಕೊಂಡು ಹೋಗುತ್ತಿದೆ. ಬಾಲಿವುಡ್ ಸಿನಿರಂಗದಲ್ಲೂ ಸಹ ತೆಲುಗು ಸಿನೆಮಾದ ಖದರ್‍ ತೋರಿದ ಪುಷ್ಪಾ ಸಿನೆಮಾದಲ್ಲಿ  ನಟಿಸಲು ನಿಮಗೂ ಆಸೆಯಿದ್ದರೇ ಅದಕ್ಕಾಗಿ ಸಿನಿಮಾ ತಂಡ ಒಳ್ಳೆಯ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಸದ್ಯ ಎಲ್ಲೆಡೆ ಪುಷ್ಪಾ-2 ಸಿನೆಮಾದ ಸುದ್ದಿಗಳು ಹರಿದಾಡುತ್ತಿದ್ದು, ಇದೀಗ ಸಿನೆಮಾದ ಆಡಿಷನ್ ಸುದ್ದಿ ಮಾಡುತ್ತಿದೆ.

ಪುಷ್ಪಾ ಸಿನೆಮಾದಲ್ಲಿ ಅಲ್ಲು ಅರ್ಜುನ್ ಜೊತೆಗೆ ನಟಿಸುವ ಅವಕಾಶವನ್ನು ಚಿತ್ರತಂಡ ಎಲ್ಲರಿಗೂ ಒದಗಿಸಿದೆ. ಆದರೆ ಆಡಿಷನ್ ಗೆ ಹೋಗಿ ನಿಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕಿದೆ ಅಷ್ಟೆ. ಒಂದು ವೇಳೆ ನೀವು ಅಲ್ಲಿ ಸೆಲೆಕ್ಟ್ ಆದರೇ ನಿಮಗೆ ಭರ್ಜರಿ ಅವಕಾಶ ಸಿಗುತ್ತದೆ. ಇನ್ನೂ ಪುಷ್ಪಾ ಸಿನೆಮಾದ ನಿರ್ಮಾಪಕರೂ ಸಹ ಅಲ್ಲು ಅರ್ಜುನ್ ಜೊತೆಗೆ ನಟಿಸುವಂತಹ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು, ಈ ಕುರಿತು ಅಧಿಕೃತ ಹೇಳಿಕೆಯನ್ನು ಸಹ ನೀಡಲಾಗಿದೆ. ನಿಮಗೆ ಅಲ್ಲು ಅರ್ಜುನ್ ಜೊತೆ ನಟಿಸುವ ಬಯಕೆಯಿದ್ದರೇ, ಆಡಿಷನ್ ಗಳಿಗೆ ಹಾಜರಾಗಿ ಎಂದು ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ. ಪುಷ್ಪಾ-2 ಸಿನೆಮಾದ ಆಡಿಷನ್  ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಚಿತ್ರತಂಡ ತಿಳಿಸಿದೆ.

