Film News

ಅಪ್ಪು ಬಿಡುಗಡೆ ಮಾಡಲಿದ್ದಾರೆ ಕಸ್ತೂರಿ ಮಹಲ್ ಟೀಸರ್

ಬೆಂಗಳೂರು: ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಕಸ್ತೂರಿ ಮಹಲ್ ಸಿನೆಮಾದ ಟೀಸರ್ ಹೊಸ ವರ್ಷಕ್ಕೆ ಬಿಡುಗಡೆಯಾಗುವ ವಿಚಾರ ತಿಳಿದ ವಿಚಾರ, ಇದೀಗ ಚಿತ್ರ ತಂಡದಿಂದ ಹೊಸ ಮಾಹಿತಿ ಹೊರಬಂದಿದೆ.

ಕನ್ನಡದ ಮಾಸ್ಟರ್ ಪೀಸ್ ಸುಂದರಿ ಎಂದೇ ಕರೆಯುವ ಶಾನ್ವು ಶ್ರೀವಾಸ್ತವ ಅಭಿನಯದ ಕಸ್ತೂರಿ ಮಹಲ್ ಸಿನೆಮಾ ಟೀಸರ್ ಕನ್ನಡ ಟಾಪ್ ಸ್ಟಾರ್ ಪುನೀತ್ ರಾಜಕುಮಾರ್ ರವರು ರಿಲೀಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಟೀಸರ್ ರಿಲೀಸ್ ಮಾಡುವ ಮೂಲಕ ಅಪ್ಪು ಕಸ್ತೂರಿ ಮಹಲ್ ಚಿತ್ರಕ್ಕೆ ಸಾಥ್ ನೀಡಲಿದ್ದಾರೆ. ಹೊಸ ವರ್ಷಕ್ಕೆ ಕಸ್ತೂರಿ ಮಹಲ್ ಟೀಸರ್ ಜನವರಿ 1 ರಂದು ರಾತ್ರಿ 12.05 ಕ್ಕೆ ರಿಲೀಸ್ ಆಗಲಿದೆ ಎನ್ನಲಾಗಿದೆ.

ಇನ್ನೂ ದಿನೇಶ್ ಬಾಬು ನಿರ್ದೇಶಕತ್ವದಲ್ಲಿ ಮೂಡಿ ಬಂದಿರುವ ಕಸ್ತೂರಿ ಮಹಲ್ ಚಿತ್ರ ನಿರ್ದೇಶಕರ ೫೦ನೇ ಸಿನೆಮಾ ಆಗಿದ್ದು, ಅಕ್ಟೋಬರ್ ನಲ್ಲಿ ಚಿತ್ರೀಕರಣ ಶುರುವಾಗಿದ್ದು, ಚಿತ್ರತಂಡ ಕೇವಲ 20 ದಿನಗಳಲ್ಲಿಯೇ ಶೂಟಿಂಗ್ ಮುಗಿಸಿದೆ. ಇನ್ನೂ ಈ ಚಿತ್ರದ ಬಹುತೇಕ ಶೂಟಿಂಗ್ ಚಿಕ್ಕಮಂಗಳೂರಿನಲ್ಲಿಯೇ ನಡೆದಿದೆ.

ಈ ಚಿತ್ರದಲ್ಲಿ ನಟ ಸ್ಕಂಧ ಅಶೋಕ್, ರಂಗಾಯಣ ರಘು, ನಿನಾಸಂ ಅಶ್ವತ್ಥ್, ಶ್ರುತಿ, ಪ್ರಕಾಶ್, ಸೇರಿದಂತೆ ಅನೇಕ ಸ್ಟಾರ್ ಕಲಾವಿದರು ನಟಿಸಲಿದ್ದಾರೆ. ಮುಖ್ಯವಾಗಿ ಈ ಚಿತ್ರ ಸೈಕಾಲಜಿಕಲ್ ಥ್ರಿಲ್ಲರ್ ಮಾದರಿಯ ಚಿತ್ರವಾಗಿದೆ. ಇನ್ನೂ ಮುಂದಿನ ವರ್ಷ ಈ ಚಿತ್ರ ಸಿನೆಮಾ ಮಂದಿರಗಳಲ್ಲಿ ತೆರೆ ಕಾಣಲಿದೆ ಎನ್ನಲಾಗುತ್ತಿದೆ.

Trending

To Top