Cinema

ಒಂದೇ ಚಿತ್ರದಲ್ಲಿ ನಟಿಸುತ್ತಾರಾ ಪುನೀತ್ ರಾಜಕುಮಾರ್ ಹಾಗು ಯಶ್!

ಭಾರತೀಯ ಚಿತ್ರರಂಗದ ಇತರ ಭಾಷೆಗಳಲ್ಲಿ ಹಲವಾರು ಮಲ್ಟಿ ಸ್ಟಾರರ್ ಸಿನಿಮಾಗಳು ಬಂದಿವೆ. ಸ್ಟಾರ್ ನಟರು ಜೊತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಖುಷಿಯನ್ನು ಡಬಲ್ ಮಾಡುತ್ತಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳು ಬಹಳ ಕಡಿಮೆ . ಇಲ್ಲಿ ನಮ್ಮ ನಟರು, ಹೀರೋಯಿಸಮ್ ಹಾಗು ಒಬ್ಬ ನಾಯಕನ ಮೇಲೆ ಕೇಂದ್ರೀಕರಿಸುವಂತಹ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಲು ಬಯಸುತ್ತಾರೆ. ಮಲ್ಟಿ ಸ್ಟಾರರ್ ಸಿನಿಮಾಗಳು ಸೆಟ್ಟೇರುವುದು ಬಹಳ ಕಡಿಮೆ. ಹಲವಾರು ಮಲ್ಟಿ ಸ್ಟಾರರ್ ಗಳು ಘೋಷಣೆ ಆದರೂ ಅವುಗಳು ಕಾರ್ಯರೂಪಕ್ಕೆ ಬರುವುದು ಬಹಳ ಕಡಿಮೆ..
ಒಂದೆರಡು ವರ್ಷಗಳ ಜೋಗಿ ಪ್ರೇಮ್ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ಹಾಗೂ ಅಭಿನಯ ಚಕ್ರವರ್ತಿ ಕಿಚ್ಛ್ ಸುದೀಪ್ ರನ್ನು ದಿ ವಿಲ್ಲನ್ ಸಿನಿಮಾ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡಿದ್ದರು. ಅದಾದ ನಂತರ ಕನ್ನಡದಲ್ಲಿ ಯಾವುದೇ ಮಲ್ಟಿ ಸ್ಟಾರರ್ ಸಿನಿಮಾಗಳು ತೆರೆಕಂಡಿಲ್ಲ. ಈ ರೀತಿ ಮಲ್ಟಿ ಸ್ಟಾರರ್ ಸಿನಿಮಾಗಳಿಂದ ಇಬ್ಬರು ನಟರ ಅಭಿಮಾನಿಗಳ ನಡುವೆಯೂ ಒಗ್ಗಟ್ಟು ಮೂಡುತ್ತದೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ತಮ್ಮದೇ ಆದ ಅಭಿಮಾನಿ ಬಳಗ ಇದೆ. ಅಭಿಮಾನಿಗಳಿಗೆ ಈ ನಟರೆಂದರೆ ಬಹಳ ಕ್ರೇಜ್. ಇವರಿಬ್ಬರನ್ನು ತೆರೆಮೇಲೆ ಜೊತೆಯಾಗಿ ನೋಡಲು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಇಬ್ಬರು ನಟರನ್ನು ಒಂದಾಗಿ ತೆರಮೇಲೆ ತರಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಜ್ಜಾಗಿದ್ದಾರೆ. ಈ ಬಗ್ಗೆ ಸಂತೋಷ್ ಹೇಳಿದ್ದಾರೆ. ಈ ವಿಷಯ ತಿಳಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಈ ಇಬ್ಬರು ನಟರ ಸಮಾಗಮದ ಸಿನಿಮಾ ಹೇಗಿರಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.
