ಕೆಜಿಎಫ್-3 ಬಗ್ಗೆ ಸ್ಪಷ್ಟನೆ ಕೊಟ್ಟ ನಿರ್ಮಾಪಕ ವಿಜಯ್ ಕಿರಗಂದೂರು….

ಕೆಜಿಎಫ್ ಸಿನೆಮಾ ಇಡೀ ವಿಶ್ವಕ್ಕೆ ಕನ್ನಡಿಗರ ತಾಕತ್ತು ಏನು ಎಂಬುದನ್ನು ತೋರಿಸಿಕೊಟ್ಟ ಸಿನೆಮಾ ಆಗಿದೆ. ಈಗಾಗಲೇ ದೇಶದ ಸಿನಿರಂಗದ ಬಹುತೇಕ ಎಲ್ಲಾ ರೆಕಾರ್ಡ್‌ಗಳನ್ನು ಕೆಜಿಎಫ್-2 ಸಿನೆಮಾ ಬ್ರೇಕ್ ಮಾಡಿದೆ. ಸಿನೆಮಾ 50 ದಿನಗಳನ್ನು ಪೂರೈಸಲು ಹತ್ತಿರದಲ್ಲೇ ಇದ್ದರೂ ಸಹ ಬಾಕ್ಸ್ ಆಫಿಸ್ ಕಲೆಕ್ಷನ್ ಮುಂದುವರೆಯುತ್ತಲೇ ಇದೆ. ಈ ನಡುವೆ ಕೆಜಿಎಫ್-3 ಸಿನೆಮಾದ ಬಗ್ಗೆ ರೂಮರ್‍ ಗಳು ಹುಟ್ಟಿಕೊಂಡಿದ್ದವು. ನಾನಾ ರೀತಿಯಲ್ಲಿ ಚರ್ಚೆಗಳು ಸಹ ಶುರುವಾಗಿದ್ದವು.

ಏಪ್ರಿಲ್ 14 ರಂದು ಬಿಡುಗಡೆಯಾದ ಈ ಕೆಜಿಎಫ್-2 ಸಿನೆಮಾ ಇನ್ನೂ ಪ್ರದರ್ಶನ ವಾಗುತ್ತಲೇ ಇದೆ. ಈ ಸಿನೆಮಾ ಮುಂದೆ ದೊಡ್ಡ ದೊಡ್ಡ ಸ್ಟಾರ್‍ ನಟರ ಸಿನೆಮಾಗಳೆ ಸೋತವು. ಇಂದಿಗೂ ಸಹ ಕೆಜಿಎಫ್-2 ಸಿನೆಮಾ ತನ್ನ ನಾಗಾಲೋಟವನ್ನು ಮುಂದುವರೆಸುತ್ತಿದೆ. ಇನ್ನೂ ಕೆಜಿಎಫ್-2 ಸಿನೆಮಾದಲ್ಲಿ ದೊಡ್ಡ ದೊಡ್ಡ ಸ್ಟಾರ್‍ ನಟರು ಅಭಿನಯಿಸಿದ್ದರು. ಅಜಯ್ ದೇವಗನ್, ರವಿನಾ ಟಂಡನ್ ಸೇರಿದಂತೆ ಹಲವು ಸ್ಟಾರ್‍ ನಟರು ನಟಿಸಿದ್ದರು. ಇದೀಗ ಕೆಜಿಎಫ್-3 ಸಿನೆಮಾದಲ್ಲಿ ಬಾಲಿವುಡ್ ಖ್ಯಾತ ನಟ ಹೃತಿಕ್ ರೋಷನ್ ಸಹ ಬಣ್ಣ ಹಚ್ಚಲಿದ್ದಾರೆ ಎಂಬ ರೂಮರ್‍ ಗಳು ಜೋರಾಗಿ ಹಬ್ಬಿದೆ.

