Film News

ಆಡಿಯೋ ಕ್ಲಿಪ್ ಲೀಕ್ ಮಾಡಿದ್ದು ನಾನಲ್ಲ, ತನಿಖೆಯಾಗಲಿ ಎಂದ ವಿಖ್ಯಾತ್!

ಬೆಂಗಳೂರು: ನವರಸನಾಯಕ ಜಗ್ಗೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವಿನ ಘರ್ಷಣೆ ತಾರಕ್ಕೇರಿದ್ದು, ಇದಕ್ಕೆ ಕಾರಣವಾದ ಆಡಿಯೋ ಕ್ಲಿಪ್ ಬಗ್ಗೆ ಇನ್ಸ್‌ಪೆಕ್ಟರ್ ವಿಕ್ರಂ ಸಿನೆಮಾದ ನಿರ್ಮಾಪಕ ವಿಖ್ಯಾತ್ ಸ್ಪಷ್ಟನೆ ನೀಡಿದ್ದಾರೆ.

ನಿರ್ಮಾಪಕ ವಿಖ್ಯಾಥ್ ಹಾಗೂ ಜಗ್ಗೇಶ್ ನಡುವಿನ ಆಡಿಯೋ ಸಂಭಾಷಣೆ ಲೀಕ್ ಆಗಿದ್ದು, ದರ್ಶನ್ ಅಭಿಮಾನಿಗಳಿಗೆ ಹಾಗೂ ನಟ ಜಗ್ಗೇಶ್ ನಡುವೆ ವಾಗ್ವಾದ ತಾರಕ್ಕೇರುತ್ತಿದೆ. ಎರಡು ದಿನಗಳ ಹಿಂದೆಯಷ್ಟೆ ಜಗ್ಗೇಶ್ ಶೂಟಿಂಗ್‌ನಲ್ಲಿದ್ದ ಸ್ಥಳಕ್ಕೆ ಹೋಗಿ ದರ್ಶನ್ ಅಭಿಮಾನಿಗಳು ಕ್ಷಮೆ ಕೋರುವಂತೆ ಒತ್ತಾಯ ಮಾಡಿದ್ದರು. ನಂತರ ಜಗ್ಗೇಶ್ ಸಾಮಾಜಿಕ ಜಾಲತಾಣಗಳ ಮೂಲಕ ಅಸಮಧಾನ ಹೊರಹಾಕಿದ್ದರು. ಆಡಿಯೋ ಕ್ಲಿಪ್ ನನ್ನದೇ ಅಲ್ಲ ಎಂದು ಜಗ್ಗೇಶ್ ಹೇಳಿದ್ದರು. ಇದಕ್ಕೆ ನಿರ್ಮಾಪಕ ವಿಖ್ಯಾತ್ ಸ್ಪಷ್ಟನೆ ನೀಡಿದ್ದಾರೆ.

ಕಳೆದೆರಡು ದಿನಗಳಿಂದ ಇಷ್ಟೊಂದು ಮಟ್ಟಿಗೆ ವಿವಾದ ನಡೆಯುತ್ತಿದ್ದರೂ ಸುಮ್ಮನಿದ್ದ ವಿಖ್ಯಾತ್ ಇದೀಗ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಪ್ರೆಸ್ ನೋಟ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ನನ್ನದೇ, ಆದರೆ ಆ ಆಡಿಯೋವನ್ನು ನಾನು ಲೀಕ್ ಮಾಡಿಲ್ಲ ಬೇಕಿದ್ದರೇ ತನಿಖೆಯಾಗಲಿ ಎಂದಿದ್ದಾರೆ. ಯಾರಿಂದ ಲೀಕ್ ಆಯ್ತು ಹೇಗೆ ಶೇರ್ ಆಯ್ತು ಎಂಬುದರ ಕುರಿತು ಸಂಪೂರ್ಣವಾಗಿ ತನಿಖೆಯಾಗಲಿ ಎಲ್ಲದಕ್ಕೂ ನನ್ನ ಸಂಪೂರ್ಣ ಸಹಕಾರವಿದೆ ಎಂದಿದ್ದಾರೆ.

ಇನ್ನೂ ಆಡಿಯೋ ಕ್ಲಿಪ್‌ನಲ್ಲಿರುವ ಮಾತುಗಳಿಗೆ ಜಗ್ಗೇಶ್ ರವರೇ ಜವಾಬ್ದಾರರಾಗಿರುತ್ತಾರೆ. ಜಗ್ಗೇಶ್ ರವರು ಟ್ವಿಟರ್ ನಲ್ಲಿ ನಾನು ಚಿತ್ರದ ಪ್ರಚಾರಕ್ಕಾಗಿ ಆಡಿಯೋ ಕ್ಲಿಪ್ ಬಳಸಿದ್ದೇನೆಂದು ಹೇಳಿಕೆ ನೀಡಿದ್ದಾರೆ. ಆ ಹೇಳಿಕೆಯನ್ನು ನಾನು ಅಲ್ಲಗೆಳೆಯುತ್ತೇನೆ. ಆಡಿಯೋ ಕ್ಲಿಪ್ ಬಳಸಿ ಪ್ರಚಾರ ಪಡೆಯುವಂತಹ ಕೀಳು ಮಟ್ಟದ ವ್ಯಕ್ತಿ ನಾನ್ನಲ್ಲ ಎಂದಿದ್ದಾರೆ.

Trending

To Top