ತಿರುಪತಿಯಲ್ಲಿ ಆಡಿಷನ್ ನಡೆಯಲಿದ್ದು, ಇದರಲ್ಲಿ ಎಲ್ಲಾ ವಯಸ್ಸಿನ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೂ ಅವಕಾಶವಿದೆ. ಜುಲೈ 3 ರಿಂದ ಜುಲೈ 5 ರವರೆಗೂ ತಿರುಪತಿಯಲ್ಲಿರುವ ಮೇಕ್ ಮೈ ಬೇಬಿ ಜೀನಿಯಸ್ ಎಂಬ ಖಾಸಗಿ ಶಾಲೆಯಲ್ಲಿ ಆಡಿಷನ್ ನಡೆಯಲಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಲು ಮುಕ್ತ ಅವಕಾಶವನ್ನು ಕಲ್ಪಿಸಿಕೊಟ್ಟಿದೆ ಚಿತ್ರತಂಡ.ಇನ್ನೂ ಪುಷ್ಪಾ-2 ಸಿನೆಮಾದ ಆಡಿಷನ್ ನಲ್ಲಿ ಎಲ್ಲರಿಗೂ ಭಾಗವಹಿಸುವ ಅವಕಾಶ ನೀಡಿದ ಚಿತ್ರತಂಡ ಇಲ್ಲೊಂದು ಕಂಡಿಷನ್ ಸಹ ಇಟ್ಟಿದೆ. ಚಿಕ್ಕ ವಯಸ್ಸಿನಿಂದ ಹಿರಿಯರವರೆಗೂ ಯಾರೂ ಬೇಕಾದರೂ ಭಾಗವಹಿಸಬಹುದಾಗಿದೆ. ಚಿತ್ತೂರು ಶೈಲಿಯ ಭಾಷೆಯಲ್ಲಿ ಮಾತನಾಡಲು ಬಂದವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಗಿದೆ ಎನ್ನಲಾಗಿದೆ. ಈ ಭಾಷೆ ನಿಮಗೆ ಮಾತನಾಡಲು ಚೆನ್ನಾಗಿ ಬಂದರೇ ನಿಮಗೂ ಸಹ ಪುಷ್ಪಾ-2 ಸಿನೆಮಾದಲ್ಲಿ ನಟಿಸುವಂತಹ ಅವಕಾಶ ಸಿಗಬಹುದಾಗಿದೆ.

ಇನ್ನೂ ಪುಷ್ಪಾ-2 ಸಿನೆಮಾ ಸೆಟ್ಟೇರುವುದಕ್ಕೂ ಮುಂಚೆಯೇ ಸಿನೆಮಾದ ಬಗ್ಗೆ ಅನೇಕ ರೂಮರ್‍ ಗಳು ಹರಿದು ಬರುತ್ತಿವೆ. ಅದರಲ್ಲಿ ರಶ್ಮಿಕಾ ಪಾತ್ರ ಸಿನೆಮಾ ಅರ್ಧದಲ್ಲೇ ಮುಕ್ತಾಯವಾಗುತ್ತದೆ. ಬಳಿಕ ವಿದೇಶಿ ನಟಿಯೊಬ್ಬರು ಎಂಟ್ರಿ ಕೊಡಲಿದ್ದಾರೆ ಎಂತಲೂ. ಸಿನೆಮಾದಲ್ಲಿ ಕಾಲಿವುಡ್ ಸ್ಟಾರ್‍ ನಟ ವಿಜಯ್ ಸೇತು ಪತಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂತಲೂ. ಹೀಗೆ ಅನೇಕ ರೂಮರ್‍ ಗಳು ಹರಿದಾಡುತ್ತಿವೆ. ಇನ್ನೂ ನಿರ್ದೇಶಕ ಸುಕುಮಾರ್‍ ಸಿನೆಮಾವನ್ನು ದೇಶದಲ್ಲಿನ ಎಲ್ಲಾ ರೆಕಾರ್ಡ್‌ಗಳನ್ನು ಬ್ರೇಕ್ ಮಾಡುವ ನಿಟ್ಟಿನಲ್ಲಿ ಸಿನೆಮಾ ಸ್ಕ್ರಿಪ್ಟ್ ಅನ್ನು ತುಂಬಾನೆ ಬದಲಾಯಿಸಿದ್ದಾರೆ ಎನ್ನಲಾಗುತ್ತಿದೆ.

Previous articleಸರ್ಜರಿ ಬಳಿಕ ಸೋಷಿಯಲ್ ಮಿಡಿಯಾದಲ್ಲಿ ಪ್ರತ್ಯಕ್ಷನಾದ ದೂದ್ ಪೇಡ ದಿಗಂತ್…!
Next articleಅರೆನಗ್ನವಾಗಿ ಕಾಣಿಸಿಕೊಂಡ ಅಮಂಡಾ, ನೆವರ್ ಬಿಪೋರ್ ಅನ್ನೋ ಲುಕ್…!