ನಿರ್ದೇಶಕ ಸಂತೋಷ್ ಆನಂದ್ ರಾಮ್ ತಾವು ಮೊದಲ ಬಾರಿಗೆ ನಿರ್ದೇಶಕರಾದ ದಿನವನ್ನು ನೆನೆದು ಟ್ವೀಟ್ ಮಾಡಿದ್ದರು. ಜುಲೈ 23, 2013 ರಂದು 7 ವರ್ಷದ ಕೆಳಗೆ ಮಿ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಕಥೆಯನ್ನು ಯಶ್ ಅವರಿಗೆ ಹೇಳಿದ ದಿನದಿಂದ ಅವರು ನಿರ್ದೇಶಕರಾದರು ಎಂದು ಸಂತೋಷ್ ಆನಂದ್ ರಾಮ್ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಯಶ್… ಮಿ ಆಂಡ್ ಮಿಸೆಸ್ ರಾಮಾಚಾರಿ ಸಿನಿಮಾದಲ್ಲಿ ನಟಿಸುವ ನನ್ನ ನಿರ್ಧಾರದ ಬಗ್ಗೆ ನನಗೆ ಖುಷಿಯಾಗುತ್ತದೆ, ನೀವು ನನ್ನ ನಿರೀಕ್ಷೆಯನ್ನು ಸುಳ್ಳು ಮಾಡಲಿಲ್ಲ. ಹಾಗು ನಾವೆಲ್ಲರೂ ಹೆಮ್ಮೆ ಪಡುವಂತಹ ನಿರ್ದೇಶಕ ಸಿಕ್ಕಿದ್ದಾರೆ ಎಂದು ಪ್ರತಿಕ್ರಿಯೆ ನೀಡಿರುವ ಯಶ್.
ಇದರ ಜೊತೆಗೆ.. ಸಂತೋಷ್ ಅವರು ತೋರಿಸಿರುವ ಯುವರತ್ನ ಸಿನಿಮಾ ಬಗ್ಗೆ ಬರೆದಿರುವ ಯಶ್ ನೀವು ನನಗೆ ತೋರಿಸಿರುವ ಯುವರತ್ನದ ಹಾಡುಗಳು ಮತ್ತು ತುಣುಕುಗಳು ಬ್ಲಾಕ್ ಬಸ್ಟರ್ ಒಂದು ಬರುತ್ತಿದೆ ಎಂಬುದರ ಸೂಚನೆ ನೀಡಿದೆ. ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಯಶ್ ಟ್ವೀಟ್ ಮಾಡಿದ್ದಾರೆ.ಭಾರತೀಯ ಚಿತ್ರರಂಗದ ಇತರ ಭಾಷೆಗಳಲ್ಲಿ ಹಲವಾರು ಮಲ್ಟಿ ಸ್ಟಾರರ್ ಸಿನಿಮಾಗಳು ಬಂದಿವೆ. ಸ್ಟಾರ್ ನಟರು ಜೊತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸಿ ಅಭಿಮಾನಿಗಳ ಖುಷಿಯನ್ನು ಡಬಲ್ ಮಾಡುತ್ತಾರೆ. ಆದರೆ ಕನ್ನಡ ಚಿತ್ರರಂಗದಲ್ಲಿ ಮಲ್ಟಿ ಸ್ಟಾರರ್ ಸಿನಿಮಾಗಳು ಬಹಳ ಕಡಿಮೆ . ಇಲ್ಲಿ ನಮ್ಮ ನಟರು, ಹೀರೋಯಿಸಮ್ ಹಾಗು ಒಬ್ಬ ನಾಯಕನ ಮೇಲೆ ಕೇಂದ್ರೀಕರಿಸುವಂತಹ ಪಾತ್ರಗಳಲ್ಲೇ ಹೆಚ್ಚಾಗಿ ನಟಿಸಲು ಬಯಸುತ್ತಾರೆ. ಮಲ್ಟಿ ಸ್ಟಾರರ್ ಸಿನಿಮಾಗಳು ಸೆಟ್ಟೇರುವುದು ಬಹಳ ಕಡಿಮೆ. ಹಲವಾರು ಮಲ್ಟಿ ಸ್ಟಾರರ್ ಗಳು ಘೋಷಣೆ ಆದರೂ ಅವುಗಳು ಕಾರ್ಯರೂಪಕ್ಕೆ ಬರುವುದು ಬಹಳ ಕಡಿಮೆ..

Trending

To Top