Karnataka

ಮುದ್ದಾದ ಕಂದಮ್ಮನಿಗೆ ಕನ್ನಡ ಎಂದು ಹೆಸರಿಟ್ಟ ಕುಂದಾಪುರದ ದಂಪತಿ! ಮುದ್ದಾದ ಫೋಟೋಗಳನ್ನು ನೋಡಿ

ಕನ್ನಡ, ನಮ್ಮ ಮಾ’ತೃಭಾಷೆ, ಕರ್ನಾಟಕ ನಮ್ಮ ಜ’ನ್ಮಭೂಮಿ. ನಮ್ಮ ನಾಡಿನಲ್ಲಿ ತಾಯಿಗೆ ನೀಡುವಷ್ಟೇ ಗೌರವ ನಮ್ಮ ಮಾ’ತೃಭಾಷೆಗೂ ಸಹ ನೀಡುತ್ತೇವೆ. ಕನ್ನಡ ಅನ್ನೋ ಪದ ಕೇಳಿದ್ರೆನೆ ಮೈ ರೋ’ಮಾಂಚನವಾಗುತ್ತೆ. ಇಡೀ ವಿಶ್ವದಲ್ಲೇ ಅತಿ ಹೆಚ್ಚು ಜ್ಞಾನ ಪೀಠ ಪಡೆದಿರುವ ಭಾಷೆ ನಮ್ಮ ಕನ್ನಡ. ನಮ್ಮ ಹೆಮ್ಮೆ. ಆದರೆ ಇಂದಿನ ಕಾಲದಲ್ಲಿ ನಮ್ಮ ಮಾ’ತೃಭಾಷೆ ಕನ್ನಡ ದಿನದಿಂದ ದಿನಕ್ಕೆ ನ’ಶಿಸಿ ಹೋಗುತ್ತಿದೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ವ್ಯಾ’ಮೋಹದಿಂದ ಕನ್ನಡಿಗರೇ ಕನ್ನಡ ಭಾಷೆ ಬಳಸುವುದನ್ನು ಕಡಿಮೆ ಮಾಡಿದ್ದಾರೆ.

ಹೀಗೆ ಆದರೆ ಮುಂದೊಂದು ದಿನ ಕನ್ನಡ ಬಳಸಿ ಎಂದು ಕನ್ನಡಿಗರಲ್ಲಿಯೇ ಬೇ’ಡಿಕೊಳ್ಳುವ ಸಂದರ್ಭ ಬರುತ್ತದೆ. ಜನರ ಮನಸ್ಥಿತಿ ಹೀಗಿರುವಾಗ ಇಂತಹ ಜನರಿಗೆ ವಿರು’ದ್ಧವಾಗಿದ್ದಾರೆ ಉಡುಪಿ ಜಿಲ್ಲೆಯ ವ್ಯಕ್ತಿ. ಮಾ’ತೃಭಾಷೆ ಮೇಲಿರುವ ಅಭಿಮಾನದಿಂದ, ತಮ್ಮ ಮುದ್ದಾದ ಮ’ಗಳಿಗೆ ಕನ್ನಡ ಎಂದು ನಾಮಕಾರಣ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂ’ಪುವಿನ ಪ್ರತಾಪ್ ಶೆಟ್ಟಿ ಅವರು, ಬೆಂಗಳೂರಿನ ಉದ್ಯಮಿ. ಇವರು ಅಪ್ಪಟ ಕನ್ನಡಾಭಿಮಾನಿ. ಇವರು ಮಾಡಿರುವ ಕೆಲಸ ಎಲ್ಲಾ ಕನ್ನಡಿಗರಿಗೂ ಮಾದರಿಯಾಗುವ ಹಾಗಿದೆ. ಇವರ ಪತ್ನಿಯ ಹೆಸರು ಪ್ರತಿಮಾ ಶೆಟ್ಟಿ, ಈ ದಂಪತಿಗಪು ಕನ್ನಡ ಉಳಿಸುವ ಕೆಲವು ಕಾರ್ಯಗಳನ್ನು ಮಾಡುತ್ತಲೇ ಬಂದಿದ್ದಾರೆ. ಆದರೆ ಈಗ ಅದೆಲ್ಲದ್ದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಹೆ’ಣ್ಣು ಮ’ಗುವಿಗೆ ಕನ್ನಡ ಶೆ’ಟ್ಟಿ ಎಂದು ಹೆಸರು ಇಟ್ಟಿದ್ದಾರೆ.

