ಪುನೀತ್ ರಾಜ್ ಕುಮಾರ್ ರವರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರಧಾನ, ಪ್ರಶಸ್ತಿ ಸ್ವೀಕರಿಸಿದ ಪುನೀತ್ ಪತ್ನಿ ಅಶ್ವಿನಿ

ಕನ್ನಡ ಸಿನಿರಂಗದ ಮೇರು ನಟ ಪವರ್‍ ಸ್ಟಾರ್‍ ಪುನೀತ್ ರಾಜ್ ಕುಮಾರ್‍ ಕೇವಲ ಸಿನೆಮಾಗೆ ಮಾತ್ರ ಸೀಮಿತವಾಗದೇ ಅನೇಕ ಸಾಮಾಆಜಿಕ ಕಾರ್ಯಗಳನ್ನು ಮಾಡಿದ್ದರು. ಆದರೆ ಯಾವುದೇ ಪ್ರಚಾರವಿಲ್ಲದೇ ಅವರು ಇಹಲೋಕ ತ್ಯೆಜಿಸುವವರೆಗೂ ಅವರ ಮಾಡಿದ ಸಮಾಜ ಸೇವೆ ಹೊರಬಂದಿಲ್ಲ. ಇಡೀ ಕರುನಾಡೇ ಅಪ್ಪು ನಿಧನದಿಂದ ಕಣ್ಣೀರಿಟ್ಟಿತ್ತು. ಇದೀಗ ಪುನೀತ್ ರವರಿಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.

ಸ್ಯಾಂಡಲ್ ವುಡ್ ಮುತ್ತುರತ್ನ ಎಂದೇ ಕರೆಯಲಾಗುವ ಡಾ.ಪುನೀತ್ ರಾಜ್ ಕುಮಾರ್‍ ರವರಿಗೆ ಚಿತ್ರದುರ್ಗದ ಮುರುಘಾ ಮಠದದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮರಣೋತ್ತರ 2021ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ. ಪುನೀತ್ ರವರ ಪತ್ನಿ ಅಶ್ವಿನಿ ರವರಿಗೆ ಮುರುಘ ಮಠದ ಡಾ.ಶಿವಮೂರ್ತಿ ಸ್ವಾಮೀಜಿಗಳು ಸನ್ಮಾನ ಮಾಡಿ ಬಳಿಕ ಪ್ರಶಸ್ತಿಯನ್ನು ಸಹ ಪ್ರಧಾನ ಮಾಡಿದ್ದಾರೆ. ಬಾಲನಟ, ನಾಯಕ, ಹಿನ್ನೆಲೆ ಗಾಯಕ, ನೃತ್ಯಗಾರ ಜೊತೆಗೆ ನಿರ್ಮಾಪಕರಾಗಿಯೂ ಸಹ ನಟ ಪುನೀತ್ ರಾಜ್ ಕುಮಾರ್‍ ಕನ್ನಡ ಸಿನಿರಂಗಕ್ಕೆ ಅಪಾರವಾದ ಕೊಡುಗೆ ಸಹ ನೀಡಿದ್ದಾರೆ. ಅತಿ ಮುಖ್ಯವಾಗಿ ಅವರ ಸಾಮಾಜಿಕ ಕಾರ್ಯಗಳಿಗೆ ಬಸವಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗಿದೆ.

ಇದೇ ಕಾರ್ಯಕ್ರಮದಲ್ಲಿ ಮುರುಘಾ ಮಠದ ಶ್ರೀಗಳು ಅಪ್ಪು ರವರ ಸಾಮಾಜಿಕ ಕಾರ್ಯಗಳ ಬಗ್ಗೆ ಗುಣಗಾಣ ಮಾಡಿದ್ದಾರೆ. ಕನ್ನಡ ಸಿನಿ ಜಗತ್ತಿನ ಇತಿಹಾಸದಲ್ಲೇ ಅಚ್ಚಳಿಯದೇ ಉಳಿಯುವಂತ ನಟರಿದ್ದಾರೆ ಎಂದರೇ ಅದು ಅಪ್ಪು ಮಾತ್ರ. ಬಾಲ್ಯದಿಂದಲೇ ತೆರೆಯ ಮೇಲೆ ನಟಿಸಿ, ಬಾಲ್ಯದಿಂದಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ಕೇವಲ ನಟನೆಗೆ ಮಾತ್ರ ಸೀಮಿತವಾಗದೇ ನೃತ್ಯ, ಹಾಡುಗಾರಿಕೆಯಲ್ಲಿ ಸಹ ಪರಿಣಿತಿ ಹೊಂದಿದ ನಾಯಕರಾಗಿದ್ದರು, ಅವರ ಅಗಲಿಕೆ ಇಡೀ ಕನ್ನಡ ನಾಡಿಗೆ ದುಃಖದ ಸಂಗತಿಯಾಗಿದೆ ಎಂದರು.

ಕಳೆದ ವರ್ಷ ಅಕ್ಟೋಬರ್‍ ಮಾಹೆಯಲ್ಲಿ ಪುನೀತ್ ನಮ್ಮನ್ನು ಅಗಲಿದ್ದರು. ಅ.29 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಂದು ಇಡೀ ಕರುನಾಡು ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಎಲ್ಲಾ ಸಿನಿಮಾ ಗಣ್ಯರು ಕಣ್ಣೀರಿಟ್ಟಿದ್ದರು. ಈ ಘಟನೆಯನ್ನು ಇಂದಿಗೂ ಸಹ ಕನ್ನಡನಾಡು ಮರೆಯಲು ಸಾಧ್ಯವಿಲ್ಲ. ಅಪ್ಪು ಈ ಭೂಮಿ ಇರುವವರೆಗೂ ಅಜರಾಮರವಾಗಿ ಉಳಿಯುತ್ತಾರೆ.

Previous articleಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ!
Next articleನಟ ರಾಮ್ ಚರಣ್ ರವರ RC15 ಸಿನೆಮಾಗೆ ಕ್ರೇಜಿ ಟೈಟಲ್, ಶೀಘ್ರ ರಿವೀಲ್