ಇನ್ನೂ ಕೆಜಿಎಫ್-3 ಸಿನೆಮಾ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಈ ವರ್ಷದಲ್ಲಿ ಕೆಜಿಎಫ್-3 ಸಿನೆಮಾ ಶೂಟಿಂಗ್ ಪ್ರಾರಂಭವಾಗುವುದಿಲ್ಲ. ನಾವು ಈಗಾಗಲೇ ಕೆಲವೊಂದು ಯೋಜನೆಗಳನ್ನು ಹಾಕಿಕೊಂಡಿದ್ದೇವೆ. ಸದ್ಯ ಪ್ರಶಾಂತ್ ನೀಲ್ ಸಲಾರ್‍ ಸಿನೆಮಾ ಶೂಟಿಂಗ್ ನಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ಯಶ್ ರೊಂದಿಗೆ ತಮ್ಮ ಹೊಸ ಚಿತ್ರವನ್ನು ಸಹ ಘೋಷಣೆ ಮಾಡಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಕೆಜಿಎಫ್-3 ಸಿನೆಮಾ ಶೂಟಿಂಗ್ ಕೆಲಸಗಳನ್ನು ಪ್ರಾರಂಭಿಸಲು ಆಗುವುದಿಲ್ಲ ಎಂದ ಅವರು, ಕೆಜಿಎಫ್-3 ಸಿನೆಮಾ ಯಾವಗ ಪ್ರಾರಂಭ ಮಾಡಬೇಕು ಎಂಬುದರ ಬಗ್ಗೆ ನಮಗೆ ದಿನಾಂಕ ಅಥವಾ ಸಮಯ ನಿಗಧಿ ಮಾಡಬೇಕೆಂದು ಇಲ್ಲ ಎಂದು ಹೇಳಿದ್ದಾರೆ.

ಇನ್ನೂ ಕೆಜಿಎಫ್-3 ಸಿನೆಮಾದಲ್ಲಿ ಯಾರೆಲ್ಲ ನಟರು ಇರಲಿದ್ದಾರೆ ಎಂಬ ವಿಚಾರದ ಕುರಿತು ಸಹ ವಿಜಯ್ ತಿಳಿಸಿದ್ದು, ನಾವು ಕೆಜಿಎಫ್-3 ಸಿನೆಮಾದಲ್ಲಿ ಯಾವುದೇ ಪಾತ್ರಗಳ ಬಗ್ಗೆ ಚಿಂತನೆ ಮಾಡಿಲ್ಲ. ಜೊತೆಗೆ ಈ ಕುರಿತು ಯಾವುದೇ ನಿರ್ಧಾರಗಳನ್ನು ಸಹ ತೆಗೆದುಕೊಂಡಿಲ್ಲ. ಹೃತಿಕ್ ರೋಷನ್ ಆಗಲಿ ಅಥವಾ ಬೇರೆ ಯಾವುದೇ ಕಲಾವಿದರನ್ನು ಕೆಜಿಎಫ್-3 ಸಿನೆಮಾಗೆ ಮಾತುಕತೆ ನಡೆಸಿಲ್ಲ ಎಂದಿದ್ದಾರೆ. ಕೆಜಿಎಫ್-3 ಸಿನೆಮಾ ಘೋಷಣೆಯಾದ ಬಳಿಕವಷ್ಟೆ ಪಾತ್ರಗಳ ಬಗ್ಗೆ ಯೋಚನೆ ಮಾಡುತ್ತೇವೆ ಜೊತೆಗೆ ಅಧಿಕೃತವಾಗಿ ಪ್ರಕಟ ಸಹ ಮಾಡುತ್ತೇವೆ ಎಂದಿದ್ದಾರೆ.

Previous articleಕಡಲ ತೀರದಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡ ಸೋನಾರಿಕಾ…!
Next articleಲವ್ ಫೇಲ್ಯೂರ್ ಬಗ್ಗೆ ನಗು ನಗುತ್ತಾ ಉತ್ತರ ಕೊಟ್ಟ ರಕ್ಷಿತ್ ಶೆಟ್ಟಿ…