ಪ್ರತಾಪ್ ಶೆಟ್ಟಿ ಹಾಗೂ ಅವರ ಕುಟುಂಬದವರು 25 ವರ್ಷಗಳಿಂದ ಬೆಂಗಳೂರಿನಲ್ಲೆ ನೆಲೆಸಿರುವವರು. ಇವರ ಸ್ವಭಾವ ಎಂತಹದ್ದು ಎಂದರೆ ಪ್ರತಾಪ್ ಈ ವ್ಯಕ್ತಿ ಹೊರಗಡೆ ಎಲ್ಲಿಯೂ ತಮ್ಮ ಕನ್ನಡಾಭಿಮಾನವನ್ನು ತೋರ್ಪಡಿಸುವುದಿಲ್ಲ. ಇವರಿಗಿರುವ ಭಾಷಾಭಿಮಾನವನ್ನು ಇವರ ಮ’ಗಳಿಗೆ ಇಟ್ಟಿರುವ ಹೆಸರೇ ತೋರಿಸುತ್ತದೆ. ನಮಗೆಲ್ಲ ತಿಳಿದಿರುವ ಹಾಗೆ ಈಗಿನ ಕಾಲದಲ್ಲಿ ಮಗುವಿಗೆ ಹೆಸರಿಡಬೇಕು ಎಂದರೆ ಇಂಟರ್ನೆಟ್ ಮೊರೆ ಹೋಗುತ್ತಾರೆ, ಕೆಲವೊಮ್ಮೆ ಮ’ಗುವಿನ ಹೆಸರಿಗೆ ಸರಿಯಾದ ಅರ್ಥ ಸಹ ತಿಳಿದಿರುವುದಿಲ್ಲ.

ಇಂದಿನ ಜನರು ಹೀಗಿರುವಾಗ. ಪ್ರತಾಪ್ ಶೆಟ್ಟಿ ಇವರೆಲ್ಲರಿಗಿಂತ ಭಿ’ನ್ನವಾಗಿದ್ದಾರೆ. ತಮ್ಮ ಮಗಳಿಗೆ ಹೆಸರಿಡಬೇಕು ಅಂದು ಅವರು ಯೋಚನೆ ಮಾಡಲು ಶುರು ಮಾಡಿದಾಗ, ಅವರಿಗೆ ತಾಯಿ ಭುವನೇಶ್ವರಿಯ ನೆನಪಾಗಿದೆ. ಭಾಷಾಭಿಮಾನ ಹೊಂದಿದ್ದ ಪ್ರತಾಪ್ ಶೆಟ್ಟಿ ತಮ್ಮ ಮಗಳಿಗೆ ಕನ್ನಡ ಎಂದು ಹಸರಿಡುವ ಬಗ್ಗೆ ತಿಳಿಸಿದಾಗ ಅವರ ಪತ್ನಿ ಪ್ರತಿಮಾ ಶೆಟ್ಟಿ ಕೂಡ ಬಹಳ ಸಂತೋಷ ಪಟ್ಟರಂತೆ.ಮತ್ತೊಂದು ವಿಶೇಷತೆ ಏನೆಂದರೆ. ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 1 ರಂದು ಆಚರಿಸುತ್ತೇವೆ. ಕನ್ನಡ ಶೆಟ್ಟಿ ಎಂದು ನಾಮಕಾರಣವಾಗಿರುವ ಈ ಮುದ್ದಾದ ಮ’ಗು ಕೂಡ ನವೆಂಬರ್ ತಿಂಗಳಿನಲ್ಲಿಯೇ ಹುಟ್ಟಿದೆ. ಇದು ವಿಶೇಷವೇ ಸರಿ. ನವೆಂಬರ್ 27ರಂದು ಕನ್ನಡ ಶೆಟ್ಟಿ ಹು’ಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ರಂಗದೋರ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 2019 ರ ನವೆಂಬರ್ 27ರಂದು ಕನ್ನಡ ಶೆಟ್ಟಿ ಜ’ನಿಸಿದರು. ಮುಂದಿನ ತಿಂಗಳು ಒಂದು ವರ್ಷ ತುಂ’ಬುತ್ತದೆ. ಪ್ರತಾಪ್ ಶೆಟ್ಟಿ ಅವರು ಮಗಳ ಜನನ ಪ್ರ’ಮಾಣ ಪತ್ರವನ್ನೂ ಸಹ ಕನ್ನಡ ಶೆಟ್ಟಿ ಹೆಸರಿನಲ್ಲಿಯೇ ನೋಂದಾಯಿಸಿಕೊಂಡಿರುವುದು ಇನ್ನೊಂದು ವಿಶೇಷ. ವೃತ್ತಿಯಲ್ಲಿ ಇಂಟಿರಿಯರ್ ಡಿಸೈನರ್ ಆಗಿರುವ ಪ್ರತಾಪ್ ಶೆಟ್ಟಿ ಅವರ ಕನ್ನಡ ಪ್ರೇಮಕ್ಕೆ ಧನ್ಯವಾ ತಿಳಿಸಲೇಬೇಕು.. ಕನ್ನಡ ಎಂದು ಹೆಸರಿಟ್ಟುಕೊಂಡಿರುವ ಮ’ಗುವಿನ ಮುಂದಿನ ಭವಿಷ್ಯ ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸೋಣ.

Trending

To Top