ಪುನೀತ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿದ ಅಪ್ಪು ಪತ್ನಿ ಅಶ್ವಿನಿ ಹಾಗೂ ಕುಟುಂಬಸ್ಥರು ……

ಕರುನಾಡಿಗೆ ಅಕ್ಟೋಬರ್‍ 29, 2021 ರಂದು ದೊಡ್ಡ ಅಘಾತಕಾರಿ ಸುದ್ದಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ಹೃದಯ ಒಡೆದುಹೋಗುವಂತಹ ಸುದ್ದಿ ಬಂದು ಅಪ್ಪಳಿಸುತ್ತೆ, ಎಲ್ಲರೂ ಕ್ಷಣ ದಂಗಾಗಿಬಿಡುತ್ತಾರೆ. ಒಂದು ದೊಡ್ಡ ದುಃಖಕರ ಸುದ್ದಿಯೊಂದು ಹೊರಬರುತ್ತದೆ. ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಸಾವಿನ ಸುದ್ದಿ. ಈ ಸುದ್ದಿ ಹೊರಬಂದ ಕೂಡಲೇ ಕರ್ನಾಟಕ ಮಾತ್ರವಲ್ಲದೇ ದೇಶ ವಿದೇಶಗಳಿಂದಲೂ ಸಹ ಅಭಿಮಾನಿಗಳು ಕಂಬನಿ ಮಿಡಿದಿದ್ದರು. ಇಡೀ ರಾಜ್ಯವೇ ಶೋಕದಲ್ಲಿ ತುಂಬಿತ್ತು.

ನಟ ಪುನೀತ್  ನಮ್ಮನ್ನು ಅಗಲಿ ಇಂದಿಗೆ ಸರಿಯಾಗಿ ಏಳು ತಿಂಗಳು ಕಳೆದಿವೆ. ಅಪ್ಪು ಅಭಿಮಾನಿಗಳಿಗೆ ಇಂದಿಗೂ ಸಹ ಅಪ್ಪು ಇಲ್ಲ ಎಂಬ ವಿಚಾರವನ್ನು ಇನ್ನೂ ತಲೆಯಿಂದ ತೆಗೆದು ಹಾಕಲು ಆಗುತ್ತಿಲ್ಲ. ಇಂದಿಗೂ ಸಹ ಅಪ್ಪು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆಯಿಂದ ಎಲ್ಲರೂ ನಂಬಿ ಬದುಕುತ್ತಿದ್ದಾರೆ. ಇಂದಿಗೆ ಅಪ್ಪು ಅಗಲಿ ಏಳು ತಿಂಗಳು ಆದ ಹಿನ್ನೆಲೆಯಲ್ಲಿ ಪುನೀತ್ ಕುಟುಂಬಸ್ಥರು ಹಾಗೂ ಆಪ್ತರು ಅಪ್ಪು ಇರುವಂತಹ ಪುಣ್ಯಭೂಮಿಗೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಇಂದು ಬೆಳಿಗ್ಗೆ ಅಪ್ಪು ಪತ್ನಿ ಅಶ್ವಿನಿ ಹಾಗೂ ಅಪ್ಪು ಇಬ್ಬರೂ ಪುತ್ರಿಯರು ಹಾಗೂ ರಾಘವೇಂದ್ರ ರಾಜಕುಮಾರ್‍, ವಿನಯ್ ರಾಜಕುಮಾರ್‍, ಯುವರಾಜಕುಮಾರ್‍ ಸೇರಿದಂತೆ ಆಪ್ತರು ಹಾಗೂ ಕುಟುಂಬಸ್ಥರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನೂ ಅಪ್ಪು ಅಗಲಿದ ಪ್ರತೀ ಮಾಹೆಯಲ್ಲೂ ಸಹ ಕುಟುಂಬಸ್ಥರು ಅಪ್ಪು ಸಮಾಧಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.

ಇನ್ನೂ ಅಪ್ಪು ಕುಟುಂಬಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಅಪ್ಪು ಅಭಿಮಾನಿಗಳ ಭೇಟಿಗೆ ಅವಕಾಶ ನೀಡಲಾಗುತ್ತದೆ. ಇನ್ನೂ ಪುನೀತ್ ರವರಿಗೆ ಪೂಜೆ ಸಲ್ಲಿಸಿದ ಬಳಿಕ ಅಪ್ಪು ಕುಟುಂಬಸ್ಥರೆಲ್ಲಾ ರಾಜಕುಮಾರ್‍ ಹಾಗೂ ಪಾರ್ವತಮ್ಮ ರಾಜಕುಮಾರ್‍ ರವರ ಸಮಾಧಿಗೂ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.  ಇನ್ನೂ ಅಪ್ಪು ಮಾಡಿದ ಅನೇಕ ಸಾಮಾಜಿಕ ಕಾರ್ಯಗಳು ಅವರ ನಿಧನ ಬಳಿಕವೇ ತಿಳಿದಿದ್ದು, ಅವರು ಮಾಡುವ ಸಾಮಾಜಿಕ ಕೆಲಸಗಳು ಯಾರಿಗೂ ತಿಳಿಯಲು ಬಿಡುತ್ತಿಲ್ಲ. ಅವರು ಅಗಲಿದ ಬಳಿಕ ಎಲ್ಲಾ ವಿಚಾರಗಳು ಹೊರಬಂದವು. ಇನ್ನೂ ಅಪ್ಪುರನ್ನು ಕಳೆದುಕೊಂಡ ಬಳಿಕ ರಾಘವೇಂದ್ರ ರಾಜಕುಮಾರ್‍ ಇನ್ನೂ ನೋವಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.

ಇನ್ನೂ ರಾಘವೇಂದ್ರ ರಾಜ್ ಕುಮಾರ್‍ ಸೋಷಿಯಲ್ ಮಿಡಿಯಾದಲ್ಲಿ ಅಪ್ಪು ಜೊತೆಗಿರುವ ಅಪರೂಪದ ಪೊಟೋಗಳನ್ನು ಅಪ್ಪು ಬಾಲ್ಯದ ಪೋಟೊಗಳಿಂದ ಸಿನೆಮಾ ರಂಗಕ್ಕೆ ಕಾಲಿಡುವವರೆಗಿನ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಈಗಾಗಲೇ ಅಪ್ಪು ಅಭಿನಯದ ಕೊನೆಯ ಸಿನೆಮಾ ಜೇಮ್ಸ್ ಬಿಡುಗಡೆಯಾಗಿದ್ದು, ಪುಲ್ ಹಿಟ್ ಆಗಿತ್ತು. ಸದ್ಯ ಅಪ್ಪು ರವರ ಕನಸಾಗಿದ್ದ ಗಂಧದ ಗುಡಿ ಸಿನೆಮಾ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.

Previous articleಸ್ಯಾಂಡಲ್ ವುಡ್ ರೆಬೆಲ್ ಸ್ಟಾರ್ ಅಂಬರೀಶ್ ರವರ ಹುಟ್ಟುಹಬ್ಬದ ಸಂಭ್ರಮ…
Next articleಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದ ಶ್ರದ್ದಾ…. ಹಾಟ್ ಲುಕ್ ನೊಂದಿಗೆ ಎಲ್ಲರ ನಿದ್ದೆಗೆಡಿಸಿದ ಬ್ಯೂಟಿ…..